ದಾಖಲೆ ಇಲ್ಲದ ಹಣ, ಮದ್ಯ, ಸೀರೆ ವಶ

| Published : Mar 23 2024, 01:01 AM IST

ಸಾರಾಂಶ

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ತಪಾಸಣಾ ಕಾರ್ಯ ನಡೆಯುತ್ತಿದ್ದು, ಈ ವೇಳೆ ಎಸ್ಎಸ್ಟಿ ತಂಡವು 65 ಸಾಲಿರ ಮೌಲ್ದ 1020 ಸೀರೆಗಳನ್ನು ವಶಪಡಿಸಿಕೊಂಡಿದೆ. ಎಸ್ಎಸ್ ಟಿ ತಂಡವು 2.70 ಲಕ್ಷ ರೂ. ಹಣವನ್ನು ಹಾಗೂ ಅಬಕಾರಿ ಇಲಾಖೆಯವರು 7.23 ಲಕ್ಷ ಮೌಲ್ಯದ 3883 ಲೀ. ಮದ್ಯ, ಪೊಲೀಸ್ ಇಲಾಖೆಯವರು 2724 ರೂ. ಮೌಲ್ಯದ 6.12 ಲೀ. ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ದಾಖಲೆ ಇಲ್ಲದ ಸಾಗಿಸಲಾಗುತ್ತಿದ್ದ 7.26 ಲಕ್ಷ ರೂ. ಮೌಲ್ಯದ 3889 ಲೀ. ಮದ್ಯ, 2.70 ಲಕ್ಷ ರೂ. ಹಣ ಹಾಗೂ 65 ಸಾವಿರ ರೂ. ಮೌಲ್ಯದ 1020 ಸೀರೆಗಳನ್ನು ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್, ಅಬಕಾರಿ ಮತ್ತು ಎಸ್ಎಸ್ ಟಿ ತಂಡದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ತಪಾಸಣಾ ಕಾರ್ಯ ನಡೆಯುತ್ತಿದ್ದು, ಈ ವೇಳೆ ಎಸ್ಎಸ್ಟಿ ತಂಡವು 65 ಸಾಲಿರ ಮೌಲ್ದ 1020 ಸೀರೆಗಳನ್ನು ವಶಪಡಿಸಿಕೊಂಡಿದೆ. ಎಸ್ಎಸ್ ಟಿ ತಂಡವು 2.70 ಲಕ್ಷ ರೂ. ಹಣವನ್ನು ಹಾಗೂ ಅಬಕಾರಿ ಇಲಾಖೆಯವರು 7.23 ಲಕ್ಷ ಮೌಲ್ಯದ 3883 ಲೀ. ಮದ್ಯ, ಪೊಲೀಸ್ ಇಲಾಖೆಯವರು 2724 ರೂ. ಮೌಲ್ಯದ 6.12 ಲೀ. ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಎಸ್ಎಸ್ ಟಿ ತಂಡವು 2.70 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದು, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ₹70 ಸಾವಿರ ರೂ. ಅನ್ನು ವಾರಸುದಾರರಿಗೆ ಮರಳಿಸಲಾಗಿದೆ. ಉಳಿದ 2 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.