ಸಾರಾಂಶ
ಯಗಟಿ ಪಿ.ಕೋಡಿಹಳ್ಳಿಯಲ್ಲಿ ಸಾರ್ವಜನಿಕ ಸಮುದಾಯ ಭವನ- ಜನಜೀವನ್ ಮಿಷನ್ ಕಾಮಗಾರಿ ಚಾಲನೆಯಲ್ಲಿ ಆನಂದ್
ಕನ್ನಡಪ್ರಭ ವಾರ್ತೆ, ಕಡೂರುರಾಜ್ಯಸರಕಾರದಿಂದ ಕಡೂರು ಕ್ಷೇತ್ರದ ಸಮುದಾಯ ಭವನಗಳ ನಿರ್ಮಾಣಕ್ಕೆ 7 ಕೋಟಿ ರು. ಮಂಜೂರು ಮಾಡಿಸ ಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಯಗಟಿಯ ಪಿ.ಕೋಡಿಹಳ್ಳಿಯಲ್ಲಿ ಭಾನುವಾರ ಸಾರ್ವಜನಿಕ ಸಮುದಾಯ ಭವನ ಮತ್ತು ಜನಜೀವನ್ ಮಿಷನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಹಿಂದುಳಿದ ವರ್ಗದವರೇ ಹೆಚ್ಚಿರುವ ಪಿ. ಕೋಡಿಹಳ್ಳಿ ಸಾರ್ವಜನಿಕ ಕಾರ್ಯ ಕ್ರಮಗಳಿಗೆ ಸೂಕ್ತ ವ್ಯವಸ್ಥೆಯಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಮಲೆನಾಡು ಅಭಿವೃದ್ಧಿ ನಿಗಮದಿಂದ 10 ಲಕ್ಷ ಮತ್ತು ಬಿಸಿಎಂ ಇಲಾಖೆಯಿಂದ 20 ಲಕ್ಷರು. ಅನುದಾನ ನೀಡದ್ದು. ಹೆಚ್ಚಿನ ಅನುದಾನದ ಅವಶ್ಯತೆ ಬಿದ್ದರೆ ಒದಗಿಸುವ ಭರವಸೆ ನೀಡಿದರು.ಮುಂದಿನ 2 ವರ್ಷಗಳಲ್ಲಿ ಕಡೂರು ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಬಹು ಗ್ರಾಮ ಯೋಜನೆಯಲ್ಲಿ ಭದ್ರಾನದಿ ಶುದ್ಧ ನೀರು ದೊರಕಿಸಲಾಗುವುದು ಪಿ.ಕೋಡಿಹಳ್ಳಿ ಮತ್ತು ಹಿರೇಗರ್ಜೆ ಗ್ರಾಮದಲ್ಲಿ 56 ಲಕ್ಷ ವೆಚ್ಚದ ಜಲ ಜೀವನ್ ಮಿಷನ್ ಕಾಮಗಾರಿಗೂ ಚಾಲನೆ ನೀಡಲಾಗುತ್ತಿದೆ. ಸೇತುವೆ ರಸ್ತೆಗಾಗಿ 25 ಲಕ್ಷ ರು. 20 ಲಕ್ಷ ರು.ನಲ್ಲಿ ಅಂಬೇಡ್ಕರ್ ಭವನ, ಕ್ಷೇತ್ರದ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕು ಎನ್ನುವ ಕಾರಣಕ್ಕೆ ನಿರಂತರವಾಗಿ ಜಲ ಜೀವನ್ ಮಿಷನ್ ಯೋಜನೆ ಸಂಭಂದಿಸಿದಂತೆ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಈ ಮೂಲಕ ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ದೇವಾಲಯಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ಹೆಚ್ಚುವರಿ 5 ಕೋಟಿ ಅನುದಾನ ಶೀಘ್ರದಲ್ಲಿ ಬರಲಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಶರತ್ ಕೃಷ್ಣಮೂರ್ತಿ ಮಾತನಾಡಿ ಪಿ.