55 ನಾಡ ಬಾಂಬ್ ವಶ, ಆರೋಪಿ ಬಂಧನ

| Published : Nov 11 2023, 01:17 AM IST

ಸಾರಾಂಶ

ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಸು ಗ್ರಾಮದ ಅರಣ್ಯ ಪ್ರದೇಶದಲ್ಲಿ ಜಿಲೆಟಿನ್‌ನಿಂದ ತಯಾರಿಸಿದ 55 ಸಜೀವ ನಾಡ ಬಾಂಬ್‌

ಜೋಯಿಡಾ: ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಸು ಗ್ರಾಮದ ಅರಣ್ಯ ಪ್ರದೇಶದಲ್ಲಿ ಜಿಲೆಟಿನ್‌ನಿಂದ ತಯಾರಿಸಿದ 55 ಸಜೀವ ನಾಡ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಮೂಲದ ರಜಪೂತ್ ರಾಜ್ ಸಿಂಗ್ ಬಂಧಿತ ಆರೋಪಿ. ಈತ ನಾಡಬಾಂಬ್‌ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದು, ನಾಡ ಬಾಂಬ್‌ ಇದ್ದ ಚೀಲವನ್ನು ಆತ ಅರಣ್ಯದಲ್ಲಿ ಮುಚ್ಚಿಟ್ಟಿದ್ದ ಮಾಹಿತಿ ನೀಡಿದ್ದಾನೆ. ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ನಾಡಬಾಂಬ್‌ಗಳಿದ್ದ ಚೀಲವನ್ನು ಕಾರವಾರದ ವಿದ್ವಂಸಕ ಕೃತ್ಯ ತಪಾಸಕ ತಂಡ ಸಮಕ್ಷಮ ಪರಿಶೀಲಿಸಿದ್ದಾರೆ.ದಾಳಿಯಲ್ಲಿ ಪಿಎಸ್‌ಐ ಬಸವರಾಜ ಮಬನೂರ, ಪಿಎಸ್‌ಐ ಕೃಷ್ಣಕಾಂತ ಪಾಟೀಲ, ಸಿಬ್ಬಂದಿಗಳಾದ ನಾಮದೇವ ಕಂಕಾಳಿ, ಉಮೇಶ ದ್ಯಾಮಣ್ಣವರ, ಹಾಲಪ್ಪ ಬಾಗಿ, ಸದಾಶಿವ ಮತ್ತು ಈರಣ್ಣ ಪಾಲ್ಗೊಂಡಿದ್ದರು.