ಚಿಕ್ಕಮಗಳೂರುಚಿಕ್ಕಮಗಳೂರು, ಕಳಸ ತಾಲೂಕು ಸಹಿತ ಬರ ಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರ ಗುರುವಾರ ಘೋಷಿಸಿದೆ. ಈ ಮೂಲಕ ಮಲೆನಾಡಿನ ಮಡಿಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ 9 ತಾಲೂಕುಗಳ ಪೈಕಿ 7 ತಾಲೂಕುಗಳು ಈ ಬಾರಿ ಬರಕ್ಕೆ ತುತ್ತಾದಂತಾಗಿದೆ.
- ಅಜ್ಜಂಪುರ, ಕಡೂರು,ಚಿಕ್ಕಮಗಳೂರಲ್ಲಿ ತೀವ್ರ ಬರ । ತರೀಕೆರೆ, ಕೊಪ್ಪ, ಎನ್‌ಆರ್‌ಪುರ ಹಾಗೂ ಕಳಸ ತಾಲೂಕುಗಳಲ್ಲಿ ಭಾಗಶಃ ಬರಪೀಡಿತ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚಿಕ್ಕಮಗಳೂರು, ಕಳಸ ತಾಲೂಕು ಸಹಿತ ಬರ ಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರ ಗುರುವಾರ ಘೋಷಿಸಿದೆ. ಈ ಮೂಲಕ ಮಲೆನಾಡಿನ ಮಡಿಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ 9 ತಾಲೂಕುಗಳ ಪೈಕಿ 7 ತಾಲೂಕುಗಳು ಈ ಬಾರಿ ಬರಕ್ಕೆ ತುತ್ತಾದಂತಾಗಿದೆ.
ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ವಿಧಾನಪರಿಷತ್ತು ಸದಸ್ಯೆ ಗಾಯತ್ರಿ ಶಾಂತೇಗೌಡ ಕಳೆದ ಸೆ.23 ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಚಿಕ್ಕಮಗಳೂರು ತಾಲೂಕನ್ನು ಬರ ಪೀಡಿತ ತಾಲೂಕೆಂದು ಘೋಷಿಸಲು ಮನವಿ ಸಲ್ಲಿಸಿದ್ದರು.ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ, ಚಿಕ್ಕಮಗಳೂರು ಹಾಗೂ ಕಳಸ ತಾಲೂಕಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಗ್ರೌಂಡ್ ಟ್ರೂಥ್ ಸರ್ವೇಗೆ ಸರ್ಕಾರ ಆದೇಶಿಸಲಾಗಿತ್ತು.
ಅದರಂತೆ ಸೆ.25, ಸೆ.26 ರಂದು ಸರ್ವೇ ನಡೆಸಿ, ಸೆ.28 ರಂದು ವರದಿ ಸಿದ್ಧಪಡಿಸಿ ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.ಚಿಕ್ಕಮಗಳೂರು ತಾಲೂಕು ತೀವ್ರ ಬರ:ಗುರುವಾರ ರಾಜ್ಯ ಸರ್ಕಾರ ನಾಲ್ಕನೇ ಹಂತದ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಿದ್ದು, ಈ ಪೈಕಿ ಚಿಕ್ಕಮ ಗಳೂರು ಹಾಗೂ ಕಳಸ ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಿದೆ. ಚಿಕ್ಕಮಗಳೂರು ತಾಲೂಕು ತೀವ್ರ, ಕಳಸ ಭಾಗಶಃ ಬರ ಪೀಡಿತ ತಾಲೂಕು ಎಂದು ಹೇಳಿದೆ.ಶೇ.10 ಹಳ್ಳಿಗಳಲ್ಲಿ ಪರಿಶೀಲನೆ:
ಗ್ರೌಂಡ್ ಟ್ರೂಥ್ ಸರ್ವೇಗೆ ತಾಲೂಕಿನ ಹಳ್ಳಿಗಳ ಪೈಕಿ ಶೇ.10 ರಷ್ಟು ಹಳ್ಳಿಗಳನ್ನು ರ್‍ಯಾಂಡಮ್ ಪದ್ಧತಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಬೆಳೆಗಳ ಕುರಿತ ವಾಸ್ತಾಂಶ ವನ್ನು ಮೊಬೈಲ್ ಆ್ಯಪ್ ಮೂಲಕ ಫೋಟೋದೊಂದಿಗೆ ಅಫ್ ಲೋಡ್ ಮಾಡಲಾಗಿತ್ತು. ಈ ಅಂಶದ ಆಧಾರದಲ್ಲಿ ಬರ ಘೋಷಣೆ ತೀರ್ಮಾನವನ್ನು ಸರ್ಕಾರ ಮಾಡಿದೆ.--ಬಾಕ್ಸ್--9ತಾಲೂಕುಗಳಲ್ಲಿ 7ರಲ್ಲಿ ಬರ
ಚಿಕ್ಕಮಗಳೂರು ಜಿಲ್ಲೆಯ 9 ತಾಲೂಕು ಪೈಕಿ ಅಜ್ಜಂಪುರ, ತರೀಕೆರೆ, ಎನ್.ಆರ್.ಪುರ, ಕೊಪ್ಪ, ಕಡೂರು, ಕಳಸ, ಚಿಕ್ಕಮಗಳೂರು ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ.ಈ ಪೈಕಿ ಅಜ್ಜಂಪುರ, ಕಡೂರು,ಚಿಕ್ಕಮಗಳೂರು ತಾಲೂಕನ್ನು ತೀವ್ರ ಬರ ಪೀಡಿತ, ತರೀಕೆರೆ, ಕೊಪ್ಪ, ಎನ್‌ಆರ್‌ಪುರ ಹಾಗೂ ಕಳಸ ತಾಲೂಕುಗಳನ್ನು ಭಾಗಶಃ ಬರಪೀಡಿತ ತಾಲೂಕು ನಾಲ್ಕು ಹಂತದಲ್ಲಿ ಘೋಷಿಸಲಾಗಿದೆ.
