ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಅಬಕಾರಿ ಇಲಾಖೆಯಲ್ಲಿ ದಂಧೆ ನಡೆಯುತ್ತಿದೆ. ಅಬಕಾರಿ ಇಲಾಖೆ ಮದ್ಯದ ಕಾಂಟ್ರಾಕ್ಟರ್‌ಗಳು ಆರೋಪ ಮಾಡಿದ್ದಾರೆ. ನಿಮಗೆ ನಾಚಿಕೆ ಆಗಲ್ಲಾ? ಏನೂ ಅನಿಸಲ್ವಾ?. ಇಷ್ಟೊಂದು ದೊಡ್ಡ ಪ್ರಮಾಣದ ₹700 ಕೋಟಿ ಕಮೀಷನ್ ದಂಧೆ. ನಿಮಗೆ ಕಮೀಷನ್ ಬಂದಿದೆ, ಇನ್ನೂ ಕೊಡೋಕೆ ಆಗಲ್ಲ. ಮದ್ಯದ ಅಂಗಡಿ ಬಂದ್ ಮಾಡ್ತೀವಿ ಅಂತ ಕೇಳೋದು ಇದೇ ಮೊದಲ ಬಾರಿಗೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಅಬಕಾರಿ ಇಲಾಖೆಯಲ್ಲಿ ದಂಧೆ ನಡೆಯುತ್ತಿದೆ. ಅಬಕಾರಿ ಇಲಾಖೆ ಮದ್ಯದ ಕಾಂಟ್ರಾಕ್ಟರ್‌ಗಳು ಆರೋಪ ಮಾಡಿದ್ದಾರೆ. ನಿಮಗೆ ನಾಚಿಕೆ ಆಗಲ್ಲಾ? ಏನೂ ಅನಿಸಲ್ವಾ?. ಇಷ್ಟೊಂದು ದೊಡ್ಡ ಪ್ರಮಾಣದ ₹700 ಕೋಟಿ ಕಮೀಷನ್ ದಂಧೆ. ನಿಮಗೆ ಕಮೀಷನ್ ಬಂದಿದೆ, ಇನ್ನೂ ಕೊಡೋಕೆ ಆಗಲ್ಲ. ಮದ್ಯದ ಅಂಗಡಿ ಬಂದ್ ಮಾಡ್ತೀವಿ ಅಂತ ಕೇಳೋದು ಇದೇ ಮೊದಲ ಬಾರಿಗೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.ಅಬಕಾರಿ ಇಲಾಖೆಯಲ್ಲಿ ಕಿಕ್ ಬ್ಯಾಕ್ ವಿಚಾರದ ಕುರಿತು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಮದ್ಯದ ಅಂಗಡಿಗಳನ್ನು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಿರೋದನ್ನು ನಾವು ಕೇಳಿಲ್ಲ. ಒಂದು ದಿನ ಬಂದ್ ಮಾಡಿದ್ರೆ ತುಂಬಾ ಆದಾಯ ನಷ್ಟವಾಗುತ್ತದೆ. ಕರ್ನಾಟಕದಲ್ಲಿ ಎಲ್ಲಾ ಮದ್ಯದಂಗಡಿ, ಬಾರ್ ಬಂದ್ ಮಾಡಿ ಹೋರಾಟ ಮಾಡುತ್ತೇವೆ ಅಂತಿದ್ದಾರೆ. ಯಾಕೆ ನಿಮ್ಮ ಕಿರುಕುಳ ತಡೆದುಕೊಳ್ಳೋಕೆ ಆಗದೆ, ಕಮೀಷನ್ ಬಗ್ಗೆ ಮಾತನಾಡುತ್ತಿದ್ದೀರಿ? ಈಗ ನಿಮ್ಮದು ಎಷ್ಟು ಕಮೀಷನ್ ಸರ್ಕಾರ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.
ನೀವು ತಿಮ್ಮಾಪುರಗೆ ಕೇಳಬೇಕಲ್ಲವಾ? ಡಿ.ಕೆ.ಶಿವುಕುಮಾರ ಅವರೇ ನೀವು ಬೀದಿ ಬೀದಿಗಳಲ್ಲಿ ತಿರುಗಿದ್ರಿ. ನಿಮ್ಮದು ಎಷ್ಟು ಪರ್ಸೆಂಟೇಜ್ ಸರ್ಕಾರ? ಲೆಕ್ಕ ಸಿಕ್ಕಿದೆಯೋ ಇಲ್ವೋ?, ಇದು ಅಬಕಾರಿ ಇಲಾಖೆಯಲ್ಲಿ ನಡೆದಿರೋದು. ನಿಮ್ಮ ಮುಖವಾಡ ಕಳಚುವ ಕೆಲಸ ಅಬಕಾರಿ ಇಲಾಖೆಯ ಗುತ್ತಿಗೆದಾರರು ಮಾಡಿದ್ದಾರೆ. ಇದಕ್ಕೆ ಉತ್ತರ ಕೊಡಿ? ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರನ್ನು ಎತ್ತಿಕಟ್ಟಿದ್ರಿ. ಈಗ ಆ ಗುತ್ತಿಗೆದಾರರು ಎಲ್ಲಿದ್ದಾರೋ ಗೊತ್ತಿಲ್ಲ, ಎಲ್ಲಿ ನಾಪತ್ತೆಯಾದರೂ ಅಂತ ಗೊತ್ತಿಲ್ಲ ಎಂದು ಹೇಳಿದರು.ಬೆಂಗಳೂರಿನ ನನ್ನ ಕ್ಷೇತ್ರದ ಓರ್ವ ಗುತ್ತಿಗೆದಾರ ನನಗೆ ಫೋನ್ ಮಾಡಿ ಬಂದಿದ್ದರು. ಬಿಬಿಎಂಪಿಯಲ್ಲಿ ಬಿಲ್ ಪೆಂಡಿಂಗ್ ಇದೆ, ಏನಾದರೂ ಸಹಾಯ ಮಾಡಿ ಬದುಕುವ ಸ್ಥಿತಿಯಲ್ಲಿ ಇಲ್ಲ ಅಂದ್ರು. ಈ ಸರ್ಕಾರದಲ್ಲಿ ದುಡ್ಡಿಲ್ಲ, ದಿವಾಳಿಯಾಗಿದೆ ಯಾರಿಗೆ ಮಾತಾಡೋಣ ಅಂದೆ. ನನ್ನ ಬಳಿ ಬಂದು ಒಂದು ತಿಂಗಳು ಆಗಿಲ್ಲ, ನಿನ್ನೆ ಅವರು ಸತ್ತುಹೋದರು. ಇಷ್ಟು ಚಿಂತೆಯಲ್ಲಿ ಕಾಂಟ್ರ್ಯಾಕ್ಟರ್ ಇದ್ದಾರೆ. ಅವತ್ತು ನಮ್ಮ ಮೇಲೆ ಆರೋಪ ಮಾಡಿದ್ರಿ, ಇವತ್ತು ಗುತ್ತಿಗೆದಾರರು ಸಾಯುತ್ತಿದ್ದಾರೆ. ಇದಕ್ಕೆ ಉತ್ತರ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.