ಭಾರತೀಯ ಸಂಸ್ಕೃತಿ ಉತ್ಸವ ವಿಶೇಷ ಸಭೆಗೆ ಜಿಲ್ಲೆಯ 50 ಪ್ರತಿನಿಧಿಗಳು

| Published : Sep 27 2024, 01:15 AM IST

ಸಾರಾಂಶ

50 representatives of the district for the special meeting of the Indian Culture Festival

ಬೀದರ್: ಭಾರತೀಯ ಸಂಸ್ಕೃತಿ ಉತ್ಸವ ಹಾಗೂ ಕೊತ್ತಲ ಸ್ವರ್ಣ-2025 ಕಾರ್ಯಕ್ರಮದ ಪ್ರಯುಕ್ತ ಸೆ. 28 ಮತ್ತು 29 ರಂದು ಸೇಡಂನ ನೃಪತುಂಗ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ವಿಶೇಷ ಸಭೆಯಲ್ಲಿ ಜಿಲ್ಲೆಯ 50 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.

ಜಿಲ್ಲೆಯ ಎಂಟೂ ತಾಲೂಕುಗಳ ವಿಕಾಸ ಅಕಾಡೆಮಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕ ಡಾ. ಬಸವರಾಜ ಪಾಟೀಲ ಸೇಡಂ, ಸದಾಶಿವ ಸ್ವಾಮೀಜಿ, ಸಮಾಜ ಪರ ಚಿಂತಕರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಭೆ ಜರುಗಲಿದ್ದು, ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳ ವಿಕಾಸ ಅಕಾಡೆಮಿ ಸಂಚಾಲಕ, ಸಹ ಸಂಚಾಲಕ, 48 ತಾಲೂಕು ಸಂಚಾಲಕ, ಸಹ ಸಂಚಾಲಕ ಹಾಗೂ ಪ್ರಮುಖ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

28 ರಂದು ಭಾರತೀಯ ಸಂಸ್ಕೃತಿ ಉತ್ಸವ ಹಾಗೂ ಕೊತ್ತಲ ಸ್ವರ್ಣ ಯಶಸ್ವಿಗೆ ಕೈಗೊಳ್ಳಬೇಕಾದ ಸಿದ್ಧತಾ ಕಾರ್ಯಗಳ ಕುರಿತು ಚರ್ಚೆ ನಡೆಯಲಿದೆ. 29 ರಂದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಆಗಲಿದೆ ಎಂದು ಹೇಳಿದ್ದಾರೆ.

ಭಾರತೀಯ ಸಂಸ್ಕೃತಿ ಉತ್ಸವವು 2025 ರ ಜನವರಿ 29 ರಿಂದ ಫೆಬ್ರುವರಿ 6 ರ ವರೆಗೆ ಜರುಗಲಿದೆ ಎಂದು ಜಲಾದೆ ತಿಳಿಸಿದ್ದಾರೆ.

--

ಚಿತ್ರ 26ಬಿಡಿಆರ್55

ರೇವಣಸಿದ್ದಪ್ಪ ಜಲಾದೆ