ಸಾರಾಂಶ
ಅರಬಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 47.52 ಲಕ್ಷ ಲಾಭ ಗಳಿಸಿ ಪ್ರಗತಿಯತ್ತ ಸಾಗುತ್ತಿದೆ. ಸದಸ್ಯರಿಗೆ ಶೇ.10ರಷ್ಟು ಲಾಭಾಂಶ ವಿತರಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಮುತ್ತೆಪ್ಪ ಝಲ್ಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಘಟಪ್ರಭಾ
ಅರಬಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ₹47.52 ಲಕ್ಷ ಲಾಭ ಗಳಿಸಿ ಪ್ರಗತಿಯತ್ತ ಸಾಗುತ್ತಿದೆ. ಸದಸ್ಯರಿಗೆ ಶೇ.10ರಷ್ಟು ಲಾಭಾಂಶ ವಿತರಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಮುತ್ತೆಪ್ಪ ಝಲ್ಲಿ ಹೇಳಿದರು.ಸಮೀಪದ ಅರಬಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 48ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ಅ ವರ್ಗದಲ್ಲಿ ಪ್ರಗತಿ ಸಾಧಿಸಿದೆ. ಸಂಘದ ಪ್ರಗತಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಸಂಘದ ಏಳ್ಗೆಗೆ ದುಡಿಯಬೇಕೆಂದು ಸಲಹೆ ನೀಡಿದರು.
ಸಂಘದ ಉಪಾಧ್ಯಕ್ಷ ಲಕ್ಷ್ಮಣ ಜೋನಿ, ಆಡಳಿತ ಮಂಡಳಿ ಸದಸ್ಯರಾದ ಉದ್ದಪ್ಪ ದುರದುಂಡಿ, ಲಕ್ಷ್ಮಣ ಶಿಂಗೋಟಿ, ಹಣಮಂತ ಚಿಪ್ಪಲಕಟ್ಟಿ, ಲಗಮಪ್ಪ ಪೂಜೇರಿ, ಯಲ್ಲಪ್ಪ ಸತ್ತಿಗೇರಿ, ಬಾಗೀರಥಿ ಚಿಗರಿತೋಟ, ಸಾಂವಕ್ಕ ಅಂತರಗಟ್ಟಿ, ಕೃಷ್ಣಾ ಬಂಡಿವಡ್ಡರ, ಹಣಮಂತ ಪೂಜೇರಿ, ಲಕ್ಷ್ಮಣ ಮಾಳ್ಯಾಗೋಳ, ಡಿಸಿಸಿ ಬ್ಯಾಂಕಿನ ಪ್ರತಿನಿಧಿ ದುಂಡಪ್ಪ ಅರಭಾಂವಿ ಇದ್ದರು.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದುರದುಂಡೆಪ್ಪ ಸಂಸುದ್ದಿ ವರದಿ ವಾಚಿಸಿ, ಸ್ವಾಗತಿಸಿದರು.
ಸಿಬ್ಬಂದಿ ಲಕ್ಷ್ಮಣ ಝಲ್ಲಿ, ಸಿದ್ದಪ್ಪ ಮಾಳಿ, ಪರಶುರಾಮ ಹಳ್ಳೂರ, ಪ್ರಭಾಕರ ದಾನೋಳ್ಳಿ, ಸಂಜೀವ ಭಜಂತ್ರಿ, ಯಲ್ಲಪ್ಪ ಗೋಟೂರ, ಶಿವಲಿಂಗಪ್ಪ ಕಡಗದ, ಸಂತೋಷ ಜೋನಿ, ಭೀಮಪ್ಪ ಕಾಶವ್ವಗೋಳ, ರಾಮಪ್ಪ ಪೂಜೇರಿ, ಅಪ್ಪಯ್ಯ ಗಣೇಶವಾಡಿ, ಸುರೇಶ ವ್ಯಾಪಾರಿ, ಮುತ್ತೆಪ್ಪ ತಳವಾರ, ಅಂದಾನೆಪ್ಪ ಕಡಗದ, ಮಲ್ಲಿಕಾರ್ಜುನ ಕೋಳಿ ಇದ್ದರು