ಹೊಳೆಹೊಸೂರಿನಲ್ಲಿ 46ನೇ ಹನುಮ ಜಯಂತಿ ಸಂಭ್ರಮ

| Published : Apr 13 2025, 02:02 AM IST

ಸಾರಾಂಶ

ಬೈಲಹೊಂಗಲ ತಾಲೂಕಿನ ಹೊಳೆಹೊಸೂರ ಗ್ರಾಮದಲ್ಲಿ 46ನೇ ಹನುಮ ಜಯಂತಿ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೈಲಹೊಂಗಲ ತಾಲೂಕಿನ ಹೊಳೆಹೊಸೂರ ಗ್ರಾಮದಲ್ಲಿ 46ನೇ ಹನುಮ ಜಯಂತಿ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಹಿರಿಯ ಅರ್ಚಕರಾದ ಹನಮಂತ ಆಚಾರ್ಯ ಬೆಂಡಿಗೇರಿ ನೇತೃತ್ವದಲ್ಲಿ ಪ್ರಾಣದೇವರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಪಲ್ಲಕ್ಕಿ ಉತ್ಸವ ಜರುಗಿದವು. ಮುತ್ತೈದೆಯರಿಂದ ತೊಟ್ಟಿಲೋತ್ಸವ ಸೇರಿದಂತೆ ಆರತಿ ಪೂಜಾ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಸೀಮಿಹನುಮಂತ ದೇವರ ದೇವಸ್ಥಾನದಲ್ಲಿ ಮಹಾಪ್ರಸಾದ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಡಾ.ದೃವರಾಜ ಕುಲಕರ್ಣಿ, ಅರುಣ ಕುಲಕರ್ಣಿ, ರಾಘವೇಂದ್ರ ಜಮನಿಸ್‌, ರಮೇಶ ಪಾಗಾದ, ಸುರೇಶ ಪಾಗಾದ, ಗಿರೀಶ ಕಮತ, ವಿಟಿಯು ವಿಶೇಷಾಧಿಕಾರಿ ಡಾ.ಹರೀಶ ಬೆಂಡಿಗೇರಿ, ರಮೇಶ ಬೆಂಡಿಗೇರಿ, ಅನಂತ ಪಾಗಾದ, ವೆಂಕಟೇಶ ಪಾಗಾದ, ರಾಮಚಂದ್ರ ಕಿತ್ತೂರ ಸೇರಿದಂತೆ ಮಹಿಳೆಯರು, ಗ್ರಾಮಸ್ಥರು ಭಾಗವಹಿಸಿದ್ದರು.