ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಮೈಸೂರಿನಲ್ಲಿ ಆಯೋಜಿಸಿದ 62 ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ಗೆ 7 ಪದಕಗಳು ಲಭಿಸಿದೆ.ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಸ್ಕೇಟರ್ಸ್‌ಗಳಾದ ಜೆಸ್ನಿಯಾ ಕೊರೆಯಾ, ಡ್ಯಾಶಿಯೆಲ್ ಅಮಾಂಡಾ ಕಾನ್ಸೆಸ್ಸಾವೊ ಮತ್ತು ಪಿ.ಶಾಲೋಮ್ ಕ್ರಿಸ್ಟನ್ ಈ ಸಾಧನೆ ಮಾಡಿದ್ದು 4 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಜೆಸ್ನಿಯಾ ಕೊರೆಯಾ 500 ಮೀಟರ್ ರಿಂಕ್ ರೇಸ್ ಹಾಗೂ ವನ್ ಲ್ಯಾಪ್ ರೋಡ್ ರೇಸ್‌ನಲ್ಲಿ 2 ಬೆಳ್ಳಿ ಪದಕ ಹಾಗೂ 1,500 ಮೀಟರ್ ರಿಂಕ್ ರೇಸ್‌ನಲ್ಲಿ 1 ಕಂಚಿನ ಪದಕಗಳನ್ನ ಗೆದ್ದಿದ್ದಾರೆ. ಡ್ಯಾಶಿಯೆಲ್ ಅಮಾಂಡಾ ಕಾನ್ಸೆಸ್ಸಾವೊ ಅವರು 17 ವರ್ಷಕ್ಕಿಂತ ಮೇಲ್ಪಟ್ಟ ಮಿಶ್ರ ಬಾಲಕಿಯರ ವಿಭಾಗದ ರಿಲೇಯಲ್ಲಿ 2 ಬೆಳ್ಳಿ ಪದಕ ಹಾಗೂ 500 ಮೀಟರ್ ರಿಂಕ್ ರೇಸ್ ನಲ್ಲಿ 1 ಕಂಚಿನ ಪದಕ ಗೆದ್ದಿದ್ದಾರೆ. ಪಿ.ಶಾಲೋಮ್ ಕ್ರಿಸ್ಟನ್ ರವರು ವನ್‌ಲ್ಯಾಪ್ ರೋಡ್ ರೇಸ್‌ನಲ್ಲಿ 1 ಕಂಚಿನ ಪದಕ ಗೆದ್ದಿದ್ದಾರೆ. ಸಾಧನೆ ಮಾಡಿದ ಈ ಮೂವರು ಸ್ಕೇಟರ್ ಗಳಿಗೆ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ತರಬೇತುದಾರರಾದ ಮೋಹನ್ ದಾಸ್ ಕೆ, ಜಯರಾಜ್ ಮತ್ತು ರಮಾನಂದ ಕೆ. ವಿ. ಅವರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.