ದಾಖಲೆ ಇಲ್ಲದ ₹5.55 ಲಕ್ಷ ಜಪ್ತಿ

| Published : Apr 05 2024, 01:00 AM IST

ಸಾರಾಂಶ

ಬಾದಾಮಿ ಮತಕ್ಷೇತ್ರ ವ್ಯಾಪ್ತಿಯ ಜಾಲಿಹಾಳ ಕ್ರಾಸ್ ಚೆಕ್‌ಪೋಸ್ಟ್‌ನಲ್ಲಿ ಪ್ರತ್ಯೇಕ 6 ಪ್ರಕರಣಗಳಡಿ ದಾಖಲೆ ಇಲ್ಲದ ಒಟ್ಟು ₹5.55 ಲಕ್ಷ ವಶಕ್ಕೆ ಪಡೆಯಲಾಗಿದೆ

ಬಾದಾಮಿ: ಲೋಕಸಭಾ ಚುನಾವಣೆ-2024ರ ನೀತಿ ಸಂಹಿತೆ ಉಲ್ಲಂಘನೆಯಡಿ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯ ಜಾಲಿಹಾಳ ಕ್ರಾಸ್ ಚೆಕ್‌ಪೋಸ್ಟ್‌ನಲ್ಲಿ ಪ್ರತ್ಯೇಕ 6 ಪ್ರಕರಣಗಳಡಿ ದಾಖಲೆ ಇಲ್ಲದ ಒಟ್ಟು ₹5.55 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.ಬುಧವಾರ ಜಾಲಿಹಾಳ ಕ್ರಾಸ್ ಚೆಕ್‌ಪೋಸ್ಟ್‌ನಲ್ಲಿ ಎಚ್.ಬಿ.ಪೂಜಾರ ನೇತೃತ್ವದ ಸ್ಟಾಯಟಿಕ್ ಸರ್ವೆಲೆನ್ಸ್ ತಂಡ ಗದಗ ಜಿಲ್ಲೆಯ ಲಕ್ಕುಂಡಿಯಿಂದ ಆಗಮಿಸಿದ ಗೂಡ್ಸ್‌ ವಾಹನದಲ್ಲಿ ₹1.66 ಲಕ್ಷ, ಚಿಕ್ಕೋಡಿ ಜಿಲ್ಲೆಯ ಪಾಶ್ಚಾಪೂರದಿಂದ ಆಗಮಿಸಿದ ಗೂಡ್ಸ್ ವಾಹನದಲ್ಲಿ ₹1.20 ಲಕ್ಷ, ಕೆರೂರಿನಿಂದ ಬರುತ್ತಿರುವ ಎರಡು ಗೂಡ್ಸ್ ವಾಹಗಳಲ್ಲಿ ಕ್ರಮವಾಗಿ ₹77 ಸಾವಿರ, ₹69 ಸಾವಿರ., ಲಕ್ಷ್ಮೇಶ್ವರದಿಂದ ಬಂದ ವಾಹನದಲ್ಲಿ ₹54 ಸಾವಿರ, ಹಾಗೂ ರೋಣದಿಂದ ಆಗಮಿಸಿದ ಗೂಡ್ಸ ವಾಹನದಲ್ಲಿ ₹69 ಸಾವಿರ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.