ಸಾರಾಂಶ
ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿಯ ಶೃಂಗಾರಬಾಗು ತಾಂಡದ ಸರ್ವೆ ನಂಬರ್: 16ರಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿನ 56 ಎಕರೆ ಅರಣ್ಯ ಭೂಮಿಯನ್ನು ರೈತರು ಸಾಗುವಳಿ ಮಾಡಿದ್ದರು. ಈ ಭೂಮಿಯನ್ನು ಶುಕ್ರವಾರ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ ಎಂದು ಮಾವಿನಕಟ್ಟೆಯ ವಲಯ ಅರಣ್ಯಾಧಿಕಾರಿ ಜಗದೀಶ್ ಹೇಳಿದ್ದಾರೆ.
- ಎಸಿಎಫ್ ರತ್ನಪ್ರಭ ನೇತೃತ್ವದಲ್ಲಿ ಕಾರ್ಯಾಚರಣೆ: ಜಗದೀಶ
- ಹಲವು ಗ್ರಾಮಗಳಲ್ಲೂ ಒತ್ತುವರಿ ರೈತರಿಗೆ ನೋಟಿಸ್ ಜಾರಿ- - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ತಾಲೂಕಿನ ಬಸವಾಪಟ್ಟಣ ಹೋಬಳಿಯ ಶೃಂಗಾರಬಾಗು ತಾಂಡದ ಸರ್ವೆ ನಂಬರ್: 16ರಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿನ 56 ಎಕರೆ ಅರಣ್ಯ ಭೂಮಿಯನ್ನು ರೈತರು ಸಾಗುವಳಿ ಮಾಡಿದ್ದರು. ಈ ಭೂಮಿಯನ್ನು ಶುಕ್ರವಾರ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ ಎಂದು ಮಾವಿನಕಟ್ಟೆಯ ವಲಯ ಅರಣ್ಯಾಧಿಕಾರಿ ಜಗದೀಶ್ ಹೇಳಿದರು.
ಎ.ಸಿ.ಎಫ್. ರತ್ನಪ್ರಭ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ರೈತರಿಗೆ ಕಾನೂನು ಪ್ರಕಾರವಾಗಿಯೇ ಈ ಹಿಂದೆ ನೋಟಿಸ್ ನೀಡಲಾಗಿತ್ತು. ಆದರೂ ರೈತರು ಭೂಮಿ ತೆರವುಗೊಳಿಸಿರಲಿಲ್ಲ. ಈ ಕಾರಣದಿಂದಾಗಿ ಎ.ಸಿ.ಎಫ್. ನ್ಯಾಯಾಲಯದ ಅಂತಿಮ ಆದೇಶದಂತೆ ಅರಣ್ಯ ಭೂಮಿಯನ್ನು ಜೆ.ಸಿ.ಬಿ. ಯಂತ್ರದ ಮೂಲಕ ಜಾಗ ಗುರುತಿಸಿಕೊಳ್ಳುವ ಕಾಲುವೆಯನ್ನು ತೆಗೆದು ಇಲಾಖೆಯ ವಶಕ್ಕೆ ಪಡೆಯಲಾಗಿದೆ ಎಂದರು.ತಾಲೂಕಿನ ಶಿವಗಂಗೆ ಹಾಳ್, ಮಾವಿನಕಟ್ಟೆ, ದಾಗಿನಕಟ್ಟೆ, ಎನ್.ಬಸವನಹಳ್ಳಿ ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿಯೂ ಅರಣ್ಯ ಭೂಮಿ ಒತ್ತುವರಿಯಾಗಿದೆ. ಈಗಾಗಲೇ ಆ ಭಾಗದ ಭೂಮಿಯನ್ನು ಒತ್ತುವರಿ ಮಾಡಿಕೊಂಡ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎ.ಸಿ.ಎಫ್. ನ್ಯಾಯಾಲಯದ ಅಂತಿಮ ಆದೇಶ ಬಂದ ನಂತರ ಆ ಭಾಗದಲ್ಲಿಯೂ ಅರಣ್ಯ ಭೂಮಿಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ, ಭೂಮಿ ಇಲಾಖೆ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಜಗದೀಶ್ ಸೇರಿದಂತೆ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.- - - -23ಕೆಸಿಎನ್‌ಜಿ2:
ಚನ್ನಗಿರಿ ತಾಲೂಕಿನ ಶೃಂಗಾರಬಾಗು ಸರ್ವೆ ನಂಬರ್: 16ರ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿದ್ದ ಜಮೀನನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದರು.