44ನೇ ರಾಜ್ಯ ನಾಟಕ ಸ್ಪರ್ಧೆ: ಬೆಂಗಳೂರು ರಂಗಾಸ್ಥೆ ಪ್ರಥಮ

| Published : Dec 05 2023, 01:30 AM IST

44ನೇ ರಾಜ್ಯ ನಾಟಕ ಸ್ಪರ್ಧೆ: ಬೆಂಗಳೂರು ರಂಗಾಸ್ಥೆ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ರಂಗಭೂಮಿ ವತಿಯಿಂದ ನಡೆದ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ-2023ರಲ್ಲಿ ಬೆಂಗಳೂರಿನ ರಂಗಾಸ್ಥೆ ಟ್ರಸ್ಟ್ ತಂಡದ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರಥಮ ಬಹುಮಾನ, 35,000 ರು. ನಗದು ಗೆದ್ದುಕೊಂಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ರಂಗಭೂಮಿ ವತಿಯಿಂದ ನಡೆದ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ-2023ರಲ್ಲಿ ಬೆಂಗಳೂರಿನ ರಂಗಾಸ್ಥೆ ಟ್ರಸ್ಟ್ ತಂಡದ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರಥಮ ಬಹುಮಾನ, 35,000 ರು. ನಗದು ಗೆದ್ದುಕೊಂಡಿದೆ.

ಬೆಂಗಳೂರಿನ ರಂಗರಥ ತಂಡದ ‘ಕ್ರೌಂಚಗೀತಾ’ ದ್ವಿತೀಯ ಬಹುಮಾನ ಮತ್ತು 25 ಸಾವಿರ ರು. ನಗದು, ಬೆಂಗಳೂರಿನ ರಂಗಪಯಣದ ತಂಡದ ‘ಚಂದ್ರಗಿರಿ ತೀರದಲ್ಲಿ’ ನಾಟಕವು ತೃತೀಯ ಬಹುಮಾನ ಮತ್ತು 15,000 ರು. ನಗದು ಬಹುಮಾನ ಪಡೆದಿವೆ.

ಶ್ರೇಷ್ಠ ನಿರ್ದೇಶಕ ಪ್ರಥಮ- ದ್ರೋಪತಿ ಹೇಳ್ತವ್ಳೆ ನಾಟಕದ ನಿರ್ದೇಶಕ ಗಣೇಶ್ ಮಂದಾರ್ತಿ, ದ್ವಿತೀಯ- ಕ್ರೌಂಚಗೀತಾ ನಾಟಕದ ನಿರ್ದೇಶಕ ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್, ತೃತೀಯ- ಚಂದ್ರಗಿರಿ ತೀರದಲ್ಲಿ ನಾಟಕದ ನಿರ್ದೇಶಕಿ ನಯನಾ ಜೆ. ಸೂಡ ಗೆದ್ದುಕೊಂಡಿದ್ದಾರೆ.

ಶ್ರೇಷ್ಠ ನಟ ಪ್ರಥಮ- ಬೆಂಗಳೂರು ವಿವಿಯ ಕಲಾಮೈತ್ರಿ ತಂಡದ ಮಂಟೇಸ್ವಾಮಿ ಕಥಾಪ್ರಸಂಗ ನಾಟಕದ ಗೋಪಾಲಕೃಷ್ಣಪ್ಪ ಎನ್., ದ್ವಿತೀಯ- ಸಮುದಾಯ ಧಾರವಾಡ ತಂಡದ ದೇವರ ಹೆಣ ನಾಟಕದ ಜೋಸೆಫ್ ಮಲ್ಲಾಡಿ, ತೃತೀಯ- ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕದ ಕೆ.ಶಂಕರ್ ಪಡೆದುಕೊಂಡಿದ್ದಾರೆ.

ಶ್ರೇಷ್ಠ ನಟಿ ಪ್ರಥಮ- ದ್ರೋಪತಿ ಹೇಳ್ತವ್ಳೆ ನಾಟಕದ ವೈಷ್ಣವಿ ಶ್ರೀಕಾಂತ್ ಚಕ್ರಪಾಣಿ, ದ್ವಿತೀಯ- ಕ್ರೌಂಚಗೀತಾ ನಾಟಕದ ಶ್ವೇತಾ ಎಸ್., ತೃತೀಯ- ಚಂದ್ರಗಿರಿ ತೀರದಲ್ಲಿ ನಾಟಕದ ಚೇತನಾ ಪ್ರಸಾದ್ ಅವರಿಹೆ ಲಭಿಸಿದೆ.

ಶ್ರೇಷ್ಠ ಸಂಗೀತ ಪ್ರಥಮ- ಕ್ರೌಂಚಗೀತಾ, ದ್ವಿತೀಯ ದ್ರೋಪತಿ ಹೇಳ್ತವ್ಳೆ, ತೃತೀಯ- ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕಗಳು ಗೆದ್ದುಕೊಂಡಿವೆ.

ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ ಪ್ರಥಮ- ದ್ರೋಪತಿ ಹೇಳ್ತವ್ಳೆ, ದ್ವಿತೀಯ - ಕ್ರೌಂಚಗೀತಾ, ತೃತೀಯ - ದೇವರ ಹೆಣ ನಾಟಕಗಳು ಪಡೆದಿವೆ.

ಶ್ರೇಷ್ಠ ಹಾಸ್ಯ ನಟನೆಗೆ ವಿಜಯನಗರದ ಅಕ್ಷರ ಜ್ಞಾನ ಕಲಾ ಸಂಘದ ಬೆಪ್ಪ ತಕ್ಕಡಿ ಬೋಳೇಶಂಕರ ನಾಟಕದ ಮಂಜು ತಳವಾರ ಅವರು ಆಯ್ಕೆಯಾಗಿದ್ದಾರೆ. ಶ್ರೇಷ್ಠ ಬಾಲ ನಟನೆಗೆ ಚಂದ್ರಗಿರಿ ತೀರದಲ್ಲಿ ನಾಟಕದ ಪರೀಕ್ಷಿತ್ ಮತ್ತು ಪ್ರಣಮ್ಯಾ ಅವರನ್ನು ಆಯ್ಕೆ ಮಾಡಲಾಗಿದೆ.

ಬಹುಮಾನ ವಿತರಣೆ- ರಂಗೋತ್ಸವ:

ಈ ನಾಟಕ ಸ್ಪರ್ಧೆಯ ಬಹುಮಾನ ಪ್ರಧಾನ ಸಮಾರಂಭ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜ.4ನೇ ವಾರದಲ್ಲಿ ‘ರಂಗಭೂಮಿ ರಂಗೋತ್ಸವ’ ಉಡುಪಿಯಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ರಂಗಾಸ್ಥೆ ಟ್ರಸ್ಟ್ ತಂಡದ ‘ದ್ರೋಪತಿ ಹೇಳ್ತವ್ಳೆ’ ನಾಟಕದ ಮರು ಪ್ರದರ್ಶನ ಇರುವುದು ಎಂದು ರಂಗಭೂಮಿಯ ಪ್ರಕಟಣೆ ತಿಳಿಸಿದೆ.