ಸಾರಾಂಶ
ಚಿರತೆ ದಾಳಿ ಮಾಡಿ 5 ಕುರಿ, 3 ಮೇಕೆಗಳನ್ನು ಬಲಿ ಪಡೆದಿರುವ ಘಟನೆ ಪಾಂಡವಪುರ ತಾಲೂಕಿನ ರಾಗಿಮುದನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಗ್ರಾಮದ ಮಹದೇವು ಬಿನ್ ಲೇಟ್ ಅಂಕೇಗೌಡರ ಅವರಿಗೆ ಸೇರಿದ ತೋಟದ ಮನೆಯಲ್ಲಿ ಕೂಡಿ ಹಾಕಿದ್ದ ಕುರಿ, ಮೇಕೆಗಳ ಮೇಲೆ ದಾಳಿ ಮಾಡಿರುವ ಚಿರತೆ ಒಟ್ಟು 8 ಸಾಕು ಪ್ರಾಣಿಗಳನ್ನು ಕೊಂದಿದೆ. ಇದರಿಂದ ರೈತನಿಗೆ ಸರಿಸುಮಾರು ಅಂದಾಜು 1.20 ಸಾವಿರ ರು. ನಷ್ಟವಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಚಿರತೆ ದಾಳಿ ಮಾಡಿ 5 ಕುರಿ, 3 ಮೇಕೆಗಳನ್ನು ಬಲಿ ಪಡೆದಿರುವ ಘಟನೆ ತಾಲೂಕಿನ ರಾಗಿಮುದನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಗ್ರಾಮದ ಮಹದೇವು ಬಿನ್ ಲೇಟ್ ಅಂಕೇಗೌಡರ ಅವರಿಗೆ ಸೇರಿದ ತೋಟದ ಮನೆಯಲ್ಲಿ ಕೂಡಿ ಹಾಕಿದ್ದ ಕುರಿ, ಮೇಕೆಗಳ ಮೇಲೆ ದಾಳಿ ಮಾಡಿರುವ ಚಿರತೆ ಒಟ್ಟು 8 ಸಾಕು ಪ್ರಾಣಿಗಳನ್ನು ಕೊಂದಿದೆ. ಇದರಿಂದ ರೈತನಿಗೆ ಸರಿಸುಮಾರು ಅಂದಾಜು 1.20 ಸಾವಿರ ರು. ನಷ್ಟವಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಹಜರು ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಈ ಭಾಗದಲ್ಲಿ ಚಿರತೆ ಹಿಡಿಯಲು ಬೋನಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.ಸೂಕ್ತ ಪರಿಹಾರಕ್ಕೆ ಆಗ್ರಹ:
ಚಿರತೆ ದಾಳಿಯಿಂದ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚುತ್ತಿದ್ದು ರೈತರ ಧನ, ಕರು, ಕುರಿ, ನಾಯಿ ಮುಂತಾದ ಸಾಕುಪ್ರಾಣಿಗಳನ್ನು ಆಗಾಗ್ಗೆ ಚಿರತೆ ದಾಳಿ ನಡೆಸಿ ಕೊಲ್ಲುತ್ತಿವೆ. ಇದರಿಂದ ಸಾರ್ವಜನಿಕರು ಓಡಾಡಲು ಭಯಪಡುತ್ತಿದ್ದಾರೆ.ಚಿರತೆ ದಾಲಿಯಿಂದ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ. ದಯವಿಟ್ಟು ಇಲಾಖೆಯಿಂದ ನೊಂದ ರೈತನಿಗೆ ಸೂಕ್ತ ಪರಿಹಾರ ನೀಡಿ ಈ ಭಾಗದಲ್ಲಿ ಚಿರತೆ ಹಾವಳಿ ತಪ್ಪಿಸಲು ಸೂಕ್ತ ಕ್ರಮ ವಹಿಸಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆ ಕಚೇರಿ ಎದುರು ಗ್ರಾಮಸ್ಥರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಂದು ಸಾಮಾಜಿಕ ಹೋರಾಟಗಾರ ರಾ.ಸ.ಹನುಮಂತೇಗೌಡ ಎಚ್ಚರಿಸಿದ್ದಾರೆ.
ಈ ವೇಳೆ ರೈತ ಮಹದೇವು, ರವಿಕುಮಾರ್, ರಾ.ಸ.ಹನುಮಂತೇಗೌಡ, ಅರಣ್ಯ ಇಲಾಖೆಯ ಸಿಬ್ಬಂದಿ ಲವ, ಕರಿಗೌಡ, ಅಶೋಕ್ ಹಾಗೂ ಗ್ರಾಮಸ್ಥರು ಹಾಜರಿದ್ದರು.