ಸಾರಾಂಶ
ಲಿಂಗದಹಳ್ಳಿ ಸಂಪಿಗೆ ತಿರುವಿನ ರಸ್ತೆ ಕಾಮಗಾರಿಗೆ ಚಾಲನೆ। ನನೆಗುದಿಗೆ ಬಿದ್ದಿದ್ದ ರಸ್ತೆಗೆ ₹15ಲಕ್ಷದಲ್ಲಿ ಜಲ್ಲಿ ಮೆಟ್ಲಿಂಗ್
ಕನ್ನಡಪ್ರಭ ವಾರ್ತೆ, ಬೀರೂರು.ಗ್ರಾಮೀಣ ರಸ್ತೆಗಳ ಸುಧಾರಣೆ, ಅಭಿವೃದ್ಧಿಗಾಗಿ ಶಾಸಕ ಕೆ.ಎಸ್.ಆನಂದ್ ಸರ್ಕಾರದಿಂದ ₹6ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂದು ತಾಲೂಕು ಬಗರ್ ಹುಕುಂ ಕಮಿಟಿ ಸದಸ್ಯ ಹೊಗರೇಹಳ್ಳಿ ಶಶಿಕುಮಾರ್ ತಿಳಿಸಿದರು.ಪಟ್ಟಣದ ಲಿಂಗದಹಳ್ಳಿ ರಸ್ತೆ ಬೊಮ್ಮಜ್ಜಿ ಕ್ರಾಸ್ ನ ಸಂಪಿಗೆ ಮೂಲೆ ತಿರುವಿನ ರಸ್ತೆಗೆ ₹15ಲಕ್ಷಗಳ ಜಲ್ಲಿ ಮೆಟ್ಲಿಂಗ್ ಕಾಮ ಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈ ರಸ್ತೆಯನ್ನು 1ಕಿ.ಮೀ ವರೆಗೂ ಜಲ್ಲಿ ಮೆಟ್ಲಿಂಗ್ ಕಾಮಗಾರಿ ಮಾಡಲಾ ಗುವುದು. ಶಾಸಕ ಕೆ.ಎಸ್. ಆನಂದ್ ಅವರು ರೈತರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಇಂತಹ ಗ್ರಾಮೀಣ ಭಾಗದ ರಸ್ತೆಗಳನ್ನು ಆಯ್ಕೆಮಾಡಿಕೊಂಡು ರಸ್ತೆ ಕಾಮಗಾರಿ ಮಾಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮೀಣ ಭಾಗ ಗಳಲ್ಲಿಯೂ ರಸ್ತೆ ಕಾಮಗಾರಿ ಮಾಡಿಸುವ ಮುಖಾಂತರ ದೇಶಕ್ಕೆ ಅನ್ನ ನೀಡುವ ರೈತರ ಬೆನ್ನೆಲುಬಾಗಿ ನಿಲ್ಲಲು ಹೋರಾಟ ನಡೆಸುತ್ತಿದ್ದಾರೆ. ಇಂತಹ ಶಾಸಕರ ಪರವಾಗಿ ರೈತರು ನಿಲ್ಲಬೇಕು ಎಂದರು.ರೈತ ಕಾಶಿನಾಥ್ ಮಾತನಾಡಿ, ಈ ಸಂಪಿಗೆ ಮೂಲೆ ರಸ್ತೆ ಮಣ್ಣು ಕಂಡು 30 ವರ್ಷಗಳಾಗಿತ್ತು, ದಿನ ನಿತ್ಯ ರೈತರು ತಮ್ಮ ಜಮೀನು, ತೋಟಗಳಿಗೆ ತೆರಳಲು ಹರಸಾಹಸವೇ ಪಡಬೇಕಾಗಿತ್ತು. ಮಳೆಗಾಲದಲ್ಲಿ ಟ್ರಾಕ್ಟರ್, ಬೈಕ್ ಗಳು ಹೂತು ಅದೆಷ್ಟೋ ಹಾನಿಯಾಗಿರುವ ಬಗ್ಗೆ ತಾಲೂಕು ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿರಲಿಲ್ಲ. ಶಾಸಕ ಕೆ.ಎಸ್. ಆನಂದ್ ರೈತ ಕುಟುಂಬದಿಂದ ಬಂದ ಹಿನ್ನಲೆಯಲ್ಲಿ ನಮ್ಮ ಸಮಸ್ಯೆಗಳನ್ನು ಅರಿತು ಇಲ್ಲಿ ನೂತನ ರಸ್ತೆ ಕಾಮ ಗಾರಿಗೆ ಚಾಲನೆ ನೀಡಿರುವುದು ಸಂತಸ ತಂದಿದೆ. ಈ ದೇಶದಲ್ಲಿ ಅನ್ನ ನೀಡುವ ರೈತ, ಮತ್ತು ಗಡಿ ಕಾಯುವ ಸೈನಿಕನ ಕುಟುಂಬಗಳು ನೆಮ್ಮದಿಯಾಗಿ ಬಾಳಿದರೆ ದೇಶದ ನೆಮ್ಮದಿ ವಾತಾವರಣ ಸೃಷ್ಟಿಗೆ ಪುಷ್ಟಿ ನೀಡುತ್ತದೆ ಎಂದರು.ಈ ಸಂದರ್ಭದಲ್ಲಿ ರೈತರಾದ, ಗುರುಮೂರ್ತಿ , ಬಿ.ಸಿ.ಕುಮಾರ್, ಚಂದು, ಬಿ.ಪ್ರಕಾಶ್, ಯತೀಶ್, ಲೋಕೇಶ್, ಹಾಲಪ್ಪ, ನಾಗರಾಜ್ ಸೇರಿದಂತೆ ಮತ್ತಿತರ ರೈತರು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.15 ಬೀರೂರು 1 ಬೀರೂರಿನ ಲಿಂಗದಹಳ್ಳಿ ರಸ್ತೆಯ ಬೊಮ್ಮಜ್ಜಿ ಕ್ರಾಸ್ನ ಸಂಪಿಗೆ ಮೂಲೆ ತಿರುವಿನ 1.ಕಿ.ಮೀ ರಸ್ತೆಗೆ 15ಲಕ್ಷರೂಗಳ ಜಲ್ಲಿ ಮೆಟ್ಲಿಂಗ್ ಕಾಮಗಾರಿಗೆ ತಾಲೂಕು ಬಗರ್ ಹುಕುಂ ಕಮಿಟಿ ಸದಸ್ಯ ಹೊಗರೇಹಳ್ಳಿ ಶಶಿಕುಮಾರ್ ಭೂಮಿ ಪೂಜೆ ನೆರವೇರಿಸಿದರು.