ಮೂಡಲಗಿಯ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರವು ಕಳೆದ 22 ವರ್ಷದಿಂದ ಸಾಧನೆಗೈಯುತ್ತ ಬಂದಿದೆ. ಇತ್ತೀಚಿಗೆ ಈ ಸಂಸ್ಥೆಯಲ್ಲಿ ತರಬೇತಿ ಪಡೆದು ಬೆಳಗಾವಿ ಎಆರ್‌ಒ ದಿಂದ ಒಟ್ಟು 50 ಅಭ್ಯರ್ಥಿಗಳು ಅಗ್ನಿವೀರರಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಸಾಧನೆ ಗರಿ ಮೈದುಂಬಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದ ಮೂಡಲಗಿಯ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರವು ಕಳೆದ 22 ವರ್ಷದಿಂದ ಸಾಧನೆಗೈಯುತ್ತ ಬಂದಿದೆ. ಇತ್ತೀಚಿಗೆ ಈ ಸಂಸ್ಥೆಯಲ್ಲಿ ತರಬೇತಿ ಪಡೆದು ಬೆಳಗಾವಿ ಎಆರ್‌ಒ ದಿಂದ ಒಟ್ಟು 50 ಅಭ್ಯರ್ಥಿಗಳು ಅಗ್ನಿವೀರರಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಸಾಧನೆ ಗರಿ ಮೈದುಂಬಿಕೊಂಡಿದೆ.

ಆಯ್ಕೆಯಾದ ಭಾವಿ ಅಗ್ನಿವೀರರನ್ನು ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ವೈ. ಅಡಿಹುಡಿ ಸತ್ಕರಿಸಿ ಅಭಿಂದಿಸಿದ್ದಾರೆ. ಈ ವೇಳೆ ಹಾಲಿ ಮತ್ತು ಮಾಜಿ ಸೈನಿಕರಿಗೂ ಸತ್ಕರಿಸಲಾಗಿದೆ.

ನಿವೃತ್ತ ಯೋಧ ಮಲ್ಲಿಕಾರ್ಜುನ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 22 ವರ್ಷಗಳಿಂದ ಈ ಸಂಸ್ಥೆಯ ಪ್ರತಿಯೊಂದು ಹೆಜ್ಜೆಗಳನ್ನು ಸಮೀಪದಿಂದ ನೋಡುತ್ತಾ ಆಲಿಸುತ್ತಾ ಬಂದಿದ್ದೇವೆ. ಈ ಸಂಸ್ಥೆಯೊಂದು ತರಬೇತಿ ಕೇಂದ್ರ ಮಾತ್ರವಾಗದೇ ಸೈನಿಕರನ್ನು ಉತ್ಪಾದಿಸುವ ಫ್ಯಾಕ್ಟರಿ ಎಂದರು. ನಾನು 24 ವರ್ಷಗಳ ಕಾಲ ದೇಶಸೇವೆ ಮಾಡಿದ್ದೇನೆ. ನನ್ನ ಮಗನು ಕೂಡ ಇದೆ ಸಂಸ್ಥೆಯಲ್ಲಿ ತರಬೇತಿ ಪಡೆದು ಈಗ ಹೊಸ ಹುರುಪಿನ ಅಗ್ನಿವಿರನಾಗಿ ಸೇವೆ ಸಲ್ಲಿಸುತಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.

ಅತಿಥಿ ಸುಭಾಸ ಗೊಡ್ಯಾಗೋಳ ಮಾತನಾಡಿ, ತಾಯಿ ಭಾರತಾಂಬೆಯ ಸೇವೆ ಮಾಡುವ ಈ ಒಂದು ಸುವರ್ಣಾವಕಾಶ ಎಲ್ಲರಿಗೂ ಸಿಗುವುದಿಲ್ಲ. ಈ ಒಂದು ಅವಕಾಶ ಸಿಕ್ಕಂತಹ ನೀವುಗಳು ಧನ್ಯರು. ನಿಮ್ಮ ಪರಿಶ್ರಮಕ್ಕೆ ಪ್ರತಿಯೊಬ್ಬ ಭಾರತೀಯ ಪ್ರಜೆಯು ತಲೆ ಭಾಗಬೇಕು ಮತ್ತು ಈ ಶಿಕ್ಷಣ ಸಂಸ್ಥೆ ನಿಸ್ವಾರ್ಥ ಸೇವೆ ಗೌರವಿಸೋಣ ಎಂದರು.

ಸಂಸ್ಥೆ ಸಂಸ್ಥಾಪಕ ಲಕ್ಷ್ಮಣ ಅಡಿಹುಡಿ ಮಾತನಾಡಿ, ನಮ್ಮ ಅಭ್ಯರ್ಥಿಗಳು ಅಗ್ನಿವೀರರಾಗಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಎಲ್ಲರೂ ನೆಮ್ಮದಿಯಿಂದ ಮಲಗಿರುವಾಗ ನಮ್ಮ ಅಭ್ಯರ್ಥಿಗಳು ತಮ್ಮ ನಿದ್ದೆ ತ್ಯಾಗ ಮಾಡಿ, ಬೆಳಗಿನ ಜಾವ 4ರಿಂದ ರಾತ್ರಿ 12ರವರೆಗೂ ಕೂಡ ತಮ್ಮ ದೈಹಿಕ ಮತ್ತು ಲಿಖಿತ ಪರೀಕ್ಷೆಗೆ ತಯಾರಿ ಮಾಡುತ್ತಾರೆ ಮತ್ತು ಅವರ ಜೊತೆ ನಮ್ಮ ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಯಿದ್ದು, ಅವರ ಕುಂದು ಕೊರತೆಗಳನ್ನು ಆಲಿಸುತ್ತಾ, ಸರಿಯಾದ ಮಾರ್ಗದರ್ಶನ ಮಾಡುವ ಮೂಲಕ ಈ ಸಾಧನೆ ಗರಿಗೆ ಸಾಕ್ಷಿಯಾಗಿದ್ದಾರೆ. ಎಲ್ಲರಿಗೂ ಕೂಡ ಹೃದಯ ಪೂರ್ವಕ ನಮನ ಸಲ್ಲಿಸಿದರು.

ಭೀಮಪ್ಪ ಗಡಾದ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಬಸಪ್ಪ ಹೆಗಡೆ, ಗೀತಾ ಕೊಡಗನೂರ, ರುಕ್ಮಿಣಿ ಶಿವಾಪುರ, ಮಹಾಂತೇಶ ಕೊಟಬಾಗಿ, ರವಿ ಕರಿಗಾರ, ಸಚಿನ ಕಾಂಬಳೆ, ಯಾಕೂಬ್ ಹಾದಿಮನಿ, ಮಹಾದೇವ ಸಿದ್ನಾಳ, ಅಭಿಷೇಕ ಕಟ್ಟಿಮನಿ, ಹಣಮಂತ ಅಂಗಡಿ, ಅಯೂಬ ಕಲಾರಕೊಪ್ಪ, ಮಲ್ಲು ಬುಜಣ್ಣವರ ಮತ್ತು ಅಗ್ನಿವೀರರು, ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಮತ್ತಿತರಿದ್ದರು. ಅಶೋಕ ಬಸಲಿಗುಂದಿ ನಿರೂಪಿಸಿದರು.