ಬೈರಮಂಗಲ ಕ್ರಾಸ್‌ನಲ್ಲಿ 7 ಅಡಿ ಕೆಂಪೇಗೌಡರ ಪುತ್ಥಳಿ ಅನಾವರಣ

| Published : Oct 31 2025, 01:15 AM IST

ಬೈರಮಂಗಲ ಕ್ರಾಸ್‌ನಲ್ಲಿ 7 ಅಡಿ ಕೆಂಪೇಗೌಡರ ಪುತ್ಥಳಿ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬಿಡದಿ ಬಳಿಯ ಬೈರಮಂಗಲ ಕ್ರಾಸ್ ನಲ್ಲಿ ಪ್ರತಿಷ್ಠಾಪಿಸಿರುವ ಸುಮಾರು 7 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ಒಕ್ಕಲಿಗ ಸಮುದಾಯದ ಮುಖಂಡರು ಗುರುವಾರ ಅನಾವರಣಗೊಳಿಸಿದರು.

ರಾಮನಗರ: ಬಿಡದಿ ಬಳಿಯ ಬೈರಮಂಗಲ ಕ್ರಾಸ್ ನಲ್ಲಿ ಪ್ರತಿಷ್ಠಾಪಿಸಿರುವ ಸುಮಾರು 7 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ಒಕ್ಕಲಿಗ ಸಮುದಾಯದ ಮುಖಂಡರು ಗುರುವಾರ ಅನಾವರಣಗೊಳಿಸಿದರು.

ನಾಡಪ್ರಭು ಕೆಂಪೇಗೌಡರ ಪುತ್ಥಳಿಗೆ ಬೃಹತ್ ಹೂವಿನ ಹಾರ ಹಾಕಿ ಪುಷ್ಪಾರ್ಚನೆ ಮಾಡಿದ ಸಮುದಾಯದ ಮುಖಂಡರು ಪೂಜೆ ಸಲ್ಲಿಸಿದರು. ಈ ವೇಳೆ ನಾಡಪ್ರಭು ಕೆಂಪೇಗೌಡರ ಪರವಾಗಿ ಘೋಷಣೆಗಳು ಮೊಳಗಿದವು.

ಈ ವೇಳೆ ಮಾತನಾಡಿದ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್, ಪುರಸಭಾ ವ್ಯಾಪ್ತಿಯ ಬೈರಮಂಗಲ ವೃತ್ತದಲ್ಲಿ ಕೆಂಪೇಗೌಡರ ಪುತ್ಥಳಿಯನ್ನು ಎಲ್ಲರು ಒಟ್ಟಾಗಿ ಸೇರಿ ಅನಾವರಣ ಮಾಡಿದ್ದೇವೆ. ಶಾಸಕರಾದ ಬಾಲಕೃಷ್ಣರ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಪಟ್ಟಣ ವ್ಯಾಪ್ತಿಯಲ್ಲಿ ಹಲವು ಮಹನೀಯರ ಪ್ರತಿಮೆಗಳನ್ನು ನಿರ್ಮಾಣ ಮಾಡಬೇಕೆಂಬ ಯೋಜನೆಯನ್ನ ರೂಪಿಸಲಾಗಿತ್ತು.‌ ಇದರ ಭಾಗವಾಗಿ ಕೆಂಪೇಗೌಡರ ಪ್ರತಿಮೆಯನ್ನ ಲೋಕಾರ್ಪಣೆ ಮಾಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಶ್ರೀ ಶಿವಕುಮಾರಸ್ವಾಮಿ ಪ್ರತಿಮೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಅಂಬೇಡ್ಕರ್ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಶೀಘ್ರವಾಗಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸಹ ನಿರ್ಮಾಣ ಮಾಡಲಾಗುತ್ತದೆ. ಹಾಗಾಗಿ ದಲಿತ ಸಮುದಾಯದ ಮುಖಂಡರು ಯಾವುದೇ ಗೊಂದಲಕ್ಕೆ ಕಿವಿ ಗೊಡಬೇಡಿ ಎಂದರು.

ಕಾಂಗ್ರೆಸ್ ಮುಖಂಡ ಎಲ್.ಚಂದ್ರಶೇಖರ್ ಮಾತನಾಡಿ, ಸರ್ವ ಧರ್ಮಗಳ ನಾಯಕರಾದ ಕೆಂಪೇಗೌಡರ ಪುತ್ಥಳಿಯನ್ನು ಅನಾವರಣ ಮಾಡಿರುವುದು ಸಂತಸದ ವಿಚಾರ. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗ್ಗೆ ನಮ್ಮ ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಅಗಬೇಕಿದೆ. ಇದೀಗ ಇಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಾಣ ವಾಗಿರುವ ಹಿನ್ನೆಲೆಯಲ್ಲಿ ಈ ವೃತ್ತಕ್ಕೆ ಕೆಂಪೇಗೌಡ ಸರ್ಕಲ್ ಎಂದು ನಾಮಕರಣ ಮಾಡುವ ಯೋಜನೆ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಸಮುದಾಯದ ಮುಖಂಡ ಬ್ಯಾಟಪ್ಪ ಮಾತನಾಡಿ, ನ.1ರಂದು ಇದೇ ಪುತ್ಥಳಿ ಸ್ಥಳದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಅಂದು ಹಲವು ಮನರಂಜನಾ ಕಾರ್ಯಕ್ರಮಗಳನ್ನ ಸಹ ಹಮ್ನಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಚಿಕ್ಕಣ್ಣಯ್ಯ, ಬೆಟ್ಟಸ್ವಾಮಿ, ಅಬ್ಬನಕುಪ್ಪೆ ರಮೇಶ್, ಲೋಕೇಶ್, ಕುಮಾರ್, ನಾಗೇಶ್, ಮುತ್ತಣ್ಣ, ಭಾನುಪ್ರಕಾಶ್, ಲೋಕೇಶ್, ಬಾನಂದೂರು ನಂಜುಂಡಿ, ರವಿ, ಪಾರ್ಥ, ಬಸವರಾಜು, ರೇಣುಕಪ್ಪ, ಧನಲಕ್ಷಿಕುಮಾರ್, ಪುಟ್ಟಣ್ಣ ಬಾನಂದೂರು ಕುಮಾರ್, ಪುಟ್ಟಣ್ಣ ಸಂದೀಪ್, ಜಗದೀಶ್ ಸೇರಿದಂತೆ ಅನೇಕರು ಹಾಜರಿದ್ದರು.

30ಕೆಆರ್ ಎಂಎನ್ 5.ಜೆಪಿಜಿ

ಬಿಡದಿ ಬಳಿಯ ಬೈರಮಂಗಲ ಕ್ರಾಸ್ ನ ವೃತ್ತದಲ್ಲಿ ಸುಮಾರು 7 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ಒಕ್ಕಲಿಗ ಸಮುದಾಯದ ಮುಖಂಡರು ಗುರುವಾರ ಅನಾವರಣಗೊಳಿಸಿದರು.