ಸಾರಾಂಶ
ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಅಡಿಯಲ್ಲಿ ಈವರೆಗೆ ಸಂಚರಿಸಿದ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 7 ಸಾವಿರ ಕೋಟಿ ರು. ತಲುಪಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಅಡಿಯಲ್ಲಿ ಈವರೆಗೆ ಸಂಚರಿಸಿದ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 7 ಸಾವಿರ ಕೋಟಿ ರು. ತಲುಪಿದೆ.ಕಳೆದ ವರ್ಷದ ಜೂನ್ 11ರಂದು ಜಾರಿಯಾದ ಶಕ್ತಿ ಯೋಜನೆಯಡಿ ಕಳೆದ 15 ತಿಂಗಳಲ್ಲಿ 285 ಕೋಟಿ ಫಲಾನುಭವಿ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಹೀಗೆ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 7 ಸಾವಿರ ಕೋಟಿ ರು. ತಲುಪಿದೆ.
2023-24ನೇ ಸಾಲಿನಲ್ಲಿ ಯೋಜನೆಗಾಗಿ 2,800 ಕೋಟಿ ರು. ನಿಗದಿ ಮಾಡಲಾಗಿತ್ತಾದರೂ, ಅಂತಿಮವಾಗಿ 4 ಸಾವಿರ ಕೋಟಿ ರು.ಗೂ ಹೆಚ್ಚಿನ ವೆಚ್ಚವಾಗಿತ್ತು. 2024-25ನೇ ಸಾಲಿಗೆ ರಾಜ್ಯ ಸರ್ಕಾರ 5,200 ಕೋಟಿ ರು. ಮೀಸಲಿಟ್ಟಿದೆ. ಅದರಲ್ಲಿ ಈಗಾಗಲೆ ಮೂರು ಸಾವಿರ ಕೋಟಿ ರು.ವರೆಗೆ ಖರ್ಚಾಗಿದ್ದು, ಇನ್ನು 6 ತಿಂಗಳಿಗೆ 2,200 ಕೋಟಿ ರು.ಗಳು ಮಾತ್ರ ಉಳಿದಿದೆ. ಹೀಗಾಗಿ ಈ ವರ್ಷವೂ ಯೋಜನೆಗಾಗಿ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡಬೇಕಾಗುವ ಸಾಧ್ಯತೆಗಳಿವೆ.