ಸಾರಾಂಶ
ಕನ್ನಡಪ್ರಭ ವಾರ್ತೆ ಹುಮನಾಬಾದ್
ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವುದರ ಜೊತೆಗೆ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಶಾಸಕ ಡಾ.ಸಿದ್ದು ಪಾಟೀಲ್ ಹೇಳಿದರು.ಅವರು ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ 2023-24 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಡಿ ರಾಜ್ಯ ಹೆದ್ದಾರಿ 75 ಭಾಲ್ಕಿ ಚಿಂಚೋಳಿ ಮಾರ್ಗ ಮಧ್ಯದ ಸೇತುವೆಯಿಂದ ದುಬಲಗುಂಡಿ ಗ್ರಾಮದ ಬಸವೇಶ್ವರ ವೃತ್ತದ ವರೆಗೆ ₹2 ಕೋಟಿ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಹಾಗೂ ಗ್ರಾಮದ ನೇಕಾರ ಕಾಲೋನಿ ಹಾಗೂ ವಾರ್ಡ ಸಂಖ್ಯೆ 4ರಲ್ಲಿ ₹30ಲಕ್ಷ ವೆಚ್ಚದ ಸೌರಶಕ್ತಿ ಹೈಮಾಸ್ಟ್ ಕಾಮಗಾರಿ ಹಾಗೂ ಕಬೀರಾಬಾದವಾಡಿ ಗ್ರಾಮದಿಂದ ದುಬಲಗುಂಡಿ ಗ್ರಾಮದ ವರೆಗೆ ₹ 3ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ, ಶುದ್ಧ ಕುಡಿವ ನೀರಿನ ಘಟಕ, ಪ್ರಾಥಮಿಕ ಶಾಲೆಗೆ ಎರಡು ನೂತನ ಕೊಠಡಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಭಾಲ್ಕಿ ಚಿಂಚೋಳಿ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿಗೆ ಹಲವು ದಿನಗಳಿಂದಲೂ ಜನತೆ ಮನವಿ ಮಾಡುತ್ತ ಬಂದಿದ್ದರು. ಮಕ್ಕಳಿಗೆ ಉತ್ತಮ ಅಭ್ಯಾಸದ ವಾತಾವರಣಕ್ಕೆ ಎರಡು ಶಾಲಾ ಕೊಠಡಿ ಹಾಗೂ ಹಿಂದೆ ಖನಿಜಯುಕ್ತ ನೀರು ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಈಗ ಅದು ಎಲ್ಲ ವರ್ಗದ ಜನತೆಗೆ ದೊರಕುವಂತಾಗಬೇಕು ಎನ್ನುವ ಉದ್ದೇಶದಿಂದ ಗ್ರಾಮಕ್ಕೆ ಶುದ್ಧ ಕುಡಿವ ನೀರಿನ ಘಟಕ ನೀಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭಧಲ್ಲಿ ದಯಾನಂದ ಪಾಟೀಲ್, ಭೀಮರಾವ್ ನಂದಿ, ಅರುಣ ಬಾವುಗಿ, ಗ್ರಾಪಂ ಅಧ್ಯಕ್ಷ ನಾಗರಾಜ ಭೋಜಗುಂಡಿ, ಉಪಾಧ್ಯಕ್ಷೆ ಅರುಣಾದೇವಿ ಸಜ್ಜನ, ಸದಸ್ಯರಾದ ರಾಮಣ್ಣ ನರಸಗೊಂಡ, ರಂಗನಾಥ ಭೋಲಾ, ಅನಿಲ ಪಸಾರ್ಗಿ, ವಿರೇಶ ಸಜ್ಜನ, ಭಗತಸಿಂಗ್ ಠಾಕೂರ, ರಾಜಪ್ಪ ಹರಕಂಚಿ, ರತನ್ ಠಾಕೂರ, ಪಿಡಿಒ ರಘುನಾಥ ಚಂದ, ಸಂತೋಷ ಪಾಟೀಲ್, ಗಿರೀಶ ತುಂಬಾ, ನಾಗಭೂಷಣ ಸಂಗಮ್ ಸೇರಿ ಅನೇಕರಿದ್ದರು.