ಮಾಗಡಿ ತಾಲೂಕಿನ 68 ಹಳ್ಳಿಗಳು ನೆಲಮಂಗಲಕ್ಕೆ ಸೇರ್ಪಡೆ

| Published : Oct 30 2025, 01:02 AM IST

ಸಾರಾಂಶ

68 ಗ್ರಾಮಗಳನ್ನು ನೆಲಮಂಗಲ ತಾಲೂಕಿಗೆ ಸೇರಿಸಲು ಸೆಪ್ಟೆಂಬರ್ 9ರಂದು ಕರ್ನಾಟಕ ಭೂ ಕಂದಾಯ ಅಧಿನಿಯಮದ 1964 ಕಲಂ 4 ರ ಉಪಕಲಂ (4)ರ ಪ್ರಕಾರ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, 30 ದಿನಗಳ ಒಳಗೆ ಇದರಿಂದ ಬಾಧಿತರಾಗುವ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳು/ಸಲಹೆಗಳನ್ನು ಆಹ್ವಾನಿಸಲಾಗಿತ್ತು. ನಂತರ ಅ.27ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಮಾಗಡಿ ತಾಲೂಕಿನ ಸೋಲೂರು ಹೋಬಳಿಯ 68 ಗ್ರಾಮಗಳನ್ನು ನೆಲಮಂಗಲ ತಾಲೂಕಿಗೆ ಸೇರಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.68 ಗ್ರಾಮಗಳನ್ನು ನೆಲಮಂಗಲ ತಾಲೂಕಿಗೆ ಸೇರಿಸಲು ಸೆಪ್ಟೆಂಬರ್ 9ರಂದು ಕರ್ನಾಟಕ ಭೂ ಕಂದಾಯ ಅಧಿನಿಯಮದ 1964 ಕಲಂ 4 ರ ಉಪಕಲಂ (4)ರ ಪ್ರಕಾರ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, 30 ದಿನಗಳ ಒಳಗೆ ಇದರಿಂದ ಬಾಧಿತರಾಗುವ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳು/ಸಲಹೆಗಳನ್ನು ಆಹ್ವಾನಿಸಲಾಗಿತ್ತು. ನಂತರ ಅ.27ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಮಾಗಡಿ ತಾಲೂಕಿನಿಂದ ನೆಲಮಂಗಲ ತಾಲೂಕಿಗೆ ಸೇರ್ಪಡೆಯಾದ ಗ್ರಾಮಗಳು: ಸೋಲೂರು, ಕಲ್ಯಾಣಪುರ, ತೂಬರಪಾಳ್ಯ, ಎಣ್ಣೆಗೆರೆ, ಚಿಕ್ಕನಹಳ್ಳಿ, ವಡ್ಡರಹಳ್ಳಿ, ಗಂಗೇನಪುರ, ಕನಕೇನಹಳ್ಳಿ, ಭೈರಾಪುರ, ಮಲ್ಲಿಕಾರ್ಜುನ ಪಾಳ್ಯ, ಲಕ್ಕೇನಹಳ್ಳಿ, ಬೀರವಾರ, ಕೋರಮಂಗಲ, ಕನ್ನಸಂದ್ರ, ಪರ್ವತಪಾಳ್ಯ, ಗುಡೇಮಾರನಹಳ್ಳಿ, ಉಡುಕುಂಟೆ, ಮೈಲನಹಳ್ಳಿ, ಪಾಲನಹಳ್ಳಿ, ಶಾಂತಪುರ, ಕಲ್ಲಹಟ್ಟಿಪಾಳ್ಯ, ಭೈರಸಂದ್ರ, ಮಲ್ಲೂರು, ಭಂಟರಕುಪ್ಪೆ, ನಾಗನಹಳ್ಳಿ, ಮುಮ್ಮೇನಹಳ್ಳಿ, ಬೊಮ್ಮನಹಳ್ಳಿ, ತೊರೆಚನ್ನೋಹಳ್ಳಿ, ಮೋಟಗೊಂಡನಹಳ್ಳಿ, ಗೊಲ್ಲಹಳ್ಳಿ, ಕೊತ್ತಗೊಂಡನಹಳ್ಳಿ, ಮರೇನಹಳ್ಳಿ, ಗರ್ಗೇಶ್ವರಪುರ, ಕೋಡಿಹಳ್ಳಿ, ಪೆಮ್ಮನಹಳ್ಳಿ, ಹಕ್ಕಿನಾಳು, ಮರಿಕುಪ್ಪೆ, ಬಸವನೇನಹಳ್ಳಿ, ಹೊಸಹಳ್ಳಿ, ಬಾಣವಾಡಿ, ಹಾಲೂರು, ಶಿರಗನಹಳ್ಳಿ, ಮಲ್ಲಾಪುರ, ಮೂಗನಹಳ್ಳಿ, ಬಿಟ್ಟಸಂದ್ರ, ಹೇಮಾಪುರ, ರಂಗೇನಹಳ್ಳಿ, ಕೆಂಪಾಪುರ, ತಟ್ಟೇಕೆರೆ, ಲಿಂಗೇನಹಳ್ಳಿ, ತಿಮ್ಮಸಂದ್ರ, ರಾಮನಹಳ್ಳಿ, ಗೊರೂರು, ರಂಗನಬೆಟ್ಟ, ಮುಪ್ಪೇನಹಳ್ಳಿ, ಚನ್ನೋಹಳ್ಳಿ, ಅರಿಶಿನ ಕುಂಟೆ, ಊದ್ದಂಡಳ್ಳಿ, ಚಿಕ್ಕಸೋಲೂರು, ಹ್ಯಾಗನಹಳ್ಳಿ, ಬ್ಯಾಡರಹಳ್ಳಿ, ಕೂಡ್ಲುರು, ಸೋಮೇದೇವನ ಹಳ್ಳಿ, ಒಂಭತ್ತನಕುಂಟೆ, ಕುಪ್ಪೇಮಾಳ, ತಿರುಮಲಾಪುರ, ಹೊಸೂರು ನೆಲಮಂಗಲಕ್ಕೆ ಸೇರ್ಪಡೆಯಾದ ಗ್ರಾಮಗಳಾಗಿವೆ.