ಸಾರಾಂಶ
ಅಂಗನವಾಡಿಗಳ ನಿರ್ವಹಣೆ ಮಾಡುವ ಅಧಿಕಾರಿಗಳಿಗೆ ಒಂದು ಸರ್ಕಾರಿ ವಾಹನವೂ ಇಲ್ಲ. 16 ಅಂಗನವಾಡಿಗಳಿಗೆ ಕಾರ್ಯಕರ್ತೆಯರು, 17 ಅಂಗನವಾಡಿಗಳಿಗೆ ಸಹಾಯಕಿಯರ ನೇಮಕವಾಗಿಲ್ಲ ಎನ್ನುವುದು ಅಷ್ಟೇ ಸತ್ಯ.
ಮಾರುತಿ ಶಿಡ್ಲಾಪೂರಹಾನಗಲ್ಲ: ರಾಜ್ಯದ ಅತಿ ದೊಡ್ಡ ತಾಲೂಕು ಎನಿಸಿರುವ ಹಾನಗಲ್ಲ ತಾಲೂಕಿನ 152 ಗ್ರಾಮಗಳ 335 ಅಂಗನವಾಡಿಗಳಲ್ಲಿ 22 ಸಾವಿರ ಮಕ್ಕಳಿದ್ದಾರೆ. ಆದರೆ, 68 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ, 9 ಅಂಗನವಾಡಿಗಳಿಗೆ ನಿವೇಶನವೂ ಇಲ್ಲ!
ಅಚ್ಚರಿಯೆಂದರೆ, ಇಷ್ಟೆಲ್ಲ ಅಂಗನವಾಡಿಗಳ ನಿರ್ವಹಣೆ ಮಾಡುವ ಅಧಿಕಾರಿಗಳಿಗೆ ಒಂದು ಸಕಾ್ರಿ ವಾಹನವೂ ಇಲ್ಲ. 16 ಅಂಗನವಾಡಿಗಳಿಗೆ ಕಾರ್ಯಕರ್ತೆಯರು, 17 ಅಂಗನವಾಡಿಗಳಿಗೆ ಸಹಾಯಕಿಯರ ನೇಮಕವಾಗಿಲ್ಲ ಎನ್ನುವುದು ಅಷ್ಟೇ ಸತ್ಯ. ತಾಲೂಕಿನಲ್ಲಿ 319 ಅಂಗನವಾಡಿ ಕಾರ್ಯಕರ್ತೆಯರು, 318 ಸಹಾಯಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ನಿವೃತ್ತಿ, ರಾಜೀನಾಮೆಯಿಂದ ತೆರವಾದ 16 ಕಾರ್ಯಕರ್ತೆಯರು ಹಾಗೂ 17 ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈಗ ಖಾಲಿ ಇರುವ 16 ಅಂಗನವಾಡಿಗಳಿಗೆ ಪಕ್ಕದ ಅಂಗನವಾಡಿ ಕಾರ್ಯಕರ್ತೆಯರೇ ಎರಡೆರಡು ದಿನಗಳ ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 68 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ. 4 ಅಂಗನವಾಡಿ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. 2ಕ್ಕೆ ಅನುಮೋದನೆ ದೊರೆತಿದೆ. 68 ಅಂಗನವಾಡಿಗಳು ಸರ್ಕಾರಿ ಶಾಲೆ, ಸಮುದಾಯ ಭವನ, ಬಾಡಿಗೆ ಕಟ್ಟಡಗಳಲ್ಲಿಯೇ ನಡೆಯುತ್ತಿವೆ. ಈ ಎಲ್ಲವನ್ನೂ ನಿಭಾಯಿಸಲು ಈ ಇಲಾಖೆಗೆ ಇನ್ನೂ ಸ್ವಂತ ವಾಹನವೇ ಇಲ್ಲ. ಇರುವ ವಾಹನವೂ ಬಾಡಿಗೆ ವಾಹನವೇ ಆಗಿದೆ. ಗಡೆಗುಂಡಿ ಯಲ್ಲಾಪುರದ ಅಂಗನವಾಡಿಯಲ್ಲಿ ಕೇವಲ 15 ಮಕ್ಕಳಿದ್ದರೆ, ಚಿನ್ನಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಅತಿ ಹೆಚ್ಚು 115 ಮಕ್ಕಳಿದ್ದಾರೆ. ಸರ್ಕಾರ ಮಕ್ಕಳಿಗೆ ಸಮವಸ್ತ್ರ ನೀಡಬೇಕು. ಕೆಲವು ಅಂಗನವಾಡಿಗಳಲ್ಲಿ ಪಾಲಕರೇ ಸಮವಸ್ತ್ರ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕಾಲ ಕಾಲಕ್ಕೆ ಬದಲಾದ ಶಿಕ್ಷಣ ವ್ಯವಸ್ಥೆಗನುಗುಣವಾಗಿ ಶೈಕ್ಷಣಿಕ ತರಬೇತಿ ನೀಡಬೇಕು. ಅಂಗನವಾಡಿಗಳಿಗೆ ಪದಾರ್ಥಗಳನ್ನು ತೂಕ ಮಾಡಲು ಡಿಜಿಟಲ್ ತೂಕದ ಯಂತ್ರ ನೀಡಬೇಕು ಎಂಬ ಬೇಡಿಕೆಗಳೂ ಇದೆ.ತಾಲೂಕಿನಲ್ಲಿ ಅತ್ಯುತ್ತಮ ಹಾಜರಾತಿ, ಶಾಲಾ ಪೂರ್ವ ಶಿಕ್ಷಣ, ಉತ್ತಮ ವಾತಾವರಣ ಹೊಂದಿದ, ಆರೋಗ್ಯ ತಪಾಸಣೆ, ಉತ್ತಮ ರೀತಿಯಲ್ಲಿ ಆಹಾರ ಪೂರೈಸುವುದು ಸೇರಿದಂತೆ ಹತ್ತಾರು ಅಂಗನವಾಡಿಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಉಪ್ಪಣಸಿ, ಕೋಣನಕೊಪ್ಪ, ಮಕರವಳ್ಳಿ, ಚಿಕ್ಕಾಂಸಿಹೊಸೂರು ಬೈಲವಾಳ, ಆರೆಗೊಪ್ಪ, ಕಲ್ಲಾಪುರ ಮುಂತಾದ ಗ್ರಾಮಗಳ ಅಂಗನವಾಡಿಗಳು ಇಲಾಖೆಯ ಮೆಚ್ಚುಗೆಗೆ ಪಾತ್ರವಾಗಿವೆ.ಅತ್ಯುತ್ತಮವಾಗಿ ಕಾರ್ಯ: ತಾಲೂಕಿನ ಅಂಗನವಾಡಿಗಳ ನಿರ್ವಹಣೆ, ಇಲಾಖೆಯ ವಿವಿಧ ಯೋಜನೆ ಅನುಷ್ಠಾನದಲ್ಲಿ ಯಾವುದೇ ರೀತಿಯ ವಿಳಂಬ ಲೋಪವಾಗಿಲ್ಲ. ಎಲ್ಲ ಅಂಗನವಾಡಿಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. 16 ಅಂಗವಾಡಿಗಳಿಗೆ ಕಾರ್ಯಕರ್ತೆಯರು 17 ಅಂಗನವಾಡಿಗೆ ಸಹಾಯಕಿಯರ ನೇಮಕದ ಪ್ರಕ್ರಿಯೆ ಆರಂಭವಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ರಾಮು ಬಯಲಸೀಮೆ ತಿಳಿಸಿದರು.