ಹೋಟೆಲ್‌ವೊಂದರಲ್ಲಿ 500 ರು. ನಕಲಿ ನೋಟ್‌ ಕೊಟ್ಟು ಚಿಕನ್‌ ಬಿರಿಯಾನಿ ತಿಂದ ಇಬ್ಬರ ಸೆರೆ

| N/A | Published : Mar 21 2025, 12:34 AM IST / Updated: Mar 21 2025, 09:32 AM IST

ಹೋಟೆಲ್‌ವೊಂದರಲ್ಲಿ 500 ರು. ನಕಲಿ ನೋಟ್‌ ಕೊಟ್ಟು ಚಿಕನ್‌ ಬಿರಿಯಾನಿ ತಿಂದ ಇಬ್ಬರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಹೋಟೆಲ್‌ವೊಂದರಲ್ಲಿ ಚಿಕನ್‌ ಬಿರಿಯಾನಿ ತಿಂದ ಇಬ್ಬರು ವ್ಯಕ್ತಿಗಳು ಮಾಲೀಕನಿಗೆ ಮಕ್ಕಳಾಡುವ (ಚಿಲ್ಡ್ರನ್‌ ಬ್ಯಾಂಕ್‌ ಆಫ್‌ ಇಂಡಿಯಾ) ₹500ರ ನಕಲಿ ನೋಟ್‌ ಕೊಟ್ಟು ಬಿಲ್‌ ಪಾವತಿಸಿ ವಂಚಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಗುರುವಾರ ನಡೆದಿದೆ.  

 ರಾಯಚೂರು : ಹೋಟೆಲ್‌ವೊಂದರಲ್ಲಿ ಚಿಕನ್‌ ಬಿರಿಯಾನಿ ತಿಂದ ಇಬ್ಬರು ವ್ಯಕ್ತಿಗಳು ಮಾಲೀಕನಿಗೆ ಮಕ್ಕಳಾಡುವ (ಚಿಲ್ಡ್ರನ್‌ ಬ್ಯಾಂಕ್‌ ಆಫ್‌ ಇಂಡಿಯಾ) ₹500ರ ನಕಲಿ ನೋಟ್‌ ಕೊಟ್ಟು ಬಿಲ್‌ ಪಾವತಿಸಿ ವಂಚಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಗುರುವಾರ ನಡೆದಿದೆ. 

ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ ಹಾಗೂ ರಮೇಶ್ ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ನಗರದ ಬಿರಿಯಾನಿ ಹೋಟೆಲ್‌ನಲ್ಲಿ ಚಿಕನ್ ಬಿರಿಯಾನಿ ತಿಂದು ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದ ₹500ರ ನಕಲಿ ನೋಟನ್ನು ನೀಡಿ ಬಿಲ್‌ ಪಾವತಿಸಿದ್ದಾರೆ.

 ಇದಾದ ಸ್ವಲ್ಪ ಹೊತ್ತಿನ ಬಳಿಕ ಹೋಟೆಲ್ ಮಾಲೀಕನಿಗೆ ಅನುಮಾನ ಬಂದು ನೋಟನ್ನು ಪರಿಶೀಲನೆ ನಡೆಸಿದಾಗ ನೋಟು ನಕಲಿಯದ್ದು ಎಂಬುದು ಬಯಲಾಗಿದೆ. 

ಈ ಸಂಬಂಧ ಹೋಟೆಲ್ ಮಾಲೀಕ ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಕಲಿ ನೋಟು ಕೊಟ್ಟು ಬಿರಿಯಾನಿ ತಿಂದಿದ್ದ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲಿ ಖೋಟಾ ನೋಟು ಜಾಲ ಪತ್ತೆಯಾದ ಬೆನ್ನಲ್ಲೇ ಮತ್ತೊಂದು ನಕಲಿ ನೋಟಿನ ಪ್ರಕರಣ ಜರುಗಿರುವುದು ವ್ಯಾಪಾರಸ್ಥರು, ಜನರಲ್ಲಿ ಆತಂಕ ಮೂಡಿಸಿದೆ.