ಸಾರಾಂಶ
- ಬೂದಿಹಾಳು ಮತಗಟ್ಟೆಯಲ್ಲಿ ಶಾಸಕ ಬಿ.ಪಿ, ಹರೀಶ್, ನಂದಿಗುಡಿ ಮತಗಟ್ಟೆಯಲ್ಲಿ ಸಿದ್ದರಾಮೇಶ್ವರ ಶ್ರೀ ಓಟ್ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಲೋಕಸಭಾ ಚುನಾವಣೆ ದಾವಣಗೆರೆ ಕ್ಷೇತ್ರಕ್ಕೆ ಮಂಗಳವಾರ ಜರುಗಿದ ಮತದಾನವು ಬೆಳಗ್ಗೆಯಿಂದ ಮಂದಗತಿಯಲ್ಲಿ ಸಾಗಿದ್ದು, ನಂತರ ಏರಿಕೆ ಕಂಡಿತು. ಪುರಸಭೆ ಮತ್ತು ಗ್ರಾಮೀಣ ಭಾಗದಲ್ಲಿ ಬೆಳಗ್ಗೆ ೧೦ ಗಂಟೆಗೆ ಶೇ.೩೫ ಹಾಗೂ ಮಧ್ಯಾಹ್ನ ವೇಳೆಗೆ ಶೇ.೬೦ರಷ್ಟು ಮತದಾನ ಕಂಡಿತು.ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು ೨೧ ಮತಗಟ್ಟೆಗಳಿದ್ದು, ೧೮.೬೬೮ ಮತದಾರರಿದ್ದಾರೆ. ೧೨ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬಿಸಿಲ ತಾಪ ತಡೆಯಲು ಶಾಮಿಯಾನ ಹಾಗೂ ಸಿಬ್ಬಂದಿಗೆ ಕುಡಿಯುವ ನೀರು ಮತ್ತು ವಿಶೇಷಚೇತನರಿಗೆ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದಲ್ಲಿ ಮತ್ತು ಕುಂಬಳೂರಲ್ಲಿ ತಲಾ ಒಂದು ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ಗುಲಾಬಿ ಬಣ್ಣದಿಂದ ಅಲಂಕಾರಗೊಂಡಿದ್ದ ಮತಗಟ್ಟೆಯು ಮತದಾರರನ್ನು ವಿಶೇಷವಾಗಿ ಆಕರ್ಷಷಿಸಿತು. ಮಲೇಬೆನ್ನೂರು ಪಟ್ಟಣದ ಭಾಗ ಸಂಖ್ಯೆ ೧೯೭ರಲ್ಲಿ ನಯನ, ಜಗದೀಶ್, ಸಿಂಧೂ, ನಾಗವೇಣಿ, ಸಿಂಚನಾ ಮತ್ತು ಮೇಘನಾ ಎಂಬುವರು ಮೊದಲ ಬಾರಿಗೆ ಮತ ಚಲಾಯಿಸಿ ಸಂತಸಪಟ್ಟರು.
ಕುಂಬಳೂರಿನ ೨ನೇ ವಾರ್ಡ್‌ನಲ್ಲಿ ಮತದಾರರಿಗೆ ಚೀಟಿಗಳು ತಲುಪಿಲ್ಲ ಎಂಬ ದೂರು ಬಂದವು. ಸಮೀಪದ ಬೂದಿಹಾಳು ಗ್ರಾಮದ ಮತಗಟ್ಟೆಯಲ್ಲಿ ಶಾಸಕ ಬಿ.ಪಿ ಹರೀಶ್ ಮತದಾನ ಮಾಡಿದರೆ, ನಂದಿಗುಡಿಯ ಮತಗಟ್ಟೆಯಲ್ಲಿ ವೃಷಭಪುರಿ ಪೀಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮತದಾನ ಮಾಡಿದರು.ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದವರ ಹೆಸರಿದ್ದು, ಆಯಾ ವಾರ್ಡ್‌ನಲ್ಲಿನ ಮತದಾರರು ಹರಿಹರದ ಮತ್ತು ನಿಟ್ಟೂರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ ಎಂದು ಕಂಡುಬಂದವು.
ಮತಗಟ್ಟೆಗೆ ಅಗತ್ಯವಿರುವ ಮೂಲ ಸೌಲಭ್ಯಗಳ ಒದಗಿಸಲು ಮುಖ್ಯಾಧಿಕಾರಿ ಸುರೇಶ್ ಕಾಳಜಿ ತೋರಿದರು. ಸೆಕ್ಟರ್ ಅಧಿಕಾರಿಗಳಾದ ಉಮೇಶ್, ಮುಜೀಬ್ ರೆಹಮಾನ್, ಫ್ಲೈಯಿಂಗ್ ಸ್ಕ್ವಾಡ್ ಸುರೇಶ್, ರಂಗನಾಥ್, ಮತಗಟ್ಟೆಗೆ ತೆರಳಿ ವಿಚಾರಣೆ ಮಾಡುವ ದೃಶ್ಯ ಕಂಡುಬಂದವು. ಚುನಾವಣಾ ಆಯೋಗವು ಪ್ರತಿ ಮತಗಟ್ಟೆಗೆ ಪೊಲೀಸ್ ಹಾಗೂ ಮೀಸಲು ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು.ಹರಳಹಳ್ಳಿ ಗ್ರಾಮದ ಭಾಗದ ಸಂಖ್ಯೆ ೨೧೯, ೨೨೦ ರಲ್ಲಿ ಒಟ್ಟು ೧೨೨೦ ಮತದಾರರು ನೋಂದಾಯಿಸಿಕೊಂಡಿದ್ದು, ಮತದಾನ ಮಾಡಲು ಉತ್ಸಾಹ ತೋರಿದರು. ಎಲ್ಲ ಮತಗಟ್ಟೆಗಳ ಬಳಿ ಆಶಾ ಕಾರ್ಯಕರ್ತರು ಒಆರ್‌ಎಸ್ ಪೊಟ್ಟಣ ಸಿದ್ಧವಾಗಿಟ್ಟುಕೊಂಡು, ಸೇವೆ ಮಾಡಿದರೆ, ಪೌರ ಕಾರ್ಮಿಕರು ಸೇವಕರಾಗಿ ಸೇವೆಗೈದರು.
- - - -ಚಿತ್ರ-೨: ಶಾಸಕ ಬಿಪಿ ಹರೀಶ್ ಬೂದಿಹಾಳು ಗ್ರಾಮದಲ್ಲಿ ಮತದಾನ.ಚಿತ್ರ-೩: ನಂದಿಗುಡಿ ಸ್ವಾಮೀಜಿ ಮತದಾನ.
-ಚಿತ್ರ-೧: ಮೊದಲ ಬಾರಿಗೆ ಮತದಾನ ಮಾಡಿದ ಯುವಜನರು.ಚಿತ್ರ-೪: ಮಲೇಬೆನ್ನೂರಿನ ಸಖೀ ಮತಗಟ್ಟೆಯಲ್ಲಿ ಸರದಿಯಲ್ಲಿ ನಿಂತ ಮತದಾರರು.