ಮಂಡ್ಯ ಜಿಲ್ಲೆಗೆ ಶೇ.೬೪.೦೫ ಪಠ್ಯಪುಸ್ತಕ ಪೂರೈಕೆ

| Published : May 21 2024, 12:30 AM IST

ಸಾರಾಂಶ

ಪಠ್ಯ ಪುಸ್ತಕಗಳು ತಾಲೂಕುಗಳಿಗೆ ನೇರವಾಗಿ ಪೂರೈಕೆಯಾಗುತ್ತಿದ್ದು ಬಿಇಒ ಹಂತದ ನೋಡೆಲ್ ಆಧಿಕಾರಿಗಳು ಅವುಗಳನ್ನು ಶಾಲೆಗಳಿಗೆ ಪೂರೈಸುವ ಜವಾಬ್ದಾರಿ ಹೊತ್ತಿದ್ದಾರೆ. ಒಂದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳಿಗೆ ದಿನಚರಿ ಪುಸ್ತಕಗಳನ್ನು ನೀಡಲಾಗುತ್ತಿದೆ. ೪ ರಿಂದ ೯ನೇ ತರಗತಿಯವರೆಗಿನ ಮಕ್ಕಕಳಿಗೆ ಕನ್ನಡ, ಇಂಗ್ಲಿಷ್, ಗಣಿತ ವಿಷಯದಲ್ಲಿ ಅಭ್ಯಾಸ ಪುಸ್ತಕಗಳನ್ನು ಕೊಡಲಾಗುತ್ತಿತ್ತು. ಅದನ್ನು ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನಲ್ಲಿ ನೀಡಿರಲಿಲ್ಲ. ಈ ಸಾಲಿನಿಂದ ಅಭ್ಯಾಸ ಪುಸ್ತಕಗಳನ್ನು ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

೨೦೨೪-೨೫ನೇ ಸಾಲಿನ ಪಠ್ಯ ಪುಸ್ತಕಗಳು ಜಿಲ್ಲೆಗೆ ಶೇ.೬೪.೯೫ರಷ್ಟು ಸರಬರಾಜಾಗಿದ್ದು, ಇನ್ನೂ ಶೇ.೩೫.೯೫ರಷ್ಟು ಪುಸ್ತಕಗಳು ಪೂರೈಕೆಯಾಗಬೇಕಿದೆ. ಶಾಲಾ ಸಮಸ್ತ್ರಗಳು ತಾಲೂಕುಗಳಿಗೆ ಬರಲಾರಂಭಿಸಿವೆ.

ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ಮಕ್ಕಳಿಗೆ ೧೬,೪೭,೪೩೬ ಉಚಿತ ಪುಸ್ತಕಗಳು ಬೇಡಿಕೆ ಇದ್ದು ಇದುವರೆಗೆ ೧೦,೫೫,೧೨೩ ಪುಸ್ತಕಗಳು ಸರಬರಾಜಾಗಿವೆ. ಅನುದಾನ ರಹಿತ ಶಾಲೆಗಳಿಂದ ೯,೦೫,೯೦೯೯ ಪುಸ್ತಕಗಳಿಗೆ ಬೇಡಿಕೆ ಇದ್ದು, ಈವರೆಗೆ ೫,೮೮,೫೭೦ ಪುಸ್ತಕಗಳು ಪೂರೈಕೆಯಾಗಿವೆ.

ಬಾಕಿ ಉಳಿದಿರುವ ಪುಸ್ತಕಗಳು ಇನ್ನೊಂದು ವಾರದೊಳಗೆ ಪೂರೈಕೆಯಾಗಲಿದ್ದು, ಶಾಲೆಗಳು ಆರಂಭವಾಗುವ ವೇಳೆಗೆ ಪೂರ್ಣ ಪ್ರಮಾಣದ ಪುಸ್ತಕಗಳು ಮಕ್ಕಳನ್ನು ತಲುಪಲಿವೆ. ಮಕ್ಕಳ ಶಿಕ್ಷಣದ ಕಲಿಕೆಗೆ ತೊಂದರೆಯಾಗದಂತೆ ಪಠ್ಯಪುಸ್ತಕಗಳನ್ನು ಬಿಇಓಗಳ ಮೂಲಕವೇ ಶಾಲೆಗಳಿಗೆ ತಲುಪಿಸಲಾಗುತ್ತಿದೆ.

ತಾಲೂಕುಗಳಿಗೆ ನೇರ ಪೂರೈಕೆ:

ಪಠ್ಯ ಪುಸ್ತಕಗಳು ತಾಲೂಕುಗಳಿಗೆ ನೇರವಾಗಿ ಪೂರೈಕೆಯಾಗುತ್ತಿದ್ದು ಬಿಇಒ ಹಂತದ ನೋಡೆಲ್ ಆಧಿಕಾರಿಗಳು ಅವುಗಳನ್ನು ಶಾಲೆಗಳಿಗೆ ಪೂರೈಸುವ ಜವಾಬ್ದಾರಿ ಹೊತ್ತಿದ್ದಾರೆ. ಒಂದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳಿಗೆ ದಿನಚರಿ ಪುಸ್ತಕಗಳನ್ನು ನೀಡಲಾಗುತ್ತಿದೆ. ೪ ರಿಂದ ೯ನೇ ತರಗತಿಯವರೆಗಿನ ಮಕ್ಕಕಳಿಗೆ ಕನ್ನಡ, ಇಂಗ್ಲಿಷ್, ಗಣಿತ ವಿಷಯದಲ್ಲಿ ಅಭ್ಯಾಸ ಪುಸ್ತಕಗಳನ್ನು ಕೊಡಲಾಗುತ್ತಿತ್ತು. ಅದನ್ನು ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನಲ್ಲಿ ನೀಡಿರಲಿಲ್ಲ. ಈ ಸಾಲಿನಿಂದ ಅಭ್ಯಾಸ ಪುಸ್ತಕಗಳನ್ನು ನೀಡುತ್ತಿರುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಮತ್ತು ಭಾನುವಾರವೂ ಪಠ್ಯ ಪುಸ್ತಕಗಳನ್ನು ಸ್ವೀಕರಿಸಲಾಗುತ್ತಿದೆ. ಪಠ್ಯ ಪುಸ್ತಕಗಳನ್ನು ಮಾರಾಟಕ್ಕೆ ಪಡೆಯುವವರು ಪೇಮೆಂಟ್ ಗೇಟ್-ವೇ ಸಾಫ್ಟ್‌ವೇರ್‌ನಲ್ಲಿ ಅಪ್ಲೋಡ್ ಮಾಡಿರಬೇಕು. ಈಗಾಗಲೇ ಶೇ.೬೦ರಷ್ಟು ಅನುದಾನ ರಹಿತ ಶಾಲೆಗಳು ಹಣ ಪಾವತಿಸಿ ನೋಂದಾಯಿಸಿಕೊಂಡಿದ್ದು, ಶೇ.೪೦ರಷ್ಟು ಶಾಲೆಗಳು ಇನ್ನೂ ನೋಂದಣಿ ಮಾಡಿಕೊಂಡು ಹಣ ಪಾವತಿಸಬೇಕಿದೆ.

