ಬೆಸ್ಕಾಂ ನಿರ್ಲಕ್ಷ್ಯದಿಂದ ಕಳೆದ 5 ತಿಂಗಳಲ್ಲಿ 46 ಮಂದಿ ಸಾವು

| Published : Mar 21 2024, 01:49 AM IST / Updated: Mar 21 2024, 09:07 AM IST

ಸಾರಾಂಶ

ಬೆಂಗಳೂರಿನ ವೈಟ್‌ಫೀಲ್ಡ್‌ ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಮಗು ಸಜೀವ ದಹನವಾದ ಬಳಿಕವೂ ಬೆಸ್ಕಾಂ ಎಚ್ಚೆತ್ತುಕೊಂಡಿಲ್ಲ. ಬೆಸ್ಕಾಂ ನಿರ್ಲಕ್ಷ್ಯದಿಂದ ವೈಟ್‌ಫೀಲ್ಡ್ ಘಟನೆ ಬಳಿಕ ಕಳೆದ ಐದು ತಿಂಗಳಲ್ಲಿ ಮತ್ತೆ 46 ಮಂದಿ ಬಲಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನ ವೈಟ್‌ಫೀಲ್ಡ್‌ ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಮಗು ಸಜೀವ ದಹನವಾದ ಬಳಿಕವೂ ಬೆಸ್ಕಾಂ ಎಚ್ಚೆತ್ತುಕೊಂಡಿಲ್ಲ. ಬೆಸ್ಕಾಂ ನಿರ್ಲಕ್ಷ್ಯದಿಂದ ವೈಟ್‌ಫೀಲ್ಡ್ ಘಟನೆ ಬಳಿಕ ಕಳೆದ ಐದು ತಿಂಗಳಲ್ಲಿ ಮತ್ತೆ 46 ಮಂದಿ ಬಲಿಯಾಗಿದ್ದಾರೆ.

ಹೀಗಾಗಿ ತಡವಾಗಿ ಎಚ್ಚೆತ್ತುಕೊಂಡಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬಿಳಗಿ, ‘ಇಂತಹ ಅಪಾಯಗಳಿಗೆ ಕಾರಣವಾಗಬಲ್ಲ ಬ್ಲಾಕ್‌ ಸ್ಪಾಟ್‌ಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 

ಮಾ.31ರೊಳಗಾಗಿ ಎಲ್ಲವೂ ಸರಿಪಡಿಸಬೇಕು. ಬೆಸ್ಕಾಂ ನಿರ್ಲಕ್ಷ್ಯದಿಂದ ಯಾವುದಾದರೂ ಅವಘಡ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಹೇಳಿದ್ದಾರೆ.

ನವೆಂಬರ್‌ 20ರಂದು ವೈಟ್‌ಫೀಲ್ಡ್‌ನಲ್ಲಿ ಪಾದಚಾರಿ ಮಾರ್ಗದಲ್ಲಿ ಚಾರ್ಜ್‌ ಆಗಿರುವ ತಂತಿ ಬಿದ್ದಿದ್ದ ಪರಿಣಾಮ ತಾಯಿ ಹಾಗೂ ಮಗು ಸುಟ್ಟು ಕರಕಲಾಗಿದ್ದರು. ಇದಾದ ಬಳಿಕ 46 ಮಂದಿ ಸಾವನ್ನಪ್ಪಿದ್ದಾರೆ. 

ನವೆಂಬರ್‌ನಲ್ಲಿ 8, ಡಿಸೆಂಬರ್‌ನಲ್ಲಿ 15, ಜನವರಿಯಲ್ಲಿ 9, ಫೆಬ್ರುವರಿ 12 ಹಾಗೂ ಮಾರ್ಚ್‌ ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಇಂತಹ ಬ್ಲಾಕ್‌ ಸ್ಪಾಟ್‌ಗಳನ್ನು ಪತ್ತೆ ಹಚ್ಚಿ ಸರಿಪಡಿಸುವಂತೆ ನಿರ್ದೇಶನ ನೀಡಲಾಗಿದೆ.