ಕಪಿಲ ನದಿಯ ದಡದಲ್ಲಿನ ಬಹುಗ್ರಾಮ ಯೋಜನೆಯ ಜಾಕ್‌ವೆಲ್‌, ನೀರು ಶುದ್ಧೀಕರಣ ಘಟಕಗಳು ಭಾಗಶಃ ಮುಳುಗಡೆಯಾಗಿದ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನ 145 ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಬಿನಿ ನದಿಯಿಂದ ಸರಬರಾಜುತ್ತಿದ್ದ ನೀರು ಇನ್ನೂ ಒಂದೂವರೆ ತಿಂಗಳು ಬರುವುದಿಲ್ಲ.

 ಗುಂಡ್ಲುಪೇಟೆ : ಕೇರಳದ ವೈನಾಡಲ್ಲಿ ಮಳೆಯಾಗುತ್ತಿರುವುದಿರಿಂದ ಕಬಿನಿ ಡ್ಯಾಂನಿಂದ 70 ರಿಂದ 80 ಸಾವಿರ ಕ್ಯುಸೆಕ್ಸ್‌ ನೀರು ಹೊರ ಬಿಡಲಾಗಿದೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಕಪಿಲ ನದಿಯ ದಡದಲ್ಲಿನ ಬಹುಗ್ರಾಮ ಯೋಜನೆಯ ಜಾಕ್‌ವೆಲ್‌, ನೀರು ಶುದ್ಧೀಕರಣ ಘಟಕಗಳು ಭಾಗಶಃ ಮುಳುಗಡೆಯಾಗಿದ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನ 145 ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಬಿನಿ ನದಿಯಿಂದ ಸರಬರಾಜುತ್ತಿದ್ದ ನೀರು ಇನ್ನೂ ಒಂದೂವರೆ ತಿಂಗಳು ಬರುವುದಿಲ್ಲ.

ತಾಲೂಕಿನ 145 ಹಳ್ಳಿಗಳ ಗ್ರಾಮದಲ್ಲಿನ ಬೋರ್‌ವೆಲ್‌ ಉಪಯೋಗಿಸಿಕೊಂಡು ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ ತಿಳಿಸಿದ್ದಾರೆ.

ಗುಂಡ್ಲುಪೇಟೆಗೂ ಸಿಗಲ್ಲ ಕಬಿನಿ ನೀರು:

ತಾಲೂಕಿನ 145 ಹಳ್ಳಿಗಳಿಗೆ ಸರಬರಾಜುತ್ತಿದ್ದ ಬಹುಗ್ರಾಮ ಯೋಜನೆಯ ಕುಡಿಯುವ ನೀರು ಸ್ಥಗಿತಗೊಂಡಿದೆ. ಪಟ್ಟಣ ಸೇರಿ 30 ಕ್ಕೂ ಹೆಚ್ಚು ಹಳ್ಳಿಗಳಿಗೂ ಕಬಿನ ನೀರು ಸಿಗುವುದಿಲ್ಲ.

ಬಹುಗ್ರಾಮ ಯೋಜನೆಯ ಜಾಕ್‌ ವೆಲ್‌, ನೀರು ಶುದ್ದೀಕರಣ ಘಟಕ ಮುಳುಗಡೆ ಆಗಿವೆ. ಆದರೆ ಕಬಿನಿ ಕುಡಿವ ನೀರು ಸರಬರಾಜು ಮಾಡುವ ನಂಜನಗೂಡು ತಾಲೂಕಿನ ದೇಬೂರಿನ ಜಾಕ್‌ ವೆಲ್‌, ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ಗಳು ಮುಳುಗಿವೆ. ದೇಬೂರಿನ ಕಬಿನಿ ನೀರು ಜಾಕ್‌ವೆಲ್‌ ಮುಳುಗಡೆಯಿಂದ ಕಬಿನಿ ನೀರು ನಿಂತಿದೆ. ಆದರೆ ಕಳೆದ ಹದಿನೈದು ದಿನಗಳಿಂದಲೂ ಗುಂಡ್ಲುಪೇಟೆ ಸೇರಿದಂತೆ ಕಬಿನಿ ನೀರಿನ ಸಂಪರ್ಕ ಪಡೆದ ಹಳ್ಳಿಗೆ ನೀರು ಬರುತ್ತಿಲ್ಲ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.