ಪರವಾನಿಗೆ ಇಲ್ಲದೆ ಶೇಖರಣೆ ಮಾಡಿದ್ದ 49.6 ಟನ್ ರಸಗೂಬ್ಬರ ಜಪ್ತಿ

| Published : Oct 04 2025, 12:00 AM IST

ಪರವಾನಿಗೆ ಇಲ್ಲದೆ ಶೇಖರಣೆ ಮಾಡಿದ್ದ 49.6 ಟನ್ ರಸಗೂಬ್ಬರ ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಷುಗರ್ ಟೌನ್‌ನ ಗೋಡೌನ್‌ನಲ್ಲಿ ಪರವಾನಗಿ ಇಲ್ಲದೆ ಶೇಖರಣೆ ಮಾಡಿದ್ದ 49.6 ಟನ್ ರಸಗೊಬ್ಬರವನ್ನು ಕೃಷಿ ಅಧಿಕಾರಿಗಳು ದಾಳಿ ಮಾಡಿ ಜಪ್ತಿ ಮಾಡಿದ್ದಾರೆ.

ಮಂಡ್ಯ:

ನಗರದ ಷುಗರ್ ಟೌನ್‌ನ ಗೋಡೌನ್‌ನಲ್ಲಿ ಪರವಾನಗಿ ಇಲ್ಲದೆ ಶೇಖರಣೆ ಮಾಡಿದ್ದ 49.6 ಟನ್ ರಸಗೊಬ್ಬರವನ್ನು ಕೃಷಿ ಅಧಿಕಾರಿಗಳು ದಾಳಿ ಮಾಡಿ ಜಪ್ತಿ ಮಾಡಿದ್ದಾರೆ.

ಬೆಂಗಳೂರು ಜಾಗೃತ ಕೋಶದ ಅಪರ ನಿರ್ದೇಶಕ ದೇವರಾಜು, ಮೈಸೂರು ಉಪ ವಿಭಾಗದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಉಪ ಕೃಷಿ ನಿರ್ದೇಶಕಿ ಮಮತ ಎಚ್.ಎನ್. ಮತ್ತು ಸಹಾಯಕ ಕೃಷಿ ನಿರ್ದೇಶಕರಾದ ಯಾದವ ಬಾಬು, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುನೀತ, ಜಿಲ್ಲಾ ರಸಗೊಬ್ಬರ ಪರಿವೀಕ್ಷಕ ಚನ್ನಕೇಶವಮೂರ್ತಿ ಎಚ್ (ಜಾರಿದಳ) ಅವರು ರಸಗೊಬ್ಬರ ಗೋದಾಮಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

ಈ ವೇಳೆ ಎಂ/ಎಸ್ ಗುಜರಾತ ರಾಜ್ಯದ ವಡೋದರಾ ಜಿಲ್ಲೆಯ ಫರ್ಟಿಲೈಜ್ ನಗರ ಮ್ಯಾನಿಫ್ಯಾಕ್ಟರಿಂಗ್ ಮತ್ತು ಮಾರ್ಕೇಟೆಂಡ್ ನ ನಂ.ಪಿ.ಓ.3917, ಫರ್ಟಿಲೇಜರ್ಸ್ ಮತ್ತು ಕೆಮಿಕಲ್ ಲಿಮಿಟೆಂಡ್ (GSFC) ಸಂಸ್ಥೆಗೆ ಸೇರಿದ ಪರವಾನಿಗೆ ಇಲ್ಲದ ರಸಗೊಬ್ಬರ (ಬಯೋಸ್ಟಿಮೂಲೆಂಟ್) ನ್ನು ಹಾಗೂ G2/G3 ಸರ್ಟಿಫಿಕೇಟ್ ಇಲ್ಲದ ಜೈವಿಕ ಪ್ರಚೋದಕಗಳ (49.6 ಟನ್) ರಸಗೊಬ್ಬರವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

----------

3ಕೆಎಂಎನ್ ಡಿ21

ಮಂಡ್ಯ ಷುಗರ್ ಟೌನ್ ನ ಗೋಡೌನ್ ನಲ್ಲಿ ಪರವಾನಗಿ ಇಲ್ಲದೆ ಶೇಖರಣೆ ಮಾಡಿದ್ದ ರಸಗೊಬ್ಬರವನ್ನು ಕೃಷಿ ಅಧಿಕಾರಿಗಳು ಜಪ್ತಿ ಮಾಡಿರುವುದು.