ಬಜಗೋಳಿಯ ಅಂಬದಗುಂಡಿ ಎಸ್.ಪಿ. ಗಾರ್ಡನ್ನಲ್ಲಿ ನ.28ರಂದು 6ನೇ ವರ್ಷದ ಗೋದಾನ ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದ ಸಾಧಕ ಮೂಡುಬಿದಿರೆಯ ಡಾ. ಎಂ. ಮೋಹನ್ ಆಳ್ವ ಅವರಿಗೆ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಬೆದರದ ಕಾಮಧೇನು’ ಬಿರುದು ನೀಡಿ ಗೌರವಿಸಲಾಗುವುದು ಎಂದು ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದರು.
ಕಾರ್ಕಳ: ಬಜಗೋಳಿಯ ಅಂಬದಗುಂಡಿ ಎಸ್.ಪಿ. ಗಾರ್ಡನ್ನಲ್ಲಿ ನ.28ರಂದು 6ನೇ ವರ್ಷದ ಗೋದಾನ ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದ ಸಾಧಕ ಮೂಡುಬಿದಿರೆಯ ಡಾ. ಎಂ. ಮೋಹನ್ ಆಳ್ವ ಅವರಿಗೆ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಬೆದರದ ಕಾಮಧೇನು’ ಬಿರುದು ನೀಡಿ ಗೌರವಿಸಲಾಗುವುದು ಎಂದು ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದರು.ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಕಳ್ಳತನದಿಂದ ಗೋವುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಗೋದಾನ ಕಾರ್ಯಕ್ರಮ ಆರಂಭಿಸಲಾಗಿದ್ದು, ಇದೀಗ ಆರನೇ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ ಗೋ ಕಳ್ಳತನದ ಪ್ರಕರಣಗಳು ನಡೆದಿಲ್ಲ. ಆದರೂ ಗೋವುಗಳನ್ನು ಸಾಕಿ ಜೀವನ ನಿರ್ವಹಣೆ ಮಾಡಲು ಆಸಕ್ತಿ ಹಾಗೂ ಸಿದ್ಧತೆ ಹೊಂದಿರುವ ಕುಟುಂಬಗಳನ್ನು ಗುರುತಿಸಿ ಗೋದಾನ ಮಾಡಲಾಗುವುದು ಎಂದರು.
ಅಂದು ಸಂಜೆ 5.30ಕ್ಕೆ ಗೋಪೂಜೆ, 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಆಳ್ವಾಸ್ ಸಾಂಸ್ಕೃತಿಕ ತಂಡದಿಂದ ನರಶಾರ್ದೂಲ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಶಾಸಕ ವಿ. ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣ ಅರಸು ಹಾಗೂ ಡಾ. ಪದ್ಮಪ್ರಸಾದ್ ಅಜಿಲ ಅವರು ಸನ್ಮಾನ ನೆರವೇರಿಸಲಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎನ್.ಆರ್. ದಾಮೋದರ ಶರ್ಮ ಶುಭಾಶಂಸನೆ ಮಾಡಲಿದ್ದಾರೆ.ಇದೇ ಸಂದರ್ಭದಲ್ಲಿ ಸಾಧಕಿಯರಾದ ಶ್ರೀನಿಧಿ ಎಸ್. ಶೆಟ್ಟಿ, ಸುಭೀಕ್ಷಾ ನಲ್ಲೂರು, ದಿಶಾ ಪೂಜಾರಿ (ಮೂಡುಬಿದಿರೆ) ಹಾಗೂ ಸುಮಲತಾ (ಗುರುನಗರ, ಬಜಗೋಳಿ) ಅವರಿಗೆ ‘ಅಂಬಾ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಪತ್ರಿಕಾಗೋಷ್ಠಿಯಲ್ಲಿ ಯತೀಶ್ ಶೆಟ್ಟಿ ನಲ್ಲೂರು, ಸಂತೋಷ್ ನಂದಳಿಕೆ, ಶ್ರೇಯಾಂಕ ಆರ್. ಶೆಟ್ಟಿ, ಶಿಕ್ಷಕರಾದ ಸುಬ್ರಹ್ಮಣ್ಯ ಭಟ್ ಹಾಗೂ ನಾಗೇಶ್ ಉಪಸ್ಥಿತರಿದ್ದರು.