ಸಾರಾಂಶ
ಕೃಷಿಯಲ್ಲಿ ಹೆಚ್ಚುತ್ತಿರುವ ರಾಸಾಯನಿಕ ಬೇಸಾಯ ದಿಂದ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ನ್ಯಾಷನಲ್ ಮಿಷನ್‌ಆನ್ ನ್ಯಾಚುರಲ್ ಫಾಮಿರ್ಂಗ್‌ಯೋಜನೆಯನ್ನು ಹಮ್ಮಿಕೊಂಡಿದೆ.
ಕನ್ನಡಪ್ರಭ ವಾರ್ತೆ ಸುತ್ತೂರು
ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಸುತ್ತೂರಿನಲ್ಲಿ ಕೃಷಿ ಇಲಾಖೆ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ನ್ಯಾಷನಲ್ ಮಿಷನ್‌ಆನ್ ನ್ಯಾಚುರಲ್ ಫಾಮಿರ್ಂಗ್‌ಯೋಜನೆಯಡಿಯಲ್ಲಿ ಮಂಗಳವಾರದಿಂದ ಸೆ. 20ರವರಗೆ 5 ದಿನಗಳ ತರಬೇತಿ ಕಾರ್ಯಕ್ರಮವನ್ನು ಕೃಷಿ ಸಖಿಯರಿಗೆ ಆಯೋಜಿಸಿದೆ.ನಂಜನಗೂಡು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ರವಿ ಉದ್ಘಾಟಿಸಿ ಮಾತನಾಡಿ, ನೈಸರ್ಗಿಕ ಕೃಷಿ ತರಬೇತಿಯ ಪ್ರಾಮುಖ್ಯತೆ ಕುರಿತು ಕೃಷಿ ಸಖಿಯರಿಗೆ ತಿಳಿಸಿದರು. ಕೃಷಿ ಸಖಿಯರು ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಬೇಕಾದ ಕ್ರಮಗಳ ಕುರಿತು 5 ದಿನಗಳ ತರಬೇತಿಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಕರೆ ನೀಡಿದರು.
ತರಬೇತಿಯ ನಂತರ ಇತರೆ ರೈತರಿಗೆ ನೈಸರ್ಗಿಕ ಕೃಷಿ ಕುರಿತು ಮಾಹಿತಿಯನ್ನು ನೀಡಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ಅಥವಾ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ತಜ್ಞರನ್ನು ಸಂಪರ್ಕಿಸಲು ತಿಳಿಸಿದರು.ಕೃಷಿ ಇಲಾಖೆ, ಮೈಸೂರಿನ ಉಪ ಕೃಷಿ ನಿರ್ದೇಶಕ ಹಾಗೂ ಎನ್‌ಎಂಎನ್‌ಎಫ್‌ಯೋಜನೆಯ ನೋಡಲ್‌ಅಧಿಕಾರಿ ಸತೀಶ್‌ಅವರು ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಿಗಳು ನೀಡುವ ಪ್ರತಿಯೊಂದು ವಿಷಯವನ್ನು ತಿಳಿದುಕೊಂಡು, ನೈಸರ್ಗಿಕ ಕೃಷಿ ಯೋಜನೆಯನ್ನು ಯಶಸ್ವಿಯಾಗಿ ಮೈಸೂರು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲು ಕೃಷಿ ಸಖಿಯರು ಕಂಕಣಬದ್ಧರಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಎನ್. ಜ್ಞಾನೇಶ್‌ಮಾತನಾಡಿ, ಕೃಷಿಯಲ್ಲಿ ಹೆಚ್ಚುತ್ತಿರುವ ರಾಸಾಯನಿಕ ಬೇಸಾಯ ದಿಂದ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ನ್ಯಾಷನಲ್ ಮಿಷನ್‌ಆನ್ ನ್ಯಾಚುರಲ್ ಫಾಮಿರ್ಂಗ್‌ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯನ್ನು ಮೈಸೂರಿನ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲು ಕೃಷಿ ವಿಜ್ಞಾನ ಕೇಂದ್ರವನ್ನು ತರಬೇತಿ ಕೇಂದ್ರವಾಗಿ ಆಯ್ಕೆ ಮಾಡಿದೆ. ನಮ್ಮ ಕೇಂದ್ರದ ನುರಿತ ತಜ್ಞರಿಂದ ನೈಸರ್ಗಿಕ ಕೃಷಿಯ ಅಳವಡಿಕೆಯ ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕರೆ ನೀಡಿದರು.ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಡಾ. ಜಿ.ಎಂ. ವಿನಯ್‌ಮಾತನಾಡಿದರು.
ವರಕೊಡು ಗ್ರಾಮದ ನೈಸರ್ಗಿಕ ಕೃಷಿಕ ಪೃಥ್ವಿರಾಜ್‌ಮೊದಲು ಕೃಷಿ ಸಖಿಯರು ತಮ್ಮ ಜಮೀನಿನಲ್ಲಿ ನೈಸರ್ಗಿಕ ಕೃಷಿ ಆಳವಡಿಸಿಕೊಳ್ಳಬೇಕು ನಂತರ ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.ಕೆವಿಕೆಯ ನೈಸರ್ಗಿಕ ಕೃಷಿ ತರಬೇತಿಯ ಪ್ರಮುಖ ತರಬೇತುದಾರ ಶಾಮರಾಜ್‌ಕಾರ್ಯಕ್ರಮ ನಿರೂಪಿಸಿದರು, ಡಾ. ರಕ್ಷಿತ್‌ರಾಜ್ ಸ್ವಾಗತಿಸಿದರು ಹಾಗೂ ಡಾ. ದೀಪಕ ವಂದಿಸಿದರು.
ಕೆವಿಕೆಯ ಎಚ್.ವಿ. ದಿವ್ಯಾ ಹಾಗೂ ಸಿಬ್ಬಂದಿವರ್ಗದವರು ಇದ್ದರು. ನಂಜನಗೂಡು, ಟಿ. ನರಸೀಪುರ, ಕೆ.ಆರ್. ನಗರ, ಸಾಲಿಗ್ರಾಮ ಹಾಗೂ ಮೈಸೂರು ತಾಲೂಕಿನ ಸುಮಾರು 40 ಕೃಷಿ ಸಖಿಯರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.