ಮೀನಾ ತೂಗುದೀಪ್ ಸೇರಿದಂತೆ 15 ಮಂದಿ ಆಯ್ಕೆ

| Published : Apr 01 2024, 12:46 AM IST

ಸಾರಾಂಶ

ಈ ಚುನಾವಣೆಯಲ್ಲಿ 30 ಜನ ಸ್ಪರ್ಧಿಸಿದ್ದು, ಅದರಲ್ಲಿ 15 ಜನ ಅತಿ ಹೆಚ್ಚು ಮತವನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಜಯನಗರದ ಕೃಷ್ಣದೇವರಾಯ ರಸ್ತೆಯಲ್ಲಿರುವ ದಿ ಬಲಿಜ ಸಂಘO 2024- 2029ರ ಐದು ವರ್ಷಕ್ಕೆ ಭಾನುವಾರ ನಡೆದ ನಿರ್ದೇಶಕರ ಚುನಾವಣೆಯಲ್ಲಿ ನಿರ್ಮಾಪಕಿ ಮೀನಾ ತೂಗುದೀಪ್ ಶ್ರೀನಿವಾಸ್ ಅವರು ಸೇರಿದಂತೆ 15 ಜನ ಆಯ್ಕೆಯಾಗಿದ್ದಾರೆ.

ಈ ಚುನಾವಣೆಯಲ್ಲಿ 30 ಜನ ಸ್ಪರ್ಧಿಸಿದ್ದು, ಅದರಲ್ಲಿ 15 ಜನ ಅತಿ ಹೆಚ್ಚು ಮತವನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ.

ಸಾಮಾನ್ಯ ವರ್ಗದಿಂದ ಹೇಮಂತ್ ಕುಮಾರ್, ಕೆ. ಲಿಂಗರಾಜು, ಎಂ.ಎಸ್. ದಾಮೋದರ, ಜಿ. ಮಹೇಶ್ ನಾಯ್ಡು, ಆರ್. ಮಂಜುನಾಥ್, ಯತಿರಾಜ್, ಎಚ್.ವಿ. ಗೋವಿಂದರಾಜ್, ಪಿ. ಕಾಮರಾಜ್, ಎಂ.ಎಸ್. ಯೋಗೀಶ್, ಎಂ.ಎಸ್. ರಾಘವೇಂದ್ರ, ಆರ್. ರವಿಕುಮಾರ್, ಕೆ. ನಾಗರಾಜು ಆಯ್ಕೆಯಾಗಿದ್ದಾರೆ.

ಹಾಗೆಯೇ, ಮಹಿಳಾ ಮೀಸಲಿನಲ್ಲಿ ಮೀನಾ ತೂಗುದೀಪ್ ಶ್ರೀನಿವಾಸ್, ಕೆ. ಸುನಿತಾ ಮತ್ತು ಈ. ಪೂಜಾ ಅವರು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಎಚ್.ಎಂ. ಪುಟ್ಟಸ್ವಾಮಿಗೌಡ ಕಾರ್ಯ ನಿರ್ವಹಿಸಿದರು.

ಇದೇ ವೇಳೆ ವಿಜೇತ ತಂಡಕ್ಕೆ ಸಮಾಜ ಸೇವಕ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಎಸ್.ಎನ್. ರಾಜೇಶ್, ಹರೀಶ್ ನಾಯ್ಡು, ಲೀಲಾ ನಾಯ್ಡು, ಆನಂದ್, ಚಿತ್ರನಟರಾದ ವಿಜಯ್ ಸೂರ್ಯ, ರಾಕೇಶ್ ನಾಯ್ಡು, ಕಿರಣ್ ನಾಯ್ಡು ಮೊದಲಾದವರು ಶುಭ ಕೋರಿದರು.