7 ಜನ ಬಾಲ ಕಾರ್ಮಿಕರ ರಕ್ಷಣೆ

| Published : Dec 23 2023, 01:46 AM IST

ಸಾರಾಂಶ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿಯ ಲಾಡ್ಲಾಪೂರ, ನಾಲವಾರ ಮತ್ತು ಸನ್ನತಿ ರೋಡ್‍ನ ಹತ್ತಿ ಹೊಲದಲ್ಲಿ ಹಠಾತ್‌ ದಾಳಿ ನಡೆಸಿ 7 ಜನ ಬಾಲಕಿಯರನ್ನು ರಕ್ಷಿಸಿ, ಸರ್ಕಾರಿ ಬಾಲಕಿರ ಮಂದಿರದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರಾದ ಡಾ.ಅವಿನಾಶ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮಕ್ಕಳ ಸಹಾಯವಾಣಿ 1098/112ಗೆ ಬಂದ ದೂರಿನ್ವಯ ಪೊಲೀಸ್, ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪಂಚಾಯತ್‌ ರಾಜ್ಯ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ-1098/112 ತಂಡದೊಂದಿಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿಯ ಲಾಡ್ಲಾಪೂರ, ನಾಲವಾರ ಮತ್ತು ಸನ್ನತಿ ರೋಡ್‍ನ ಹತ್ತಿ ಹೊಲದಲ್ಲಿ ಹಠಾತ್‌ ದಾಳಿ ನಡೆಸಿ 7 ಜನ ಬಾಲಕಿಯರನ್ನು ರಕ್ಷಿಸಿ, ಸರ್ಕಾರಿ ಬಾಲಕಿರ ಮಂದಿರದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರಾದ ಡಾ.ಅವಿನಾಶ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ, ಸದರಿ ಮಕ್ಕಳ ಶೈಕ್ಷಣಿಕ ಮತ್ತು ವಯಸ್ಸಿನ ದಾಖಲೆ ಪಡೆದುಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಹಠಾತ ದಾಳಿ ಸಂದರ್ಭದಲ್ಲಿ ಬಾಲಕಾರ್ಮಿಕ ಯೋಜನಾ ಸೂಸೈಟಿ ಕಲಬುರಗಿ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಲಾಡ್ಲಾಪೂರ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಗೋಪಾಲ ಕಟ್ಟಮನಿ, ಉಪ ಆಯುಕ್ತರ ಕಚೇರಿ ಹಿರಿಯ ಆರ.ಟಿ.ಓ. ಎಚ್.ಸಾಯಿ ಧರ್ಮಿಂದರ, ಎಸ್.ಡಿ.ಎ. ಅಣ್ಣಾರಾಯ್ಯ, ಸಂಸ್ಕಾರ ಪ್ರತಿಷ್ಠಾನ ಸಂಸ್ಥೆ ನಿರ್ದೇಶಕ ವಿಠ್ಠಲ ಚಿಕಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತ ಗೌರಿಶಂಕರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿ-1098/112 ಕಾರ್ಯಕ್ರಮ ಸಂಯೋಜಕ ಬಸವರಾಜ ತೆಂಗಳಿ, ಮೇಲ್ವಿಚಾರಕರು ಕು. ಅನುಸೂಯ್ಯ, ಕ್ಷೇತ್ರ ಕಾರ್ಯಕರ್ತ. ಸುಂದರ, ಸಂತೋಷ ತಾಂಡೂರ ಹಾಗೂ ವಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಮಹೇಶ ಅವರು ಉಪಸ್ಥಿತರಿದ್ದರು.