ಸಾರಾಂಶ
ಬಸವಕಲ್ಯಾಣದ ದೊಡ್ಡಪ್ಪ ಅಪ್ಪ ಬಿಸಿಎ ಕಾಲೇಜಿಗೆ 5 ರ್‍ಯಾಂಕ್ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಪೂಜ್ಯರಿಂದ ಸನ್ಮಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ದೊಡ್ಡಪ್ಪ ಅಪ್ಪ ಬಿಸಿಎ ಮಹಾವಿದ್ಯಾಲಯಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಐದು ರ್‍ಯಾಂಕ್ ಬಂದಿರುತ್ತವೆ ಎಂದು ಪ್ರಾಚಾರ್ಯ ಲೋಕೇಶ ಮನ್ನಾಳೆ ತಿಳಿಸಿದ್ದಾರೆ.2022-23ನೇ ಸಾಲಿನ ಬಿಸಿಎ ಪದವಿ ವಿಭಾಗದ ಪರೀಕ್ಷಾ ಫಲಿತಾಂಶವು ಗುಲಬರ್ಗಾ ವಿವಿ ಪ್ರಕಟಿಸಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯ ನೀಡುವ ಹತ್ತು ರ್‍ಯಾಂಕ್‌ಗಳಲ್ಲಿ ಐದು ರ್‍ಯಾಂಕ್‌ಗಳು ಬಸವಕಲ್ಯಾಣದ ದೊಡ್ಡಪ್ಪ ಅಪ್ಪ ಬಿಸಿಎ ಮಹಾವಿದ್ಯಾಲಯಕ್ಕೆ ಲಭಿಸಿದ್ದು ಕಾಲೇಜಿನ ಕೀರ್ತಿ ಹೆಚ್ಚಿಸಿದೆ.
ವಿದ್ಯಾರ್ಥಿಗಳಾದ ವೈಶಾಲಿ ಸಂಗಪ್ಪ ಮಾಲಾಡೆ 2ನೇ, ಬಿ.ದಿಕ್ಷೀತಾ ಮಾಣಿಕರೆಡ್ಡಿ 4ನೇ, ಸುಧಾರಾಣಿ ವೀರಯ್ಯ 6ನೇ, ವೈಭವ ದತ್ತಾತ್ರೆಯ 8ನೇ ಹಾಗೂ ಭಾಗ್ಯಶ್ರೀ ಸುಭಾಷ 10ನೇ ರ್‍ಯಾಂಕ್ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ.ಶರಣಬಸವಪ್ಪ ಅಪ್ಪಾಜೀಯವರು ವಿದ್ಯಾರ್ಥಿಗಳ ಸತತ ಪರಿಶ್ರಮ ಮತ್ತು ಅಧ್ಯಾಪಕರ ಮಾರ್ಗದರ್ಶನದಿಂದ ಕಾಲೇಜಿಗೆ ಒಳ್ಳೆಯ ಫಲಿತಾಂಶ ಹಾಗೂ ರ್‍ಯಾಂಕ್ ಬಂದಿವೆ ಎಂದು ಶ್ಲಾಘಿಸಿದರು.ಸಂಸ್ಥೆ ಮುಖ್ಯಸ್ಥರಾದ ಮಾತೋಶ್ರೀ ದಾಕ್ಷಾಯಣಿ ಎಸ್ ಅಪ್ಪ ಹಾಗೂ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ವಿದ್ಯಾರ್ಥಿಗಳು ಮತ್ತು ಅವರ ಪಾಲಕರನ್ನು ಸಂಸ್ಥೆ ಅಧ್ಯಕ್ಷರು ಗುಲ್ಬರ್ಗಾದ ಅವರ ಮಹಾಮಠದಲ್ಲಿ ಸನ್ಮಾನಿಸಿ ಶುಭಹಾರೈಸಿದರು.
ವಿದ್ಯಾರ್ಥಿಗಳ ಈ ಸಾಧನೆಗೆ ಮಹಾವಿದ್ಯಾಲಯದ ಉಪನ್ಯಾಸಕರಾದ ಶಾಂತಕುಮಾರ ಭೂರೆ, ಶಿಲ್ಪಾರಾಣಿ ಖಿಂಡಿಮಠ, ಶಶಿಧರ ಪಾಟೀಲ್, ಶಿವಕುಮಾರ ಖೋಲ್ಲೆ, ವಿವೇಕಾನಂದ ಶಿಂಧೆ, ಶಿವಶರಣ ಮಮ್ಮಾ, ನೀಲೇಶಕುಮಾರ ಟೊಂಪೆ, ಇಂದ್ರಜೀತ ರೆಡ್ಡಿ, ವಾಣಿಶ್ರೀ ಪಾಟೀಲ್ ಮತ್ತು ಸುಪ್ರೀಯಾ ಶೆಟಗಾರ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದ್ದಾರೆ.