ಹೆಚ್ಚುವರಿ ವಿಷಯಗಳು ಸೇರ್ಪಡೆ:

ಈ ಬಾರಿ ಒಂದರಿಂದ ಹತ್ತನೇ ತರಗತಿಯವರೆಗೆ ಎಲ್ಲಾ ವಿಷಯಗಳು ಭಾಗ-೧ ಮತ್ತು ಭಾಗ-೨ ಆಗಿ ವಿಂಗಡಿಸುವುದರೊಂದಿಗೆ ಹೆಚ್ಚುವರಿ ವಿಷಯಗಳನ್ನು ಸೇರ್ಪಡೆ ಮಾಡಲಾಗಿದೆ. ಇದುವರೆಗೆ ೬ ರಿಂದ ೧೦ನೇ ತರಗತಿಯವರೆಗೆ ಮಾತ್ರ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಭಾಗ-೧ ಮತ್ತು ಭಾಗ-೨ರಲ್ಲಿ ಬೋಧಿಸಲಾಗುತ್ತಿತ್ತು. ಈ ವರ್ಷದಿಂದ ಕನ್ನಡ, ಇಂಗ್ಲಿಷ್, ಹಿಂದಿ, ದೈಹಿಕ ಶಿಕ್ಷಣ ವಿಷಯವನ್ನೂ ಭಾಗ-೧ ಮತ್ತು ಭಾಗ-೨ರಲ್ಲಿ ಬೋಧಿಸಲಾಗುವುದು. ಈ ಸಾಲಿನಲ್ಲಿ ಸಮಾಜ ವಿಜ್ಞಾನ ಮತ್ತು ಕನ್ನಡ ಪಠ್ಯ ವಿಷಯಗಳಲ್ಲಿ ಕೆಲವೊಂದು ಬದಲಾವಣೆ ತರಲಾಗಿದೆ ಎಂದು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಶಾಲಾ ಸಮವಸ್ತ್ರಗಳು ಸೋಮವಾರದಿಂದ ಶಾಲೆಗಳಿಗೆ ತಲುಪುತ್ತಿವೆ. ನಾಲ್ಕು ತಾಲೂಕುಗಳಿಗೆ ಮಾತ್ರ ಪೂರೈಕೆಯಾಗಿದ್ದು, ಹಂತ ಹಂತವಾಗಿ ಎಲ್ಲ ಶಾಲೆಗಳಿಗೂ ಪೂರೈಕೆಯಾಗಲಿದೆ.ಜಿಲ್ಲೆಗಳಿಗೆ ಸರಬರಾಜಾದ ಪಠ್ಯಪುಸ್ತಕಗಳ ವಿವರತಾಲೂಕುಪಠ್ಯಪುಸ್ತಕಗಳ ಬೇಡಿಕೆಪೂರೈಕೆಯಾದ ಪಠ್ಯಪುಸ್ತಕಗಳುಉಚಿತ ಮಾರಾಟ ಉಚಿತ ಮಾರಾಟಕೆ.ಆರ್.ಪೇಟೆ೨೫೭೬೮೮೧೧೩೫೫೪೧೬೨೫೬೭೭೬೦೭೩ಮದ್ದೂರು೨೩೫೭೯೭೧೭೭೯೧೬೧೫೪೮೧೦೧೧೦೯೬೦ಮಳವಳ್ಳಿ೨೯೩೨೦೩೧೧೩೮೨೯೧೮೯೩೮೧೭೩೪೦೫ಮಂಡ್ಯ ಉತ್ತರ೧೪೧೭೮೮೨೫೨೧೬೯೧೦೨೫೧೬೩೮೯ಮಂಡ್ಯ ದಕ್ಷಿಣ೨೧೪೬೪೯೧೬೮೩೧೯೧೩೮೪೦೭೧೦೯೪೪೩ನಾಗಮಂಗಲ೧೮೪೦೯೨೧೦೬೩೦೩೧೧೬೪೭೦೬೯೨೨೭ಪಾಂಡವಪುರ೧೮೪೪೯೪೮೭೦೧೧೧೧೫೭೦೫೫೭೪೭೩ಶ್ರೀರಂಗಪಟ್ಟಣ೧೩೫೭೨೫೧೧೩೭೬೧೮೬೭೫೮೭೧೫೦೨ಒಟ್ಟು೧೬೪೭೪೩೬೯೦೫೯೦೯೧೦೫೫೧೨೩೫೬೧೧೮೯