ಪಾಂಡವಪುರ ತಾಲೂಕಿಗೆ ಶೇ.64.80 ರಷ್ಟು ಫಲಿತಾಂಶ; ಮನೋಜ್‌ಗೆ ಪ್ರಥಮ ಸ್ಥಾನ

| Published : May 02 2025, 11:46 PM IST

ಪಾಂಡವಪುರ ತಾಲೂಕಿಗೆ ಶೇ.64.80 ರಷ್ಟು ಫಲಿತಾಂಶ; ಮನೋಜ್‌ಗೆ ಪ್ರಥಮ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.64.80ರಷ್ಟು ಫಲಿತಾಂಶ ಬಂದಿದೆ. ತಾಲೂಕಿನ ಚಿನಕುರಳಿಯ ಬಿಜಿಎಸ್ ಶಾಲೆ ವಿದ್ಯಾರ್ಥಿ ಮನೋಜ್ ಕೆ.ಯು 621 ಅಂಕ ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆ ಬರೆದಿದ್ದ ಒಟ್ಟು 1999 ವಿದ್ಯಾರ್ಥಿಗಳಲ್ಲಿ 1297 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.64.80ರಷ್ಟು ಫಲಿತಾಂಶ ಬಂದಿದೆ. ತಾಲೂಕಿನ ಚಿನಕುರಳಿಯ ಬಿಜಿಎಸ್ ಶಾಲೆ ವಿದ್ಯಾರ್ಥಿ ಮನೋಜ್ ಕೆ.ಯು 621 ಅಂಕ ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಪರೀಕ್ಷೆ ಬರೆದಿದ್ದ ಒಟ್ಟು 1999 ವಿದ್ಯಾರ್ಥಿಗಳಲ್ಲಿ 1297 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ 530 ಗಂಡು ಹಾಗೂ 767 ಹೆಣ್ಣು ಮಕ್ಕಳು ತೇರ್ಗಡೆಯಾಗಿ ಹೆಣ್ಣುಮಕ್ಕಳೇ ಮೇಲುಗೈಸಾಧಿಸಿದ್ದಾರೆ.

ಸರ್ಕಾರಿ ಪ್ರೌಢಶಾಲೆಗಳ 1036 ವಿದ್ಯಾರ್ಥಿಗಳಲ್ಲಿ 638 ಮಕ್ಕಳು ಉತ್ತೀರ್ಣರಾಗಿ ಶೇ.61.58 ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಶಾಲೆಗಳಿಂದ 379 ವಿದ್ಯಾರ್ಥಿಗಳ ಪೈಕಿ 197 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.51.98 ರಷ್ಟು, ಅನುದಾನರಹಿತ ಶಾಲೆಗಳಿಂದ 548 ವಿದ್ಯಾರ್ಥಿಗಳಲ್ಲಿ 462 ವಿದ್ಯಾರ್ಥಿಗಳು ಉತೀರ್ಣರಾಗಿ ಶೇ.79.11 ರಷ್ಟು ಫಲಿತಾಂಶ ಬಂದಿದೆ.

ತಾಲೂಕಿನ ಚಿನಕುರಳಿ ಬಿಜಿಎಸ್ ಶಾಲೆ ವಿದ್ಯಾರ್ಥಿ ಮನೋಜ್ ಕೆ.ಯು- 625ಕ್ಕೆ 621 ಅಂಕ ಪಡೆದು ತಾಲೂಕಿಗೆ ಪ್ರಥಮ, ಪಟ್ಟಣದ ಬಿಜಿಎಸ್ ಶಾಲೆಯ ಅಮೃತ್ ಕೆ.ರಾಜು-617 ಅಂಕಗಳಿಸಿ ದ್ವಿತೀಯ ಸ್ಥಾನ, ಆದರ್ಶ ಶಾಲೆ ವಿದ್ಯಾರ್ಥಿನಿ ಎಲ್.ಎಂ.ವರ್ಷಿಣಿ- 615 ಅಂಕಗಳಿಸಿ ತೃತೀಯ ಸ್ಥಾನಗಳಿಸಿದ್ದಾರೆ.

ಪಟ್ಟಣದ ಬಿಜಿಎಸ್ ಶಾಲೆ ವಿದ್ಯಾರ್ಥಿಗಳಾದ ಪ್ರೀತಮ್ ಬಿ.ಎಸ್-612, ಭೂಮಿಕ ಆರ್.-612, ದೀಕ್ಷಿತ ಬಿ.ಎಂ.-611, ಚೇತನ ಎನ್.ಎಚ್-610, ರಾಗಿಮುದ್ದನಹಳ್ಳಿಯ ಗುಲಾಬಿ ವಿದ್ಯಾನಿಕೇತನ ಶಾಲೆ ಮನೋಜ ಎಂ.ಜೆ.-609, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ದೀಪಿಕ ಕೆ.ಎಸ್-607, ಪಟ್ಟಣ ಬಿಜಿಎಸ್ ಶಾಲೆ ಶ್ರೇಯಾ ಆರ್.ಪಿ.-605 ಅಂಕಗಳಿಸಿ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.ಚಿನಕುರಳಿಯ ನಮ್ಮ ಬಿಜಿಎಸ್ ಶಾಲೆ ವಿದ್ಯಾರ್ಥಿ ಮನೋಜ್ ಕೆ.ಯು ಎಂಬ ವಿದ್ಯಾರ್ಥಿ 621 ಅಂಕಗಳಿಸುವ ಮೂಲಕ ಶಾಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಪಟ್ಟಣದ ಬಿಜಿಎಸ್ ಶಾಲೆ ವಿದ್ಯಾರ್ಥಿಗಳು ಉತ್ತಮ ತಂದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ.

-ಡಾ.ಜೆ.ಎನ್.ರಾಮಕೃಷ್ಣೇಗೌಡ, ಕಾರ್ಯದರ್ಶಿಗಳು ಬಿಜಿಎಸ್ ಶಿಕ್ಷಣ ಸಂಸ್ಥೆ