ಕನ್ನಡಪ್ರಭ ವಾರ್ತೆ, ಶಿಡ್ಲಘಟ್ಟ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂ. 21ರಂದು ನಡೆಯಲಿರುವ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕ್ಷೇತ್ರದಿಂದ 6 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲು ಸಿದ್ಧತೆ ನಡೆದಿದೆ ಎಂದು ಎಬಿಡಿ ಸಂಸ್ಥೆಯ ಅಧ್ಯಕ್ಷ ರಾಜೀವ್‌ಗೌಡ ಹೇಳಿದರು.ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ 100 ಬಸ್ಸುಗಳ ಮೂಲಕ ಪ್ರತಿ ಪಂಚಾಯಿತಿಗೆ ಎರಡು ಬಸ್ಸು ಮತ್ತು ನಗರದ ವಾರ್ಡಿಗೆ ಒಂದರಂತೆ ಹಾಗೂ ಮುಖಂಡರು ಕಾರುಗಳ ಮೂಲಕ ಸುಮಾರು 6 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇದೇ 21 ರಂದು ಆಯೋಜಿಸಿದ್ದ ಸ್ಥಳೀಯ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಪದಗ್ರಹಣ ಸಮಾರಂಭದ ಬಳಿಕ ಮತ್ತೊಂದು ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ. ಮುಂದಿನ ಸಚಿವ ಸಂಪುಟದಲ್ಲಿ ಬಾಗೇಪಲ್ಲಿ ಕ್ಷೇತ್ರದ ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರನ್ನು ಒತ್ತಾಯಿಸಿದ್ದೇವೆ ಎಂದರು.ಈ ಸಂದರ್ಭದಲ್ಲಿ ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಅಪ್ಸರ್ ಪಾಷ, ರಾಯಪಲ್ಲಿ ಅಶ್ವಥ್ ರೆಡ್ಡಿ, ಹಿರಿಯ ಸಿಪಿಎಂ ಹೋರಾಟಗಾರರಾದ ಕುಂದಲಗುರ್ಕಿ ವೆಂಕಟೇಶ್, ಕಾಂಗ್ರೆಸ್ ಮುಖಂಡ ಗುಡಿಯಪ್ಪ, ಗುಡಿಹಳ್ಳಿ ಬಂಗಾರಪ್ಪ, ಕಂಪನಿ ದೇವರಾಜು, ಜಿಪಂ,ಮಾಜಿ ಸದಸ್ಯ ಓಬಳಪ್ಪ, ಮುನೇಗೌಡ, ಕೇಶವಮೂರ್ತಿ, ಸಾದಲಿ ಗೋವಿಂದರಾಜು, ಗೋಪಾಲ್, ಯಾಸ್ಮಿನ್ ತಾಜ್, ಶೆಟ್ಟಹಳ್ಳಿ ರಾಮಚಂದ್ರ, ತನ್ವಿರ್ ಪಾಷ , ಸೈಯದ್, ಸಲಾಮ್ ಸಾಬ್, ಗಾಯಿತ್ರಿ ಮುಂತಾದವರು ಉಪಸ್ಥಿತರಿದ್ದರು.ಸುದ್ದಿ ಚಿತ್ರ ೧
ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ರಾಜೀವ್‌ಗೌಡ ಮಾತನಾಡಿದರು.