ನಗರದ ಫ್ರೀಡಂ ಪಾರ್ಕ್ ಎಡಭಾಗದ ರೈಟ್ ಪಾರ್ಕ್ ಮೇಲಿನ ಕಟ್ಟಡದಲ್ಲಿ 50 ಜನ ಉಪಯೋಗಿಸಬಹುದಾದ ಶೌಚಾಲಯ ಇದ್ದರೂ ಅದರ ನಿರ್ವಹಣೆ ಮಾಡದ ಜಿಬಿಎ ಆ ಕಟ್ಟಡದ ಮುಂದೆಯೇ ಮತ್ತೊಂದು ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ.
-ಮೂರರ ಪೈಕಿ ನಿರ್ವಹಣೆ ಇಲ್ಲದೆ ಪಾಳುಬಿದ್ದಿರುವ 2 ಶೌಚಾಲಯ
-ಹೆಚ್ಚುವರಿ ಟಾಯ್ಲೆಟ್ ನಿರ್ಮಾಣಕ್ಕೆ ಜಿಬಿಎ ವಿರುದ್ಧ ಜನ ಆಕ್ರೋಶಉಮಾಶಂಕರ ಕಾರ್ಯಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ಫ್ರೀಡಂ ಪಾರ್ಕ್ ಎಡಭಾಗದ ರೈಟ್ ಪಾರ್ಕ್ ಮೇಲಿನ ಕಟ್ಟಡದಲ್ಲಿ 50 ಜನ ಉಪಯೋಗಿಸಬಹುದಾದ ಶೌಚಾಲಯ ಇದ್ದರೂ ಅದರ ನಿರ್ವಹಣೆ ಮಾಡದ ಜಿಬಿಎ ಆ ಕಟ್ಟಡದ ಮುಂದೆಯೇ ಮತ್ತೊಂದು ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ.
ಶೌಚಾಲಯಕ್ಕಾಗಿಯೇ ದೊಡ್ಡ ಗುಂಡಿ ತೆಗೆಯಲಾಗಿದ್ದು, ಸಿಮೆಂಟ್ ಕಾಂಕ್ರೀಟ್ ಹಾಕಿರುವುದು ಚರ್ಚೆಗೆ ಕಾರಣವಾಗಿದೆ. ಪ್ರತಿಭಟನೆ ನಡೆಸುವವರು ಪಾರ್ಕಿನೊಳಗೆ ಮಲಮೂತ್ರ ವಿಸರ್ಜನೆ ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ ಈ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ.ಫ್ರೀಡಂ ಪಾರ್ಕ್ ನಲ್ಲಿ ಈಗಾಗಲೇ 3 ಶೌಚಾಲಯಗಳಿವೆ. 1 ಜೈಲು ಇದ್ದ ಜಾಗದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಮೀಸಲಾಗಿರುವ ಸ್ಥಳದಲ್ಲಿದ್ದರೆ, ಅದರ ಎದುರು ಕಚೇರಿಗೆ ಹೊಂದಿಕೊಂಡಂತೆ ಮತ್ತೊಂದು ಶೌಚಾಲಯವಿದೆ. 3ನೇ ಶೌಚಾಲಯ 1 ಲಕ್ಷ ರು. ಬಾಡಿಗೆ ನಿಗದಿ ಮಾಡಿರುವ ಕಟ್ಟಡದಲ್ಲಿದೆ(ರೈಟ್ ಪಾರ್ಕ್ ಮೇಲ್ಭಾಗದಲ್ಲಿ) ಈ 3 ಶೌಚಾಲಯಗಳಲ್ಲಿ 2 ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ.ಪರಿಸ್ಥಿತಿ ಹೀಗಿರುವಾಗ ಈ 3 ಶೌಚಾಲಯಗಳ ಜೊತೆಗೆ ಹೆಚ್ಚುವರಿಯಾಗಿ ನಾಲ್ಕನೇ ಶೌಚಾಲಯ ನಿರ್ಮಿಸಲು ಮುಂದಾಗಿರುವ ಜಿಬಿಎ ಕ್ರಮ ಅನಗತ್ಯ ಹಣ ಪೋಲು ಮಾಡುವುದಲ್ಲದೆ, ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಸರ್ಕಾರದಿಂದ ಪಡೆದುಕೊಂಡ ಪವಿತ್ರ ಜಾಗದ ತುಂಬಾ ಶೌಚಾಲಯಗಳನ್ನೇ ನಿರ್ಮಿಸಲು ಮುಂದಾಗಿರುವುದು, ಅಲ್ಲದೆ, ಇದರಿಂದ ಫ್ರೀಡಂ ಪಾರ್ಕ್ನ ಅಂದ ಧಕ್ಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಇರುವ ಶೌಚಾಲಯವನ್ನೇ ನಿರ್ವಹಣೆ ಮಾಡದ ಜಿಬಿಎ 4ನೇ ಶೌಚಾಲಯ ನಿರ್ಮಿಸಿದರೂ ಅದೂ ಕೂಡಾ ಈಗಿನ ಶೌಚಾಲಯಗಳಂತೆ ಪಾಳು ಬೀಳುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಮೂರರಿಂದ ನಾಲ್ಕು ಸಾವಿರ ಹೋರಾಟಗಾರರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಸಂದರ್ಭ ಪಾರ್ಕಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಆಗ ನಮ್ಮ ಸಿಬ್ಬಂದಿ ಇಡೀ ಪಾರ್ಕ್ ಸುತ್ತಾ ಮಲಮೂತ್ರ ಸ್ವಚ್ಛ ಮಾಡುವುದೇ ಆಗುತ್ತಿದೆ. ಇದಕ್ಕಾಗಿಯೇ ಶೌಚಾಲಯ ನಿರ್ಮಾಣ ಮಾಡುವಂತೆ ಮನವಿ ಮಾಡಲಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಈ ಸಂಬಂಧ ಕೇಂದ್ರ ಪಾಲಿಕೆ ಆಯುಕ್ತ ಜಗದೀಶ್ ಅವರು ಸ್ಪಷ್ಟನೆ ನೀಡಿ, ಪೊಲೀಸ್ ಇಲಾಖೆಯಿಂದ ಪ್ರತಿಭಟನಾಕಾರರಿಗೆ ಶೌಚಾಲಯ ನಿರ್ಮಾಣ ಮಾಡಲು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ, 1 ಲಕ್ಷ ರು. ಬಾಡಿಗೆ ನಿಗದಿಪಡಿಸಿರುವ ಕಟ್ಟಡದ ಶೌಚಾಲಯಗಳನ್ನು ಪ್ರತಿಭಟನಾಕಾರರು ಉಪಯೋಗಿಸಲು ಅವಕಾಶ ನೀಡಲಾಗುವುದಿಲ್ಲ. ಏಕೆಂದರೆ, ಅಲ್ಲಿ ಕಾರ್ಯಕ್ರಮ ನಡೆಸುವವರಿಗಷ್ಟೇ ಶೌಚಾಲಯ ಬಳಸಲು ಅವಕಾಶ, ಬೇರೆಯವರಿಗೆ ಇಲ್ಲ ಎಂದರು.ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಂತಹ ಮಹಿಳಾ ಸಂಘಟನೆಗಳು ಬೃಹತ್ ಸಂಖ್ಯೆಯಲ್ಲಿ ಹೋರಾಟಕ್ಕಿಳಿದಾಗ ಫ್ರೀಡಂ ಪಾರ್ಕ್ ನಲ್ಲಿ ಮಲ ಮೂತ್ರ ವಿಸರ್ಜನೆಗೆ ಸ್ಥಳದ ಕೊರತೆ ಇದೆ. ಹಾಗಂತ ಇರುವ ಸ್ಥಳದಲ್ಲಿ ಬೃಹತ್ ಕಟ್ಟಡ ನಿರ್ಮಿಸಿ ಅದನ್ನು ಬಾಡಿಗೆಗೆ ನೀಡಿರುವುದು ಯಾವ ಆಧಾರದಲ್ಲಿ ಎಂಬುದನ್ನು ಪಾಲಿಕೆ ತಿಳಿಸುತ್ತಿಲ್ಲ. ಅಲ್ಲದೆ, ಮಹಿಳಾ ಪ್ರತಿಭಟನಾಕಾರರು ಭಾಗವಹಿಸುವಾಗ ಮುಟ್ಟಾಗುವವರೂ, ಅನಾರೋಗ್ಯ ಪೀಡಿತರೂ ಇರುತ್ತಾರೆ. ಇಂತಹ ಮಹಿಳೆಯರ ಆರೋಗ್ಯ ನೋಡಿಕೊಳ್ಳಲು ಪಾಲಿಕೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದಿಂದ ವೈದ್ಯರ ತಂಡ ಎಲ್ಲಾ ಸೌಲಭ್ಯಗಳೊಂದಿಗೆ ಗಸ್ತುತಿರುಗುತ್ತಿರಬೇಕು. ಮಹಿಳಾ ವೈದ್ಯರು ಆ ತಂಡದಲ್ಲಿ ಇರಬೇಕು. ಪಾಲಿಕೆಯ ಕಸ ಸಾಗಿಸುವ ವಾಹನಗಳು ಅಲ್ಲಿ ಹಾಜರಿದ್ದು, ಅಲ್ಲೊಂದು ಕಸದ ತೊಟ್ಟಿ ಇರಿಸಬೇಕು. ಪಾಲಿಕೆ ಯಾವಾಗಲೂ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯವನ್ನು ನೋಡಿಕೊಳ್ಳಬೇಕು ಎಂದು ಮಹಿಳಾ ಹೋರಾಟಗಾರ್ತಿ ಬಸಮ್ಮ ತಿಳಿಸಿದರು.