ಸಾರಾಂಶ
ರಾಮನಗರ: ಪ್ರೀ ಪೇಡ್ ಟಾಸ್ಕ್ ಗೇಮ್ ಆಡಿ ವ್ಯಕ್ತಿಯೊಬ್ಬ 5.73 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.ಬೆಂಗಳೂರು ನಗರ ಕೆಂಗೇರಿ ಹೋಬಳಿ ದೊಡ್ಡಬೆಲೆ ಹಳ್ಳಿ ಸನ್ ವರ್ತ್ ಅಪಾರ್ಟ್ ಮೆಂಟ್ ವಾಸಿ ವಿ.ವಿ.ರಾಕೇಶ್ ವಂಚನೆಗೊಳಗಾದವರು.
ರಾಮನಗರ: ಪ್ರೀ ಪೇಡ್ ಟಾಸ್ಕ್ ಗೇಮ್ ಆಡಿ ವ್ಯಕ್ತಿಯೊಬ್ಬ 5.73 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ನಗರ ಕೆಂಗೇರಿ ಹೋಬಳಿ ದೊಡ್ಡಬೆಲೆ ಹಳ್ಳಿ ಸನ್ ವರ್ತ್ ಅಪಾರ್ಟ್ ಮೆಂಟ್ ವಾಸಿ ವಿ.ವಿ.ರಾಕೇಶ್ ವಂಚನೆಗೊಳಗಾದವರು.ಕಳೆದ ನವೆಂಬರ್ 12ರಂದು ರಾಕೇಶ್ ಮೊಬೈಲ್ ನಂಬರ್ ಗೆ ಪಾರ್ಟ್ ಟೈಮ್ ಜಾಬ್ ಅಂತ ವಾಟ್ಸ್ ಆಪ್ ಸಂದೇಶ ಬಂದಿದೆ. ಅದರಲ್ಲಿ ಟೆಲಿಗ್ರಾಂ ಮೂಲಕ ಸಂಪರ್ಕ ಮಾಡಲು ನೀಲಂ ಎಂಬುವರು ತಿಳಿಸಿದ್ದಾರೆ. ಅಲ್ಲದೆ, ಟೆಲಿಗ್ರಾಂ ಬ್ಯಾಲೆನ್ಸ್ ಎಂದು 400 ರುಪಾಯಿ ಆನ್ ಲೈನ್ ಮೂಲಕ ಪಾವತಿಸಿದ್ದಾರೆ.
ನಂತರ ಪ್ರೀಪೇಡ್ ಟಾಸ್ಕ್ ಎಂದು ಮೊದಲಿಗೆ 5 ಸಾವಿರ ರು.ಗಳನ್ನು ಅಕೌಂಟ್ ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ಟೆಲಿಗ್ರಾಂನಲ್ಲಿ ವಿಐಪಿ ಗ್ರೂಪ್ ಸೃಷ್ಟಿಸಿ ಅದರಲ್ಲಿ ಆಟವಾಡಲು ತಿಳಿಸಿದಾಗ ರಾಕೇಶ್ 7500 ರು. ಗೆದ್ದಿದ್ದಾರೆ. 2ನೇ ಟಾಸ್ಕ್ ಎಂದು ತಿಳಿಸಿ 29,800 ರು.ಗಳನ್ನು ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯಾವುದೇ ಹಣ ರಾಕೇಶ್ ಗೆ ಬಂದಿಲ್ಲ. ಅದೇ ರೀತಿ 4 ಮತ್ತು 5 ಬಾರಿ ಆಟ ಆಡಿದರೆ ಮಾತ್ರ ನಿಮ್ಮ ಹಣ ಹಿಂದಿರುಗಿಸುತ್ತೇವೆಂದು ವಂಚಕರು ತಿಳಿಸಿದ್ದಾರೆ. ಅದರಂತೆ 6 ಟಾಸ್ಕ್ ಗಳನ್ನು ಆಡಿದ ಮೇಲೆ 3 ಲಕ್ಷ ಟ್ರಾನ್ಸ್ ಫರ್ ಮಾಡಲು ಹೇಳಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ರಾಕೇಶ್ ರವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ಒಟ್ಟು 5,73,800 ರುಪಾಯಿ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿರುವುದಾಗಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.