ಕೋಡಿಹಳ್ಳಿ ಗ್ರಾಪಂ ಕೇಂದ್ರವಾಗಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರು ನಿರಂತರ ಪ್ರಯತ್ನ ನಡೆಸಬೇಕು. ಶಾಸಕರು ಮತ್ತು ಅಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನ ನೀಡಬೇಕು. ಗ್ರಾಮಕ್ಕೆ ಪಶು ಆಸ್ಪತ್ರೆ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಶಾಸಕರು ಮಂಜೂರು ಮಾಡಿಸಬೇಕು ಎಂದು ಹೇಳಿದರು.ಮಾಜಿ ತಾಪಂ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ ಮಾತನಾಡಿ, ತಾವು ಕಾಂಗ್ರೆಸ್ ನಲ್ಲಿದ್ದಾಗ ಈ ನಮ್ಮ ಊರಿಗೆ ಸೇತುವೆ, ಅಂಗನವಾಡಿ, ಶಾಲೆ ರಸ್ತೆಗಳನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಪ್ರಜ್ವಲ್ ರೇವಣ್ಣರವರ ಸಂಸದರ ನಿಧಿ ಮತ್ತು ವೈ ಎಸ್ ವಿ ದತ್ತರವರ ಕೋಟ್ಯಂತರ ರು. ಅನುದಾನದಲ್ಲಿ ಮಾಡಿರುವ ಕೆಲಸಗಳು ನಮ್ಮಕಣ್ಣ ಮುಂದಿವೆ. ನೂತನ ಶಾಸಕರು ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲಿ ಎಂದರುಪುರ ಗ್ರಾಪಂ ಅಧ್ಯಕ್ಷೆ ಸುಮಾ ಮಹೇಶ್, ದೊಣ್ಣೆಕೋರನಹಳ್ಳಿ ಉಮೇಶ್, ಪಿಎಸೈ ರಂಗನಾಥ್, ಪಿಡಿಒ ಶುಭಲಕ್ಷ್ಮಿ, ಕೆ.ಇ.ಜಯಣ್ಣ, ಕೋಡೀಹಳ್ಳಿ ಸಿದ್ದಪ್ಪ, ಶಿವಣ್ಣ,ಶಾಂತಪ್ಪ, ಗುಮ್ಮನಹಳ್ಳಿ ಅಶೋಕ್,ಯಗಟಿ ಗೋವಿಂದಪ್ಪ,ಆಬಿದ್ ಪಾಷ, ಸಮುದಾಯ ಭವನದ ನಿವೇಶನ ದಾನಿ ಕೆ.ಎಂ.ಈಶ್ವರಪ್ಪ ಯಗಟಿ ಮತ್ತು ಪುರ ಗ್ರಾಪಂ ಸದಸ್ಯರು ಹಾಜರಿದ್ದರು. --ಬಾಕ್ಸ್ ಸುದ್ದಿಗೆ- --ತಾಳ್ಮೆ ಶಾಸಕನಾದೆ
ನನ್ನ ಸಕ್ರಿಯ ರಾಜಕಾರಣದಲ್ಲಿ ನನ್ನ ತಂದೆ ಮಾತು ಕೇಳದೇ ಹೋಗಿದ್ದರೆ ನಾನು ಶಾಸಕನಾಗುತ್ತಿರಲಿಲ್ಲ. ಅಂದಿನ ದಿನಗಳಲ್ಲಿ ಶಾಸಕರಾಗುವ ಕಲ್ಪನೆ ಕೂಡ ನನಗಿರಲಿಲ್ಲ. ಪುರಸಭೆ ಸದಸ್ಯನಾದರೆ ಸಾಕು ಎನ್ನುವ ಸಂದರ್ಭದಲ್ಲಿ ನನ್ನ ತಂದೆ ಸಿದ್ದಪ್ಪ ಮತ್ತು ಶಾಸಕರಾಗಿದ್ದ ಕೆ ಎಂ ಕೃಷ್ಣಮೂರ್ತಿ ಸ್ನೇಹಿತರಾಗಿದ್ದು ಪುರಸಭೆ ಟಿಕೆಟ್ ನೀಡದ ಕಾರಣ ಬೇರೆಡೆ ಹೋಗಲು ನಿರ್ಧರಿಸಿದಾಗ ನನ್ನ ತಂದೆ ಬೇರೆ ಕಡೆ ಹೋಗುವುದಾದರೆ ನೀನು ರಾಜಕಾರಣ ಮಾಡುವುದೇ ಬೇಡ ಎಂದಿದ್ದರು. ತಂದೆ ಮಾತಿನಂತೆ ತಾಳ್ಮೆಯಿಂದ ಇದ್ದುದಕ್ಕೆ ಇಂದು ಶಾಸಕನಾಗಿದ್ದೇನೆ.--ಕೆ.ಎಸ್.ಆನಂದ್, ಶಾಸಕ.18ಕೆಕೆಡಿಯು2.
ಪಿ.ಕೋಡಿಹಳ್ಳಿಯಲ್ಲಿ ಸಾರ್ವಜನಿಕ ಸಮುದಾಯ ಭವನ ಮತ್ತು ಜಲ ಜೀವನ್ ಮಿಷನ್ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಶಂಕುಸ್ಥಾಪನೆ ನೆರವೇರಿಸಿದರು.