ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ ಬುಕ್‌, ಪೆನ್ನು ವಿತರಣೆ

| Published : Aug 28 2024, 12:50 AM IST

ಸಾರಾಂಶ

ಉಮಾಪತಿ ಶ್ರೀನಿವಾಸ್ ಅವರ ಸರಳ ಸಜ್ಜನಿಕೆಗೆ ನಾವು ಅಭಿಮಾನಿಗಳಾಗಿದ್ದೇವೆ. ನಮ್ಮ ಸಂಘದ ಉದ್ದೇಶ ಗ್ರಾಮೀಣ ಪ್ರದೇಶದ ಮಕ್ಕಳು ಮುಂಚೂಣಿಯಲ್ಲಿರಬೇಕು. ಅವರ ಬೆಳವಣಿಗೆಗೆ ಯಾವುದೇ ಸಹಕಾರಗಳನ್ನಾದರೂ ನಮ್ಮ ಸಂಘ ನೀಡುತ್ತದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಸರ್ಕಾರಿ ಶಾಲೆಯ ಮಕ್ಕಳ ಬೆಳವಣಿಗೆಗೆ ಸರ್ಕಾರದ ಸೌಲಭ್ಯಗಳ ಜೊತೆಗೆ ಸಂಘ-ಸಂಸ್ಥೆಯ ಸಹಕಾರ ಪ್ರಮುಖವಾಗಿದೆ ಎಂದು ಅಖಿಲ ಕರ್ನಾಟಕ ಉಮಾಪತಿ ಶ್ರೀನಿವಾಸ್‌ಗೌಡ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ ತಿಳಿಸಿದರು.

ಇಲ್ಲಿಗೆ ಸಮೀಪದ ಮೆಳ್ಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್‌ಬುಕ್, ಪೆನ್ನುಗಳನ್ನು ವಿತರಿಸಿ ಮಾತನಾಡಿ, ಉಮಾಪತಿ ಅವರು ತಾವು ಎಷ್ಟೇ ದೊಡ್ಡಮಟ್ಟದಲ್ಲಿದ್ದರೂ ಸಹ ಸಾಮಾನ್ಯರಾಗಿಯೇ ಇದ್ದು ತಮ್ಮ ಜೀವನದ ಜೊತೆಗೆ ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಅವರ ಅಭಿಮಾನಕ್ಕಾಗಿ ನಾವು ಅವರ ಹೆಸರಿನಲ್ಲಿ ಸಂಘ-ಸಂಸ್ಥೆಗಳನ್ನು ಕಟ್ಟಿ ಬಡ ವಿದ್ಯಾರ್ಥಿಗಳಿಗೆ ಹಾಗೂ ನೊಂದವರಿಗೆ ನೆರವಾಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಸಂಘ ದೊಡ್ಡಮಟ್ಟದಲ್ಲಿ ಕೆಲಸ ಮಾಡುವುದಾಗಿ ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ನಿರಂಜನ್‌ಗೌಡ ಮಾತನಾಡಿ, ಉಮಾಪತಿ ಶ್ರೀನಿವಾಸ್ ಅವರ ಸರಳ ಸಜ್ಜನಿಕೆಗೆ ನಾವು ಅಭಿಮಾನಿಗಳಾಗಿದ್ದೇವೆ. ನಮ್ಮ ಸಂಘದ ಉದ್ದೇಶ ಗ್ರಾಮೀಣ ಪ್ರದೇಶದ ಮಕ್ಕಳು ಮುಂಚೂಣಿಯಲ್ಲಿರಬೇಕು. ಅವರ ಬೆಳವಣಿಗೆಗೆ ಯಾವುದೇ ಸಹಕಾರಗಳನ್ನಾದರೂ ನಮ್ಮ ಸಂಘ ನೀಡುತ್ತದೆ ಎಂದರು.

ಇದೇ ವೇಳೆ ಸಂಘದ ಉಪಾಧ್ಯಕ್ಷ ಹಿಟ್ಟನಹಳ್ಳಿ ಕೊಪ್ಪಲು ಚೇತನ್, ಗ್ರಾಪಂ ಸದಸ್ಯರಾದ ವಿನಯ್, ರವಿಚಂದ್ರ, ರಾಘವೇಂದ್ರ, ವೆಂಕಟೇಶ್, ಆಸರೆ ಸೇವಾಟ್ರಸ್ಟ್ ರಘು, ಚಾಕನಹಳ್ಳಿ ಶಿವರಾಜು, ಹೊಂಬೇಗೌಡನದೊಡ್ಡಿ ನಾಗರಾಜು, ಅರ್ಕೇಶ್, ಶಿವಮಾದು, ರಂಜಿತ್, ಗುಡಿಗೆರೆ ಕಾಂತರಾಜು ಸೇರಿದಂತೆ ಹಲವರಿದ್ದರು.