ನಾಡಪ್ರಭು ಕೆಂಪೇಗೌಡರ 515 ಜಯಂತಿ

| Published : Jun 28 2024, 12:54 AM IST

ಸಾರಾಂಶ

ಕೊರಟಗೆರೆ ತಾಪಂ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ 515 ಜಯಂತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಪರಿಶ್ರಮ, ಜಾತ್ಯಾತೀತ ಭಾವನೆ, ತಂತ್ರಜ್ಞಾನ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು. ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ 515 ಜಯಂತಿಯ ಅದ್ಯಕ್ಷತೆ ವಹಿಸಿ ಮಾತನಾಡಿ, ಒಂದು ಬರ ಪ್ರದೇಶವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂದು ಕೆಂಪೆಗೌಡರರು ತೋರಿಸಿಕೊಟ್ಟಿದ್ದಾರೆ, ಬೆಂದಕಾಳೂರು ಆಗಿದ್ದ ಬೆಂಗಳೂರನ್ನು ಈ ವಿಶ್ವಮಟ್ಟದ ಜಾಗತಿಕ ನಗರ ಮಾಡಿರುವುದು ಒಂದು ಅಧ್ಬುತವಾದ ಕಾರ್ಯವಾಗಿದೆ, ಬೆಂಗಳೂರು ನಗರ ನಿರ್ಮಾಣ ಮಾಡುವಾಗ ಸುಮಾರು 3500 ಕೆರಗಳನ್ನು , 250 ದೇವಾಲಯಗಳನ್ನು ಕಟ್ಟಿದ್ದಾರೆ, ಎಲ್ಲಾ ಜನಾಂಗದ ಕುಲ ಕಸಬುಗಳನ್ನು ಆಧಾರಸಿ ಅವುಗಳನ್ನು ಮುನ್ನೆಲೆಗೆ ತರಲು ಕಸುಬಿನ ಆಧಾರದ ಮೇಲೆ ಸಣ್ಣ ಪ್ರಾಂತ್ಯಗಳನ್ನು ಮಾಡಿದರು ಅವರ ಆ ದೂರದೃಷ್ಟಿಯ ಪರಿಣಾಮ ಇಂದು ಬೆಂಗಳೂರು ಸುಮಾರು 2 ಕೋಟಿ ಜನಕ್ಕೆ ಆಶ್ರಯ ನೀಡಿದೆ, ದೇಶ ವಿದೇಶಗಳ ಜನರು ನೆಲಸಿದ್ದಾರೆ, ಕರ್ನಾಟಕ ರಾಜ್ಯಕ್ಕೆ ಅರ್ದದಷ್ಟು ಆದಾಯ ಬೆಂಗಳೂರು ನಗರ ಒಂದೇ ನೀಡುತ್ತಿದೆ ಇದರಿಂದ ರಾಜ್ಯದ ಹಲವು ಆಭಿವೃದ್ಧಿ ಕೆಲಸಗಳಿಗೆ ಕೊಡಿಗೆ ನೀಡಿದೆ ಇದಕ್ಕೆ ಕಾರಣ ಕೆಂಪೇಗೌಡರು, ಇಂತಹ ಮಹನೀಯರು ಜಯಂತಿಯನ್ನು ವಿಶೇಷತೆಯನ್ನು ಚರಿತ್ರೆಯನ್ನು ಶಾಲಾ ಮಕ್ಕಳಿಗೆ ಸಲ್ಲಿಸಲು ಸರ್ಕಾರ ಅವರಗಳ ಹೆಸರಿನಲ್ಲಿ ಪ್ರಭಂಧ, ಚಿತ್ರಕಲೆ, ಭಾಷಣ, ಚರ್ಚಾಸ್ಪರ್ಧೆಗಳನ್ನು ಏರ್ಪಡಿಸದ್ದು ಸ್ಪರ್ಧೆಯು ಪ್ರಾರ್ಥಮಿಕ, ಹಿರಿಯ ಪ್ರಾರ್ಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಹಂತಗಳಲ್ಲಿ ನಡೆಸಲಾಗಿದ್ದು ವಿಜೇತ 36ವಿದ್ಯಾರ್ಥಿಗಳನ್ನು ಬಹುಮಾನದೊಂದಿಗೆ ಸನ್ಮಾನಿಸಲಾಗುವುದು ಎಂದ ಅವರು ಕೆಂಪೇಗೌಡರು ಗಂಗೆ ಗೌರಿ ವಿಲಾಸ ಎನ್ನುವ ಕೃತಿಯನ್ನು ಬರೆದಿದ್ದಾರೆ ಎಂದರು.ಈ ವೇಳೆ ತಾಪಂ ಇಒ ಅಪೂರ್ವ, ತಾಲೂಕು ಮಟ್ಟದ ಅಧಿಕಾರಿಗಳಾದ ನಟರಾಜು, ಅನಂತರಾಜು, ರವಿ, ಶಿಲ್ಪ, ಅಂಬಿಕಾ, ಯಮುನಾ, ನಾಗಭೂಷಣ್, ರುದ್ರಪ್ಪ, ಸರ್ಕಾರಿ ನೌಕರ ಸಂಘದ ಅದ್ಯಕ್ಷ ರುದ್ರೇಶ್, ಕಸಾಪ ಅದ್ಯಕ್ಷ ಈರಣ್ಣ, ವಕ್ಕಲಿಗಸಂಘಧ ಅದ್ಯಕ್ಷ ರಂಗನರಸಯ್ಯ, ಜನಾಂಗ ಮುಖಂಡರುಗಳಾದ ಪಟ್ಟನರಸಪ್ಪ, ಈಶ್ವರಯ್ಯ, ಕಾಮರಾಜು, ಗಟ್ಲಹಳ್ಳಿಕುಮಾರ್, ನರಸಿಂಹರಾಜು, ವೆಂಕಟಪ್ಪ, ಎಲ್.ವಿ.ಪ್ರಕಾಶ್, ಜಯಮ್ಮ ಲಕ್ಷಮ್ಮ, ಲಕ್ಷ್ಮೀಶ್, ದಾಸರಹಳ್ಳಿ ರಮೇಶ್, ಸಾಕರಾಜು, ಹನುಮಂತರಾಯಪ್ಪ, ಮತ್ತಿತರರಿದ್ದರು.