ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಮಾಮ್‍ಕೋಸ್ ಸಂಸ್ಥೆಯ ಸಭಾಂಗಭದಲ್ಲಿ ಸೋಮವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾಮ್ಕೋಸ್ ಸಂಸ್ಥೆಯು ಈ ಸಾಲಿನಲ್ಲಿ 5.25 ಕೋಟಿ ರು. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಅನ್ನು ಘೋಷಣೆ ಮಾಡಲಾಯಿತು.ಜಿಲ್ಲಾಧಿಕಾರಿ ಗುರುದತ್ತ ಹಗಡೆ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಅಂದಾಜು 6300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು. ಮಾಮ್ಕೋಸ್ ಸಂಸ್ಥೆಯು ಈ ಸಾಲಿನಲ್ಲಿ 5.25 ಕೋಟಿ ರು. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಅನ್ನು ಘೋಷಣೆ ಮಾಡಲಾಯಿತು.
ಸಂಘದ ಅಧ್ಯಕ್ಷ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಸಂಘದಲ್ಲಿ ಹಾಲಿ ಜಾರಿಗೆ ತಂದ ಗುಂಪು ವಿಮಾ ಯೋಜನೆಯ ಪ್ರಯೋಜನವನ್ನು ಬಹಳಷ್ಟು ಸದಸ್ಯರು ಪಡೆದುಕೊಂಡಿದ್ದು, ಇನ್ನೂ ಹೆಚ್ಚಿನ ಸದಸ್ಯರು ಈ ಯೋಜನೆ ಅಡಿ ನೋಂದಾಯಿಸಿಕೊಂಡು ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಹಾಗೂ ಮಾಮ್ಕೋಸ್ ಸಂಸ್ಥೆಯು ಸದಸ್ಯರ ಹಿತರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸೌಲಭ್ಯವನ್ನು ಪಡೆಯುವಂತೆ ಕೋರಿದರು. ಶೇ.7ರ ಬಡ್ಡಿದರದಲ್ಲಿ ಓ.ಟಿ.ಎಸ್ ಯೋಜನೆಯನ್ನು ಜಾರಿಗೆ ತಂದಿದ್ದು. ಸುಸ್ತಿದಾರರ ಸದಸ್ಯರು ಇದರ ಸದುಪಯೋಗಪಡಿಸಿಕೊಳ್ಳಬೇಕು. 3 ವರ್ಷಗಳ ಅವಧಿಗೆ ಕ್ರಮವಾಗಿ ಬಡ್ಡಿ ದರ ಶೇ.7, 7.25 ಮತ್ತು 7.5 ಹಾಗೂ ಹಿರಿಯ ಸದಸ್ಯರಿಂದ ಶೇ.7.25, 7.50 ಮತ್ತು 8 ದರದಲ್ಲಿ ನಿಗದಿತ ಠೇವಣಿಯನ್ನು ಸ್ವೀಕರಿಸುತ್ತಿದ್ದು, ಸೌಲಭ್ಯವನ್ನು ಪಡೆಯುವಂತೆ ತಿಳಿಸಿದರು.ಸಂಘದ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಮಾತನಾಡಿ, ಸದಸ್ಯರು ನಮ್ಮ ಸಂಘಕ್ಕೆ ಅಡಕೆಯನ್ನು ಹಾಕಿ ಸಂಘದಲ್ಲಿ ವ್ಯವಹರಿಸಿ ಸಂಘದ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬೇಕು. ಸಂಘದ ವತಿಯಿಂದ ಪೆಟ್ರೋಲ್ ಬಂಕ್ ತೆರೆಯವ ಬಗ್ಗೆ ಆಡಳಿತ ಮಂಡಳಿಯಲ್ಲಿ ಪರಿಶೀಲಿಸುವುದಾಗಿ ತಿಳಿಸಿದರು.ಸಭಗೆ ಆಗಮಿಸಿದ್ದ ಶಾಸಕ, ಅಡಕೆ ಟಾಸ್ಕ್‌ಪೋರ್ಸ್‌ನ ಮಾಜಿ ಅಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿ, ಅಡಕೆಯನ್ನು ಕಾಡು ಬೆಳೆಗೆ ಸೇರಿಸಲಾಗಿತ್ತು ಅದನ್ನು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಕಾಡುಬೆಳೆಯಿಂದ ತೆಗಿಸಲಾಗಿದೆ. ಅಡಕೆಗೆ ಶೇ.18ರಂತೆ ಜಿ.ಎಸ್.ಟಿ ವಿಧಿಸಲಾಗುತ್ತಿತ್ತು. ಅದನ್ನೂ ಶೇ.5ಕ್ಕೆ ಕಡಿಮೆ ಮಾಡ ಲಾಗಿದೆ. ಇನ್ನೂ ಕಡಿಮೆ ಮಾಡುವ ಬಗೆಗೆ ಮನವಿಯನ್ನು ಸಲ್ಲಿಸಲಾಗಿದೆ. ಎಲ್ಲಾ ಸಹಕಾರ ಸಂಸ್ಥೆಗಳು ಸೇರಿ ಕರ್ನಾಟಕ ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾಮಂಡಳವನ್ನು ಸ್ಥಾಪಿಸಿದ್ದು ಇದರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.ಅಡಕೆ ಬೆಳೆಗೆ ಸಂಬಂಧಿಸಿದಂತೆ ಸರ್ಕಾರವು Scientific Committee ಅನ್ನು ರಚಿಸಿದೆ. ಅಡಕೆ ಬೆಳೆಗಾರರ ರಕ್ಷಣೆಯನ್ನು ಮಾಡಬೇಕು. ಅಡಕೆ ಬೆಳೆಯನ್ನು ಕಾಪಾಡಬೇಕು. ನಮ್ಮ ಅಡಕೆ ದೇಶಾವಾರಿ ಅಡಕೆಯಾಗಿ ಇರಬೇಕು. ಅಡಕೆಯ ಗೌರವ ಜಾಸ್ತಿಯಾಗಬೇಕು ಎಂದರು.
