ನಿವೃತ್ತ ಶಿಕ್ಷಕ ನಾಗಯ್ಯ ಮತ್ತು ಅವರ ಪತ್ನಿ ಮಂಜುಳಾ ದೂರು

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣಮಾಲೀಕರ ಮನೆಯಲ್ಲೇ 45 ಗ್ರಾಂ ಚಿನ್ನ ಕಳ್ಳತನ ಮಾಡಿದ್ದ ಬಾಡಿಗೆದಾರ ದಂಪತಿಯನ್ನು ಬೈಲಕುಪ್ಪೆ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಆವರ್ತಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು, ಆರೋಪಿಗಳು 45 ಗ್ರಾಂ ಚಿನ್ನ ಕದ್ದು, ಮೈಸೂರಿನ ಆರ್ಟಿಕ ಗೋಲ್ಡ್ ಫೈನೆನ್ಸ್ ಗೆ ಮಾರಾಟ ಮಾಡಿ, 6.80 ಲಕ್ಷ ರು.ವನ್ನು ಬಚ್ಚಿಟ್ಟಿದ್ದ ದಂಪತಿಯಿಂದ ಪೊಲೀಸರ ವಶಕ್ಕೆ ಪಡೆದಿದ್ದಾರೆ.ಜೂ. 21ರಂದು ಬೈಲುಕುಪ್ಪೆ ಪೊಲೀಸ್ ಠಾಣೆಗೆ ಆವರ್ತಿ ಗ್ರಾಮದ ನಿವೃತ್ತ ಶಿಕ್ಷಕ ನಾಗಯ್ಯ ಮತ್ತು ಅವರ ಪತ್ನಿ ಮಂಜುಳಾ ದೂರು ನೀಡಿದ್ದು, ನಾವು ಜೂ. 13 ರಂದು ಮಗಳ ಮನೆಗೆ ಮೈಸೂರಿಗೆ ಹೋಗಿದ್ದು, ಜೂ. 16 ರಂದು ಅವತ್ತಿ ಗ್ರಾಮಕ್ಕೆ ಬಂದಿದ್ದು, ನಾವು ಈ ದಿನ ಮನೆಯ ಬೀರುವಿನಲ್ಲಿಟ್ಟಿದ ಚಿನ್ನದ ಸರ, ಓಲೆ ಮತ್ತು ಉಂಗುರ ಒಡವೆಯನ್ನು ನೋಡಲಾಗಿ 45 ಗ್ರಾಂ ಚಿನ್ನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು.ಈ ಸಂಬಂಧ ಬೈಲುಕುಪ್ಪೆ ಪೊಲೀಸ್, ಡಿವೈಎಸ್ಪಿ ರವಿ, ಸಿಪಿಐ ದೀಪಕ್, ಪಿಎಸ್ಐ ರವಿಕುಮಾರ್ ರವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಎಸ್ಐ ರವಿ, ಮುದ್ದುರಾಜ್, ರುದ್ರೇಶ, ಪ್ರಸನ್ನ, ಸುರೇಶ್, ರವಿಕುಮಾರ್ ಮತ್ತು ಸುನಿತಾ ಸಿಬ್ಬಂದಿಯ ತಂಡವು ನಿವೃತ್ತ ಶಿಕ್ಷಕ ನಾಗಯ್ಯ ಅವರು ಮನೆಯ ಬಾಡಿಗೆದಾರರಾದ ಮಂಜುನಾಥ ಮತ್ತು ಆತನ ಪತ್ನಿ ನಯನ ಅವರನ್ನು ದಸ್ತಗಿರಿ ಮಾಡಿದ್ದಾರೆ, ಮನೆಯಲ್ಲಿ ಯಾರು ಇಲ್ಲ ಸಮಯದಲ್ಲಿ ಕಳ್ಳತನ ಮಾಡಿದ್ದರು.ಆರೋಪಿಗಳ ವಿರುದ್ದ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.