ನಗರದಲ್ಲಿ ಮಂಗಳವಾರ ಸುರಿದ ಗಾಳಿ ಸಹಿತ ಮಳೆಗೆ ಐದು ನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 84 ಬೃಹತ್ ಮರಗಳು, 147 ಕೊಂಬೆಗಳು ಮುರಿದು ಬಿದ್ದಿದ್ದು, ಒಂದೇ ದಿನದಲ್ಲಿ ಅರಣ್ಯ ಇಲಾಖೆ ಹಾಗೂ ಖಾಸಗಿ ಸಿಬ್ಬಂದಿ 67 ಬೃಹತ್ ಮರಗಳು ಹಾಗೂ 104 ಕೊಂಬೆಗಳನ್ನು ತೆರೆವುಗೊಳಿಸಿದ್ದಾರೆ.
ಬೆಂಗಳೂರು : ನಗರದಲ್ಲಿ ಮಂಗಳವಾರ ಸುರಿದ ಗಾಳಿ ಸಹಿತ ಮಳೆಗೆ ಐದು ನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 84 ಬೃಹತ್ ಮರಗಳು, 147 ಕೊಂಬೆಗಳು ಮುರಿದು ಬಿದ್ದಿದ್ದು, ಒಂದೇ ದಿನದಲ್ಲಿ ಅರಣ್ಯ ಇಲಾಖೆ ಹಾಗೂ ಖಾಸಗಿ ಸಿಬ್ಬಂದಿ 67 ಬೃಹತ್ ಮರಗಳು ಹಾಗೂ 104 ಕೊಂಬೆಗಳನ್ನು ತೆರೆವುಗೊಳಿಸಿದ್ದಾರೆ.
ಮೇ 26ರಂದು ಬಿದ್ದ ಮಳೆಗೆ ಮುರಿದು ಬಿದ್ದ ಮರಗಳು
ಮೇ 26ರಂದು ಬಿದ್ದ ಮಳೆಗೆ ನಗರದ ಪಶ್ಚಿಮ ಹಾಗೂ ದಕ್ಷಿಣ ಪಾಲಿಕೆ ವಿಭಾಗಗಳಲ್ಲಿ ಹೆಚ್ಚು ಮರಗಳು ಮುರಿದು ಬಿದ್ದಿದ್ದು ಪೂರ್ವ, ಉತ್ತರ ಹಾಗೂ ಕೇಂದ್ರ ಭಾಗಗಳಲ್ಲಿ ಕಡಿಮೆ ಮರಗಳು ಮುರಿದುಬಿದ್ದಿವೆ. ಕಲಾಸಿಪಾಳ್ಯ ಸಮೀಪದ ಕೆ.ಆರ್. ರಸ್ತೆಯಲ್ಲಿ ಬೃಹತ್ ಮರ ಬಿದ್ದು ಮನೆಗೆ ಹಾನಿಯಾಗಿತ್ತು. ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಈ ಮರವನ್ನು ತೆರವುಗೊಳಿಸಿದ್ದಾರೆ.
ಮುರಿದು ಬಿದ್ದ ಮರವನ್ನು ತೆರವು
ಗಂಗಾನಗರದ ವಿನಾಯಕನಗರ, ಎನ್ ಜಿ ಇ ಎಫ್ ಲೇ ಔಟ್ ಕಸ್ತೂರಿನಗರದಲ್ಲಿ ಮುರಿದು ಬಿದ್ದ ಮರವನ್ನು ತೆರವುಗೊಳಿಸಿ ಈ ಭಾಗದ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ವಿಜಯನಗರ, ಇಂದಿರಾನಗರ ಸೇರಿದಂತೆ ಹಲವು ಕಡೆ ಪಾಲಿಕೆ ಸಿಬ್ಬಂದಿ ಕೊಂಬೆಗಳನ್ನು ವಾಹನಗಳ ಮೂಲಕ ಹೊರವಲಯದ ಪಾಲಿಕೆ ಸ್ಥಳಗಳಿಗೆ ತಲುಪಿಸಿದ್ದಾರೆ.
ನಗರದ ಅಂಡರ್ ಪಾಸ್ ಗಳಲ್ಲಿ ಬುಧವಾರದ ಬೆಳಿಗ್ಗೆ ವೇಳೆಗೆ ನೀರು ಖಾಲಿಯಾಗಿದ್ದು, ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಉಳಿದ 28 ಬೃಹತ್ ಮರಗಳು, 44 ಕೊಂಬೆಗಳನ್ನು ಗುರುವಾರ ತೆರವುಗೊಳಿಸಲಾಗುವುದು ಎಂದು ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.