ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿಯ ಮುಳುಕೆರೆ ಗ್ರಾಮದ ಶ್ರೀ ಭೈರವೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುರುವೇಕೆರೆ ತಾಲೂಕು ಯೋಜನಾ ಕಚೇರಿ ವತಿಯಿಂದ 5 ಲಕ್ಷ ರು. ಸಹಾಯಧನ ನೀಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿಯ ಮುಳುಕೆರೆ ಗ್ರಾಮದ ಶ್ರೀ ಭೈರವೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುರುವೇಕೆರೆ ತಾಲೂಕು ಯೋಜನಾ ಕಚೇರಿ ವ್ಯಾಪ್ತಿಯ ದಿಡಗ ವಲಯದ ವತಿಯಿಂದ ಹಮ್ಮಿಕೊಂಡಿದ್ದ ಸಹಾಯಧನದ ಡಿ.ಡಿ ವಿತರಣೆ ಕಾರ್ಯಕ್ರಮದಲ್ಲಿ ದೇವಾಲಯದ ಸಮಿತಿ ಸದಸ್ಯರಿಗೆ ಡಿ.ಡಿ ವಿತರಿಸಿ ಮಾತನಾಡಿದರು.
ಪ್ರಪಂಚದಲ್ಲಿ ನ್ಯಾಯ, ನೀತಿ, ಧರ್ಮದ ಮೇಲೆ ನಿಂತಿರುವ ಯಾವುದಾದ್ರೂ ಕ್ಷೇತ್ರ ಇದೆ ಎಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಮಾತ್ರ. ಚನ್ನರಾಯಪಟ್ಟಣ ತಾಲೂಕಿನಲ್ಲಿ 100ಕ್ಕೂ ಹೆಚ್ಚು ಡೇರಿ ಕಟ್ಟಡಗಳ ನಿರ್ಮಾಣಕ್ಕೆ ಹಾಗೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧನಸಹಾಯ ಮಾಡುತ್ತಾ ಬರುತ್ತಿದೆ. ಇದರ ಜೊತೆಗೆ ತಾಲೂಕಿನ ಅನೇಕ ಗ್ರಾಮಗಳ ಕೆರೆಗಳ ಪುನಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದರು.ಗ್ರಾಮದ ಭೈರವೇಶ್ವರ ದೇವಾಲಯ ನಿರ್ಮಾಣಕ್ಕೆ ಈ ಹಿಂದೆಯೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2 ಲಕ್ಷ ರು. ನೀಡಿದ್ದರೂ ಈಗ ಪುನಃ ವೀರೇಂದ್ರ ಹೆಗಡೆಯವರು 5 ಲಕ್ಷ ನೀಡಿದ್ದಾರೆ. ಇದರಿಂದ ದೇವಾಲಯ ನಿರ್ಮಾಣಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ತಾವು ಕೂಡ ಈಗಾಗಲೇ ಹೆಚ್ಚಿನ ಸಹಕಾರ ನೀಡಿದ್ದು ಮುಂಬರುವ ಆರ್ಥಿಕ ವರ್ಷದ ಏಪ್ರಿಲ್ ನಂತರ ಇನ್ನು ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ತೋಟಿ ಜಯರಾಮ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಅನೇಕ ಮದ್ಯವರ್ಜನ ಶಿಬಿರಗಳ ಮುಖಾಂತರ ಪಾನ ಮುಕ್ತರನ್ನಗಿಸುವುದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಕೆರೆಗಳ ಅಭಿವೃದ್ಧಿ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಯೋಜನೆ ಮಾಡುತ್ತಾ ಬರುತ್ತಿದೆ ಎಂದರು.ಯೋಜನೆಯ ತುಮಕೂರು 1 ಜಿಲ್ಲೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಅವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣರವರಿಗೆ ಹೊಸ ವರ್ಷದ ಡೈರಿ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ತುರುವೇಕೆರೆ ತಾಲೂಕಿನ ಯೋಜನಾಧಿಕಾರಿ ಯಶೋಧರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನೇರಲಕೆರೆ ಇಂದ್ರಜಿತ್, ದೇವಾಲಯ ಸಮಿತಿ ಅಧ್ಯಕ್ಷ ಪಟೇಲ್ ಮಂಜೇಗೌಡ, ಖಜಾಂಚಿ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್, ಮುಖಂಡರುಗಳಾದ ತೋಟಿ ನಾಗರಾಜ್, ಎಂ.ಆರ್. ವಾಸು, ವೀರಶೈವ ಮುಖಂಡ ಎನ್.ಆರ್. ಕೃಪಾ ಶಂಕರ್, ಯುವ ಮುಖಂಡ ಮುಳುಕೆರೆ ಚೇತನ್, ಬಾಬು, ನಿವೃತ್ತ ಶಿಕ್ಷಕ ಬಸವರಾಜ್, ದೇವರಾಜ್, ಜಗದೀಶ್, ಎಮ್.ಎಚ್.ಬಸವರಾಜ್, ಅಶೋಕಣ್ಣ, ನಟರಾಜ್, ಶಿವನಂಜೇಗೌಡ, ಪುನೀತ್, ಸತೀಶ್, ರಮೇಶ್, ಬೈರೇಗೌಡ, ಕೃಷ್ಣೆಗೌಡ, ಸುರೇಶ್, ಮಂಜುನಾಥ್, ಎಂ.ಆರ್. ಕೃಷ್ಣ, ಎಂ.ಬಿ.ಚೇತನ್, ಲೋಕೇಶ್, ಬೈರೇಗೌಡ, ಒಕ್ಕೂಟದ ಪದಾಧಿಕಾರಿಗಳಾದ ಜಗದೀಶ್, ಡೇರಿ ಗಿರೀಶ್, ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿ ಪ್ರಗತಿ ಬಂದು, ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.