ಸಾರಾಂಶ
ಟಿ.ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ 49.96 ಲಕ್ಷ ರು. ಲಾಭ ಗಳಿಸಿದ್ದು ಸದಸ್ಯರಿಗೆ ಶೇ.18 ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ತಿಳಿಸಿದರು. ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಟಿ.ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ 49.96 ಲಕ್ಷ ರು. ಲಾಭ ಗಳಿಸಿದ್ದು ಸದಸ್ಯರಿಗೆ ಶೇ.18 ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ತಿಳಿಸಿದರು.ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 2496 ಸದಸ್ಯರಿದ್ದು ಪಾಲು ಬಂಡವಾಳ ರು. 1,91,89,085, ಠೇವಣಿಗಳು ರು. 19,90,83,207 , ಕ್ಷೇಮನಿಧಿ ರು.1,72,77,437 ಇದ್ದು ದುಡಿಯುವ ಬಂಡವಾಳ ರು.38.58 ಕೋಟಿ ಇದೆ. ವರದಿ ಸಾಲಿನಲ್ಲಿ 745 ಸದಸ್ಯರಿಗೆ ಕೆ.ಸಿ.ಸಿ. ಸಾಲ ರು.16.99 ಕೋಟಿ ನೀಡಿರುವುದೂ ಸೇರಿದಂತೆ ಒಟ್ಟು 1260 ಸದಸ್ಯರಿಗೆ ರು.30.60 ಕೋಟಿ ವಿವಿಧ ಬಗೆಯ ಸಾಲ ನೀಡಲಾಗಿದೆ. ಇನ್ನು ಮುಂದಕ್ಕೆ ಹೊಸದಾಗಿ ಗೃಹ ನಿರ್ಮಾಣ ಸಾಲ ವಿತರಿಸಲು ತೀರ್ಮಾನಿಸಲಾಗಿದೆ ಎಂದರು.
ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಂಘದ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ,ಉಪಾಧ್ಯಕ್ಷ ಚೆಟ್ಟಂಗಡ ರಂಜು ಕರುಂಬಯ್ಯ, ನಿರ್ದೇಶಕರಾದ ಕಟ್ಟೇರ ವಿಶ್ವನಾಥ್,ಮಚ್ಚಮಾಡ ನಾಚಪ್ಪ, ತೀತೀರ ಸೋಮಣ್ಣ, ಚೊಟ್ಟೆಯಾಂಡಮಾಡ ಮುದ್ದಯ್ಯ, ಮಚ್ಚಮಾಡ ಸುಮಂತ್, ಮಚ್ಚಮಾಡ ಮುತ್ತಪ್ಪ,ಚೊಟ್ಟೆಯಾಂಡಮಾಡ ಸರಿತ, ಬೊಳ್ಳಜೀರ ಸುಶೀಲ, ಕುಡುವಚೇರಿ ಉಮೇಶ್, ಜೇನುಕುರುಬರ ರವಿ, ಹರಿಜನರ ಸಂಪತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೆಟ್ಟಂಗಡ ಎಸ್. ಸೀತಮ್ಮ, ಪರಿಣಿತ ನಿರ್ದೇಶಕರಾದ ಆಂಡಮಾಡ ವಿಶ್ವನಾಥ್, ತೀತೀರ ಸುಬ್ರಮಣಿ, ಲೆಕ್ಕಿಗರಾದ ಬಿ.ಎಂ. ಅನಿಲಾವತಿ, ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕಿ ದಮಯಂತಿ ಇದ್ದರು.