ಸಾರಾಂಶ
ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವತಿಯಿಂದ ಸುಮಾರು ೪೦ ದಿನಗಳ ಕಾಲ ನಡೆಯುವ ೯ನೇ ವರ್ಷದ ನಗರ ಭಜನಾ ಮಹೋತ್ಸವಕ್ಕೆ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಮೊದಲ ದಿನ ಸರಪಾಡಿ ಅಗ್ರಹಾರ ಬೀದಿಯ ಸುತ್ತಮುತ್ತಲ ಪ್ರದೇಶದ ಮನೆಗಳಿಗೆ ತೆರಳಿ ಭಜನೆ ನಡೆಸಲಾಯಿತು. ಅರ್ಚಕ ಜಯರಾಮ ಕಾರಂತ, ಮಣಿನಾಲ್ಕೂರು ಸಿಎ ಬ್ಯಾಂಕ್ ಅಧ್ಯಕ್ಷ ರಾಧಾಕೃಷ್ಣ ಮಯ್ಯ ಕೈಯೊಟ್ಟು, ವಿವಿಧ ಸಮಿತಿಗಳ ಪ್ರಮುಖರಾದ ಕುಸುಮಾಕರ ಶೆಟ್ಟಿ ಕುರ್ಯಾಳ, ಉಮೇಶ್ ಆಳ್ವ ಕೊಟ್ಟುಂಜ, ವಿಠಲ್ ಎಂ.ಆರುಮುಡಿ, ಗಿರಿಧರ ಎಸ್.ಮಠದಬೆಟ್ಟು, ರಾಧಾಕೃಷ್ಣ ಶೆಟ್ಟಿ ಕಲ್ಕೊಟ್ಟೆ, ರಾಧಾಕೃಷ್ಣ ರೈ ಕೊಟ್ಟುಂಜ, ಚೇತನ್ ಅಮೀನ್ ಬಜ, ಸಂತೋಷ್ ಶೆಟ್ಟಿ ಪಡ್ಡಾಯಿಬೆಟ್ಟು, ಎಸ್.ಪಿ. ಸರಪಾಡಿ, ಪ್ರಕಾಶ್ಚಂದ್ರ ಆಳ್ವ ಪಡ್ಡಾಯಿಬೆಟ್ಟು, ಲಕ್ಷ್ಮೀನಾರಾಯಣ, ಹರೀಶ್ ಶೆಟ್ಟಿ ಪಡ್ಡಾಯಿಬೆಟ್ಟು, ವಚನ್ ಅಮೀನ್ ಬಜ, ಯೋಗೀಶ್ ಗೌಡ ನೀರೊಲ್ಬೆ, ದೇಜಪ್ಪ ಪೂಜಾರಿ ಹೊಸಮನೆ, ಯೋಗೀಶ್ ನೀರಪಲ್ಕೆ ಮೊದಲಾದವರಿದ್ದರು.