ಎಲೆಚುಕ್ಕೆ ರೋಗದ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಮಾಮ್ಕೋಸ್ ಸಂಸ್ಥೆಯು ಸಂಶೋಧನೆಗೆ ಹಣವನ್ನು ಮೀಸಲಿಡಬೇಕು. ಅಡಕೆ ಬೆಳೆಗಾರರ ರಕ್ಷಣೆಗೆ ಮಾಮ್ಕೋಸ್ ಸದಾ ಕಂಕಣಬದ್ಧವಾಗಿದೆ. ಪಾರದರ್ಶಕವಾದ ಆಡಳಿತ ಮೆಚ್ಚುಗೆ ನೀಡಿದೆ ಎಂದು ತಿಳಿಸಿದರು.ಇದೇ ಸಂದರ್ಭ ಸಂಸ್ಥೆಯ ಐತಿಹ್ಯ ಮತ್ತು ಯಶೋಗಾಥೆಯ ಕುರಿತಾದ ಸಾಕ್ಷ್ಯಚಿತ್ರವನ್ನು ಸಂಘದ ಅಧ್ಯಕ್ಷರು ಬಿಡುಗಡೆ ಮಾಡಿದರು. ಸಂಘದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಆರ್.ಪಲ್ಲವಿ, ಸಿ.ಎ.ರಂಜಿತಾ ಪ್ರಾರ್ಥಿಸಿದರು. ಸಹಕಾರ ಗೀತೆಯನ್ನು ಮತ್ತು ಸಂಸ್ಥೆಯ ಸಿಬ್ಬಂದಿಗಳು ರೈತಗೀತೆ ಹೇಳಿದರು. ಸಂಘದ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವೆ ಸಭಾ ಸೂಚನಾ ಪತ್ರವನ್ನು ಓದಿದರು. ನಿರ್ದೇಶಕ ಟಿ.ಆರ್.ಭೀಮರಾವ್ ಅವರು ಅಗಲಿದ ಸದಸ್ಯರು ಮತ್ತು ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಬಗೆಗೆ ಮಂಡಿಸಿದರು. ಎ.ಸುರೇಶಚಂದ್ರ ಇವರು ವಂದಿಸಿದರು ಮತ್ತು ಜಿ.ಈ.ವಿರೂಪಾಕ್ಷಪ್ಪ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಬೆಂಬಲ, ಸಹಕಾರಕ್ಕೆ ಜಿಲ್ಲಾಧಿಕಾರಿ ಶ್ಲಾಘನೆಸಂಘದ ಅಧ್ಯಕ್ಷರು, ಜಿಲ್ಲಾಧಿಕಾರಿ ಗುರುದತ್ತ ಹಗಡೆ ಸಭೆಯಲ್ಲಿ ಮಾತನಾಡಿ, ಈ ಸಾಲಿನಲ್ಲಿ 3,03,910 ಮೂಟೆಗಳ ಅಡಕೆ ಆವಕವಾಗಿದ್ದು, 1244.42 ಕೋಟಿ ರು. ಸಂಘದ ಒಟ್ಟು ವ್ಯವಹಾರ ನಡೆದಿದೆ. ಸಂಸ್ಥೆಯು 2023-24ರ ಆರ್ಥಿಕ ಸಾಲಿನಲ್ಲಿ ಲಾಭವನ್ನು ಗಳಿಸಿ ಆಡಿಟ್ ವರ್ಗೀಕರಣ ದಲ್ಲಿ ‘ಎ’ ಶ್ರೇಣಿಯಲ್ಲಿಯೇ ಮುಂದುವರೆದಿದೆ. ಜೊತೆಗೆ ಕಳೆದ ಬಾರಿಗಿಂತ 83.78 ಲಕ್ಷ ರು. ಅಧಿಕ ಲಾಭ ಗಳಿಸಿದೆ. ಇದಕ್ಕೆ ಸದಸ್ಯರೆಲ್ಲರೂ ನೀಡಿರುವ ಬೆಂಬಲ ಹಾಗೂ ಅವರ ಸಹಕಾರವೇ ಕಾರಣ ಎಂದು ಶ್ಲಾಘಿಸಿದರು.