ದಿ ಟೌನ್‌ ಕೋ-ಆಪರೇಟೀವ್ ಬ್ಯಾಂಕ್‌ಗೆ 5 ಕೋಟಿ ಲಾಭ

| Published : Apr 04 2024, 01:03 AM IST

ಸಾರಾಂಶ

ಹೊಸಕೋಟೆ: ಹೊಸಕೋಟೆ ದಿ ಟೌನ್ ಕೋ ಆಪರೇಟೀವ್ ಬ್ಯಾಂಕ್ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 5.05 ಕೋಟಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೊಸಕೋಟೆ ದಿ ಟೌನ್ ಕೋ-ಆಪರೇಟೀವ್ ಬ್ಯಾಂಕಿನ ಅಧ್ಯಕ್ಷ ಅಪ್ಸರ್ ತಿಳಿಸಿದರು.

ಹೊಸಕೋಟೆ: ಹೊಸಕೋಟೆ ದಿ ಟೌನ್ ಕೋ ಆಪರೇಟೀವ್ ಬ್ಯಾಂಕ್ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 5.05 ಕೋಟಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೊಸಕೋಟೆ ದಿ ಟೌನ್ ಕೋ-ಆಪರೇಟೀವ್ ಬ್ಯಾಂಕಿನ ಅಧ್ಯಕ್ಷ ಅಪ್ಸರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಕೋಟೆ ನಗರದಲ್ಲಿ ಟೌನ್ ಬ್ಯಾಂಕ್ ಶತಮಾನ ಕಂಡ ಏಕೈಕ ಬ್ಯಾಂಕ್ ಆಗಿದೆ. ಸಮರ್ಥವಾಗಿ ವಹಿವಾಟು ಮಾಡುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿರುವುದು ಸಂತಸವಾಗಿದೆ. ಬ್ಯಾಂಕಿನ ಸದಸ್ಯರು, ಷೇರುದಾರರು, ನಿರ್ದೇಶಕರು, ಸಿಬ್ಬಂದಿ ವರ್ಗದವರ ಅವಿರತ ಶ್ರಮದ ಪರಿಣಾಮ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ 5.05 ಕೋಟಿ ಲಾಭಾಂಶ ಗಳಿಸಲು ಸಾಧ್ಯವಾಗಿದೆ. ಪ್ರಮುಖವಾಗಿ ಬ್ಯಾಂಕಿನ ನಾನ್ ಪರ್ಫಾಮಿಂಗ್ ಅಸೆಟ್(ಎನ್‌ಪಿಎ) ಶೂನ್ಯಕ್ಕೆ ತಲುಪಿದ್ದು, ಇದಕ್ಕೆ ಕಾರಣರಾದ ಎಲ್ಲಾ ಸಾಲಗಾರರಿಗೆ, ಷೇರುದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೊರೋನಾ ಕಾರಣದಿಂದ ನಾವು 2 ವರ್ಷಗಳಿಂದ ಡಿವಿಡೆಂಟ್ ಅನ್ನು ಷೇರುದಾರರಿಗೆ ಕೊಡಲಾಗಿರಲಿಲ್ಲ. ಆದರೆ ಈ ವರ್ಷ ಎಲ್ಲಾ ಷೇರುದಾರರಿಗೆ ಡಿವಿಡೆಂಟ್ ನೀಡುತ್ತೇವೆ. ಷೇರುದಾರರ ಡೆತ್ ಫಂಡ್ ಸೇರಿದಂತೆ ಷೇರುದಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೂಡ ಹೆಚ್ಚಳ ಮಾಡಿದ್ದು ಸಾಮಾಜಿಕ ಚಟುವಟಿಕೆಗಳಿಗೂ ಬ್ಯಾಂಕ್ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಟೌನ್ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿರುವ ಸಹಕಾರ ಬ್ಯಾಂಕ್‌ಗಳಲ್ಲಿ ನಮ್ಮ ಬ್ಯಾಂಕ್ ನಂ.1ಸ್ಥಾನದಲ್ಲಿದೆ. ಇದಕ್ಕೆ ಕಾರಣರಾದ ಈ ಹಿಂದೆ ಬ್ಯಾಂಕಿನ ಎಲ್ಲಾ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರ ಶ್ರಮವನ್ನು ನಾವಿಂದು ಸ್ಮರಿಸಲೇಬೇಕಿದೆ. ಅಲ್ಲದೆ ಬ್ಯಾಂಕಿನ ಈ ಸಾಧನೆಗೆ ಸಹಕರಿಸಿದ ಬ್ಯಾಂಕಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಬ್ಯಾಂಕಿನ ಉಪಾಧ್ಯಕ್ಷ ಬಿ.ನಾಗರಾಜ್, ನಿರ್ದೇಶಕರಾದ ಬಾಲಚಂದ್ರ, ನವೀನ್, ವೆಂಕಟಲಕ್ಷ್ಮಿ, ಜೀನತ್ ಉನ್ನೀಸಾ, ಅಮರೇಶ್, ನಾಗರಾಜ್, ರಾಜಶೇಖರ್, ಕಿರಣ್‌ಕುಮಾರ್, ಚಂದ್ರಶೇಖರ್ ಇತರರಿದ್ದರು.ಬಾಕ್ಸ್........ಸಂಕಷ್ಟದಲ್ಲಿದ್ದ ಬ್ಯಾಂಕ್‌ಗೆ ಎಂಟಿಬಿ ಸಹಕಾರ

ಕಳೆದ ಎಂಟು ವರ್ಷಗಳ ಹಿಂದೆ ಶಶಿಧರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬ್ಯಾಂಕ್ ವ್ಯವಹಾರದಲ್ಲಿ ಸಂಕಷ್ಟದಲ್ಲಿದ್ದ ಬ್ಯಾಂಕ್‌ನಲ್ಲಿ ಎಂಟಿಬಿ ನಾಗರಾಜ್ ಅವರು ಠೇವಣಿ ಇಡುವ ಮೂಲಕ ಬ್ಯಾಂಕಿನ ಆರ್ಥಿಕ ವಹಿವಾಟಿಗೆ ಚೈತನ್ಯ ತುಂಬಿದರು. ಅವರನ್ನು ಇಂದು ಸ್ಮರಿಸಬೇಕಿದೆ. ಅದರ ಪರಿಣಾಮ ಬ್ಯಾಂಕ್ ವಹಿವಾಟು ಮಾಡಿ ಲಾಭಾಂಶದತ್ತ ಸಾಗಲು ಸಾಧ್ಯವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎ.ಅಪ್ಸರ್ ತಿಳಿಸಿದರು.

ಪೋಟೋ 02 ಹೆಚ್ ಎಸ್ ಕೆ 01

ಹೊಸಕೋಟೆಯಲ್ಲಿ ಬ್ಯಾಂಕ್‌ ಅಧ್ಯಕ್ಷ ಅಪ್ಸರ್, ಉಪಾಧ್ಯಕ್ಷ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.