---ಬಾಕ್ಸ್---ಬರ ಘೋಷಣೆ ವಿವರ
ಮೊದಲ ಹಂತದಲ್ಲಿ 101 ತಾಲೂಕು ಬರ ಪೀಡಿತಎರಡನೇ ಹಂತದಲ್ಲಿ 23 ತಾಲೂಕು ಬರ ಪೀಡಿತ
ಮೂರನೇ ಹಂತದಲ್ಲಿ 53 ತಾಲೂಕು ಬರ ಪೀಡಿತನಾಲ್ಕನೇ ಹಂತದಲ್ಲಿ 40 ತಾಲೂಕು ಬರ ಪೀಡಿತ-- ಬಾಕ್ಸ್.--
ಜನತೆ ಪರವಾಗಿ ಸರ್ಕಾರಕ್ಕೆ ಧನ್ಯವಾದ: ತಮ್ಮಯ್ಯಚಿಕ್ಕಮಗಳೂರು: ವಾಡಿಕೆಗಿಂತ ಕಡಿಮೆ ಮಳೆಯಾದ ಹಿನ್ನೆಲೆಯಲ್ಲಿ ಜನರು ಹಾಗೂ ಜಾನುವಾರುಗಳು ತೀವ್ರ ತೊಂದರೆ ಎದುರಿಸುತ್ತಿರುವುದನ್ನು ಪರಿಗಣಿಸಿ ರಾಜ್ಯ ಸರ್ಕಾರ ಚಿಕ್ಕಮಗಳೂರು ತಾಲೂಕನ್ನು ಬರಪೀಡಿತ ತಾಲೂಕಾಗಿ ಘೋಷಿಸಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದ್ದಾರೆ.ಚಿಕ್ಕಮಗಳೂರು ತಾಲೂಕು ತೀವ್ರ ಬರದ ಪಟ್ಟಿಗೆ ಸೇರ್ಪಡೆಯಾಗಿದ್ದು, ಮಳೆ ಕೊರತೆಯಿಂದಾಗಿ ತಾಲೂಕಿನ ಲಕ್ಯಾ ಹಾಗೂ ಅಂಬಳೆ ಹೋಬಳಿಗಳಲ್ಲಿ ರೈತರ ಬೆಳೆಗಳು ಹಾನಿಗೊಳಗಾಗಿವೆ. ಹಲವೆಡೆ ಅಂತರ್ಜಲ ಮಟ್ಟವೂ ಕುಸಿದಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಎರಡು ಹಂತಗಳಲ್ಲಿ ವಿವಿಧ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿತ್ತು. ಇದೇ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕನ್ನೂ ಬರ ಪೀಡಿತ ಎಂದು ಘೋಷಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.ಇತ್ತೀಚೆಗೆ ಕಸ್ತೂರಿರಂಗನ್ ವರದಿ ಹಾಗೂ ಬರಪೀಡಿತ ಪರಿಸ್ಥಿತಿ ಕುರಿತು ಚರ್ಚಿಸಲು ನಡೆದ ವಿಶೇಷ ಅಧಿವೇಶನದಲ್ಲೂ ಚಿಕ್ಕಮಗಳೂರು ತಾಲೂಕಿನ ವಾಸ್ತವಿಕ ಪರಿಸ್ಥಿತಿಯನ್ನು ಸದನದ ಗಮನಕ್ಕೆ ತಂದಿದ್ದೆ. ರೈತರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ವಿವರಿಸಿ ಬರಪೀಡಿತ ತಾಲೂಕು ಘೋಷಿಸುವಂತೆ ಒತ್ತಾಯಿಸಲಾಗಿತ್ತು ಎಂದು ಹೇಳಿದ್ದಾರೆ.ತಾಲೂಕಿನ ವಾಸ್ತವಿಕ ಪರಿಸ್ಥಿತಿ ಅರಿತು ರೈತರು ಹಾಗೂ ಜನರ ಹಿತದೃಷ್ಟಿಯಿಂದ ಚಿಕ್ಕಮಗಳೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಚಿಕ್ಕಮಗಳೂರು ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದ್ದಾರೆ.(ತಮ್ಮಯ್ಯ ಪೋಟೊ ಬಳಸಿ)
