ಕನ್ನಡಪ್ರಭ ವಾರ್ತೆ ಸವದತ್ತಿ
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಡಿ ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಸವದತ್ತಿಯ ನ್ಯಾಯಾಲಯದ ಸಂಕೀರ್ಣದಲ್ಲಿ ರಾಷ್ಟೀಯ ಲೋಕ ಅದಾಲತ್ ಆಯೋಜಿಸಲಾಗಿತ್ತು.ಅದಾಲತ್‌ನಲ್ಲಿ ಸವದತ್ತಿಯ ಎಲ್ಲಾ ನ್ಯಾಯಾಲಯಗಳಲ್ಲಿನ ೮೬೧೫ ಬಾಕಿ ಇರುವ ಪ್ರಕರಣಗಳ ಪೈಕಿ ೨೦೮೮ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ ೬೮೭ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಸಿದ್ದರಾಮ ಅವರು ಮಾತನಾಡಿ, ಈ ಅದಾಲತ್‌ನಲ್ಲಿ ಪ್ರಕರಣಗಳು ಇತ್ಯರ್ಥಗೊಳ್ಳುವುದರಿಂದ ಪಕ್ಷಗಾರರ ನ್ಯಾಯಾಲಯದ ಧೀರ್ಘಾವಧಿಯ ಪ್ರಕ್ರಿಯೆ ಹಾಗೂ ದುಂದು ವೆಚ್ಚವನ್ನು ತಪ್ಪಿಸಬಹುದಾಗಿದೆ. ಇದರಿಂದ ಪಕ್ಷಗಾರರಿಗೆ ತ್ವರಿತ ಮತ್ತು ಸುಲಭ ಪರಿಹಾರ ದೊರಕುವದರ ಜೊತೆಗೆ ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೃಷ್ಣಪ್ಪ ಪಮ್ಮಾರ ಅವರು ಮಾತನಾಡಿ, ಈ ಬಾರಿ ಅದಾಲತ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಮಧ್ಯಸ್ಥಿಕೆ ಅಭಿಯಾನ ಆರಂಭಿಸಲಾಗಿತ್ತು. ಮಧ್ಯಸ್ಥಿಕೆ ಮೂಲಕ ರಾಜಿ ಮಾಡಿಕೊಂಡ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ. ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ರಾಜಿಮಾಡಿಕೊಳ್ಳವುದರಿಂದ ಪಕ್ಷಗಾರರ ಬಾಂಧವ್ಯ ಉಳಿಯಲಿದೆ ಎಂದರು.ಈ ವೇಳೆ ಮನಸ್ತಾಪದಿಮದ ದೂರವಾಗಿದ್ದ ದಂಪತಿಯನ್ನು ರಾಜಿ ಮೂಲಕ ಒಂದು ಮಾಡಲಾಯಿತು. ಎಂ.ಎಸ್.ಹುಬ್ಬಳ್ಳಿ, ಎಸ್.ಎಸ್.ಕಾಳಪ್ಪನವರ, ಸಾವಿತ್ರಿ ಶಿಬಾರಗಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಮಂಜುನಾಥ ಸನ್ನಿಂಗನವರ, ಎಸ್.ಎಸ್.ಅಂಗಡಿ, ಪಿ.ಎಂ.ಉಪ್ಪಾರ, ವೈ.ಎಲ್.ಕಿಟದಾಳ, ಕೆ.ಬಿ.ಮುಲ್ಲಾ, ಎಸ್.ಜಿ.ನುಗ್ಗಾನಟ್ಟಿ ಹಾಗೂ ನ್ಯಾಯವಾದಿಗಳಾದ ಎಂ.ಬಿ.ದ್ಯಾಮನಗೌಡರ, ಎಂ.ಎನ್.ಮುತ್ತಿನ, ಸಿ.ಜಿ.ತುರಮರಿ, ಎಮ್,ಕೆ.ಹೊಸಮಠ, ಎಂ.ಎಂ.ಯಲಿಗಾರ, ಆರ್.ಎಸ್.ಆಲದಕಟ್ಟಿ, ಎಂ.ಎಸ್.ಸರ್ವಿ, ಎಸ್.ಎಂ.ಸಂಗ್ರೆಶಕೊಪ್ಫ, ಎ.ಎಸ್.ಮಾನಗಾಂವ, ವೈ.ಎನ್.ಪಾಸ್ತೆ, ಎಸ್.ಎಸ್.ಮಾನೆ, ಆರ್.ಪಿ.ತೋಟಗಿ, ಎ.ಎಂ.ಬಾಗೋಜಿಕೊಪ್ಫ, ಬಿ.ಕೆ.ಕಡಕೋಳ, ಎಂ.ಎಫ್.ಬಡಿಗೇರ, ಎಫ್.ಎಂ.ಕಾಳೆ ಇತರರು ಉಪಸ್ಥಿತರಿದ್ದರು.