ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 41.84 ಲಕ್ಷ ರು. ನಿವ್ವಳ ಲಾಭ

| Published : Sep 07 2024, 01:40 AM IST

ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 41.84 ಲಕ್ಷ ರು. ನಿವ್ವಳ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿಗೆ 41.84 ಲಕ್ಷ ರು. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.11ರಷ್ಟು ಡಿವಿಡೆಂಡ್ ನೀಡಲು ಮಹಾಸಭೆಯ ಒಪ್ಪಿಗೆಗೆ ಮಂಡಿಸಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿಗೆ 41.84 ಲಕ್ಷ ರು. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.11ರಷ್ಟು ಡಿವಿಡೆಂಡ್ ನೀಡಲು ಮಹಾಸಭೆಯ ಒಪ್ಪಿಗೆಗೆ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಂದ್ರೀರ ಎನ್.ತೇಜಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಬಿಳಿಗೇರಿ, ಹಾಕತ್ತೂರು, ಕಗ್ಗೋಡ್ಲು ಮತ್ತು ಮೇಕೇರಿ ಗ್ರಾಮಗಳ ವ್ಯಾಪ್ತಿ ಹೊಂದಿದ್ದು, 1333 ಸದಸ್ಯರನ್ನು ಒಳಗೊಂಡು 1.69 ಕೋಟಿ ರು. ಪಾಲು ಬಂಡವಾಳ ಹಾಗೂ 1.87 ಕೋಟಿ ರು. ಕ್ಷೇಮ ನಿಧಿಯನ್ನು, 1.03 ಕೋಟಿ ರು. ಇತರೆ ನಿಧಿಯನ್ನು, 14.02 ಕೋಟಿ ರು. ಠೇವಣಿಯನ್ನು ಸಂಗ್ರಹಿಸಿದೆ ಎಂದರು.

ಸಂಘದ ವತಿಯಿಂದ ಸದಸ್ಯರಿಗೆ ವಿವಿಧ ರೀತಿಯ ಸಾಲವನ್ನು ವಿತರಿಸಲಾಗಿದ್ದು, 2023-24ನೇ ಸಾಲಿಗೆ ಕೆ.ಸಿ.ಸಿ.ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಚಿನ್ನಾಭರಣ ಸಾಲ ಹಾಗೂ ಸ್ವಸಹಾಯ ಸಾಲ ಸೇರಿದಂತೆ ಒಟ್ಟು 17.41 ಕೋಟಿ ರು.ನಷ್ಟು ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ. ಈ ಪೈಕಿ ಸಂಘದ ಸ್ವಂತ ಬಂಡವಾಳದಿಂದ ಸುಮಾರು 11.15 ಕೋಟಿ ರು. ಸಾಲವನ್ನು ನೀಡಲಾಗಿದ್ದು, 2023-24ನೇ ಸಾಲಿಗೆ ಶೇ.98ರಷ್ಟು ಸಾಲ ವಸೂಲಿಯಾಗಿದೆ ಎಂದು ಮಂದೀರ ಎನ್.ತೇಜಸ್ ಹೇಳಿದರು.

ಸಂಘವು 2023-24ನೇ ಸಾಲಿಗೆ 329.37 ಲಕ್ಷ ರು. ವ್ಯಾಪಾರ ವಾಹಿವಾಟು ನಡೆಸಿ 17.16 ಲಕ್ಷ ಲಾಭಗಳಿಸಿದೆ. ಮೇಕೇರಿ ಶಾಖೆಯ ಐದು ಅಂಗಡಿ ಮಳಿಗೆಯನ್ನು ಬಾಡಿಗೆಗೆ ನೀಡಿದೆ. ಅಲ್ಲದೆ ಎಸ್ಎಸ್ಎಲ್‌ಸಿ, ದ್ವಿತೀಯ ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತೀ ವರ್ಷವು ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ವ್ಯವಸ್ಥಾಪಕ ತೀರ್ಥಕುಮಾರ್ ಮಾತನಾಡಿ, ಸಂಘವು ಹಾಕತ್ತೂರು ಮತ್ತು ಮೇಕೇರಿಯಲ್ಲಿ ಗೋದಾಮು ಹೊಂದಿದ್ದು, ರಸಗೊಬ್ಬರ ಹತ್ಯಾರು ನಿಯಂತ್ರಿತ ವಸ್ತುಗಳನ್ನು ಹಾಗೂ ಮದ್ದುಗುಂಡುಗಳನ್ನು ಮಾರಾಟ ಮಾಡುತ್ತಿದೆ. ಅಲ್ಲದೇ ರೈತರಿಗೆ ಅನುಕೂಲವಾಗುವಂತೆ ನೂತನವಾಗಿ ಮಣ್ಣು ಪರೀಕ್ಷಾ ಯಂತ್ರವನ್ನು ಹಾಗೂ ಕಾಫಿ ಔಟರ್ನ್ ಯಂತ್ರ ಅಳವಸಲಾಗಿದೆ. ಜೊತೆಗೆ ಸರ್ಕಾರದ ನಿರ್ದೇಶನದಂತೆ ಪಯಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಹಾಗೂ ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಮಂಞರ ಕೆ.ಉಮೇಶ್ ಮಾತನಾಡಿ, 2023-24ನೇ ವಾರ್ಷಿಕ ಮಹಾಸಭೆಯು ಸೆ.9 ರಂದು ಬೆಳಗ್ಗೆ 10.30 ಗಂಟೆಗೆ ಸಂಘದ ಅಧ್ಯಕ್ಷ ಮಂಡ್ತೀರ ಎನ್.ತೇಜಸ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಲಿದ್ದು, ಸಂಘದ ಎಲ್ಲಾ ಸದಸ್ಯರು ಹಾಜರಾಗುವಂತೆ ಮನವಿ ಮಾಡಿದರು.

ಸಂಘದ ನಿರ್ದೇಶಕರಾದ ಪರ್ಲಕೋಟಿ ಎ.ಕಾವೇರಪ್ಪ (ಕಾಂತ), ತುಂತಜ್ಜಿರ ಆರ್.ತಿಮ್ಮಯ್ಯ ಹಾಗೂ ಚೋಂಡಿರ ಜಿ.ಚಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.