ಸಾರಾಂಶ
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ರ ಸಾಲಿನಲ್ಲಿ ವಾರ್ಷಿಕ 61.77 ಲಕ್ಷ ರು. ಲಾಭ ಗಳಿಸಿದ್ದು, ಶೇ.9 ಡಿವಿಡೆಂಡ್, ರಬ್ಬರ್ ವ್ಯಾಪಾರ ಮಾಡಿದ ಸದಸ್ಯರಿಗೆ ಕೆಜಿಗೆ 1.50 ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 8ನೇ ವರ್ಷದ 2024-25ರ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಜರುಗಿತು.ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಘ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಪ್ರಧಾನ ಮಂತ್ರಿಯವರ ಕನಸಾದ ವಿಕಸಿತ ಭಾರತ ಸಂಕಲ್ಪಕ್ಕೆ ಸಹಕಾರ ಕ್ಷೇತ್ರವು ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಸಂಘವು 2024-25ರ ಸಾಲಿನಲ್ಲಿ ವಾರ್ಷಿಕ 61.77 ಲಕ್ಷ ರು. ಲಾಭ ಗಳಿಸಿದ್ದು, ಶೇ.9 ಡಿವಿಡೆಂಡ್, ರಬ್ಬರ್ ವ್ಯಾಪಾರ ಮಾಡಿದ ಸದಸ್ಯರಿಗೆ ಕೆಜಿಗೆ 1.50 ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಅಶೋಕ ಪಿ.ಎಂ., ನಿರ್ದೇಶಕರಾದ ಜಯರಾಮ ನಿಡ್ಯಮಲೆ ಬಿ., ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ಪ್ರಮೀಳಾ ಬಂಗಾರಕೋಡಿ, ಪುಷ್ಪಾವತಿ ವ್ಯಾಪಾರ, ಪ್ರದೀಪ ಕೆ.ಎಂ., ದೀನರಾಜ ದೊಡ್ಡಡ್ಕ, ಶೇಷಪ್ಪ ನಾಯ್ಕ ನಿಡ್ಯಮಲೆ, ಜಯರಾಮ ಪಿ.ಟಿ., ಕಿರಣ ಬಂಗಾರಕೋಡಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ವಿನೀತ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.ಸಂಘದ ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಸ್ಥೆಯ ಪ್ರಗತಿಯ ಬಗ್ಗೆ ಶ್ಲಾಘಿಸಿ, ಸಂಘದ ಲೆಕ್ಕಪತ್ರಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಚಾರ ವಿಮರ್ಶೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಗೌತಮ್ ಬಂಗಾರಕೋಡಿ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಎಚ್.ಕೆ. ಸ್ವಾಗತಿಸಿದರು. ನಿರ್ದೇಶಕರಾದ ಪ್ರಮೀಳಾ ವಂದಿಸಿದರು.