ಸಾರಾಂಶ
ಕಡೂರು, ಇಂದು ಕಡೂರು ಪಟ್ಟಣದಲ್ಲಿ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ (ಜುಲೈ 13,ಶನಿವಾರ) ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ನಡೆಯಲಿದೆ ಎಮದು ಪ್ರಚಾರ ಸಮಿತಿ ಅಧ್ಯಕ್ಷ ಬಾಲುಮಚ್ಚೇರಿ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಕಡೂರು
ಇಂದು ಕಡೂರು ಪಟ್ಟಣದಲ್ಲಿ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ (ಜುಲೈ 13,ಶನಿವಾರ) ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ನಡೆಯಲಿದೆ ಎಮದು ಪ್ರಚಾರ ಸಮಿತಿ ಅಧ್ಯಕ್ಷ ಬಾಲುಮಚ್ಚೇರಿ ತಿಳಿಸಿದರು.ಬೆಳಿಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷ ಹೊಸೂರು ಪುಟ್ಟರಾಜುರವರ ಮೆರವಣಿಗೆ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಿಂದ ನಡೆಯಲಿದೆ. 11 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಮತ್ತು ಕನ್ನಡ ಪೂಜಾರಿ ಡಾ. ಹಿರೇಮಗಳೂರು ಕಣ್ಣನ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ಎಸ್.ಆನಂದ್ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದು, ಸಂಸದ ಶ್ರೇಯಸ್ ಪಟೇಲ್ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಆಶಯ ನುಡಿ ನುಡಿಯಲಿದ್ದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆ ಮಾಡಲಿದ್ದಾರೆ.
ಸಮ್ಮೇಳನದಲ್ಲಿ ಒಟ್ಟು 4 ಗೋಷ್ಠಿಗಳಿದ್ದು, ತಾಲೂಕು ದರ್ಶನ ಗೋಷ್ಠಿ, ಕೃಷಿ ಗೋಷ್ಠಿ, ಮಾಧ್ಯಮ ಗೋಷ್ಠಿ ಮತ್ತು ಕವಿಗೋಷ್ಠಿ ನಡೆಯಲಿದೆ. ಬಹಿರಂಗ ಅಧಿವೇಶನದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಎಲ್.ಹನುಮಂತಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನದಲ್ಲಿ ಕನ್ನಡ ಹೋರಾಟಗಾರರು, ಸಾಹಿತಿಗಳು, ಚಿಂತಕರಿಗೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಚಿಂತಕ ಹಾಗು ಮಾಜಿ ಶಾಸಕ ವೈ.ಎಸ್.ವಿ.ದತ್ತ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಬಾಲುಮಚ್ಚೇರಿ ಹೇಳಿದರು.-- ಬಾಕ್ಸ್ ---
ಸಮ್ಮೇಳನಾಧ್ಯಕ್ಷ ಹೊಸೂರು ಪುಟ್ಟರಾಜು ಸಮ್ಮೇಳನಾಧ್ಯಕ್ಷ ಹೊಸೂರು ಪುಟ್ಟರಾಜು ಯಗಟಿ ಹೋಬಳಿ ಹೊಸೂರಿನವರು.ಎಂ.ಎ.ಬಿ.ಎಡ್ ಪಧವೀಧರರಾಗಿದ್ದು, ಬೀರೂರಿನ ಕೆ.ಎಲ್.ಕೆ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ವಚನ ಸಾಹಿತ್ಯದಲ್ಲಿ ಅಧ್ಯಯನ ಮಾಡಿರುವ ಪುಟ್ಟರಾಜು ಅವರಿಗೆ ಉರಿಲಿಂಗಪೆದ್ದಿ ಮೆಚ್ಚಿನ ವಚನಕಾರ. ಗರುಡನಗಿರಿ ರಹಸ್ಯ, ವಚನಗಂಗಾ, ವಚನ ಜ್ಯೋತಿ, ವಚನ ಕುಸುಮಾಂಜಲಿ, ಅನುಭೂತಿ ಇವರ ಸ್ಚರಚಿತ ಕೃತಿಗಳು. ಇದಲ್ಲದೆ ಬಹಳಷ್ಟು ಸಂಪಾದಿತ ಕೃತಿಗಳು, ವ್ಯಕ್ತಿಚಿತ್ರಗಳನ್ನು ಬರೆದಿದ್ದಾರೆ. ಪುಟ್ಟರಾಜು ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳು ದೊರೆತಿವೆ.12ಕೆಕೆಡಿಯು1.ಹೊಸೂರು ಪುಟ್ಟರಾಜು ( ಬಾಕ್ಸ್ಗೆ ಫೋಟೊ)