ಸಾರಾಂಶ
- ಡಾ.ಸದ್ಯೋಜಾತ ಶಿವಾಚಾರ್ಯ ಶ್ರೀ ಸಾನ್ನಿಧ್ಯ: ಸಿರಿಗೆರೆ ರಾಜಣ್ಣ ಮಾಹಿತಿ । ಹಿರೇಮಠದಲ್ಲಿ ಆಯೋಜನೆ
- - -- ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು ಎಂಬ ಮುಖ್ಯ ಧ್ಯೇಯದೊಂದಿಗೆ ಸಪ್ತಾಹ
- ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ, ವಿಷಯ ತಜ್ಞ ಡಾ. ಎಚ್.ಎಸ್. ಮಂಜುನಾಥ್ ಅವರಿಂದ ಉಪನ್ಯಾಸ- - -
ಕನ್ನಡಪ್ರಭ ವಾರ್ತೆ ದಾವಣಗೆರೆಸಹಕಾರ ಇಲಾಖೆ, ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಕ್ಕೂಟ ಇತರೆ ಸಹಕಾರ ಸಂಸ್ಥೆಗಳ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025ರ ಉದ್ಘಾಟನಾ ಸಮಾರಂಭ ನಗರದ ಎಂಸಿಸಿ ಬಿ ಬ್ಲಾಕ್‌ನ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಿರೇಮಠದಲ್ಲಿ ನ.14ರಂದು ನಡೆಯಲಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಅಧ್ಯಕ್ಷ, ಹಿರಿಯ ಸಹಕಾರಿ ಧುರೀಣ ಸಿರಿಗೆರೆ ರಾಜಣ್ಣ, ಬೆಳಗ್ಗೆ 11.30ಕ್ಕೆ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು ಎನ್ನುವ ಮುಖ್ಯ ಧೈಯದೊಂದಿಗೆ ಸಪ್ತಾಹ ನಡೆಸಲಾಗುತ್ತಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಡಾ. ಜೆ.ಆರ್. ಷಣ್ಮುಖಪ್ಪ, ಜಿ.ಎನ್. ಸ್ವಾಮಿ, ಶೋಭಾ ಉಮೇಶ ಕುಮಾರ, ಚೇತನ ಎಸ್. ನಾಡಿಗರ, ಎಚ್.ಜಿ.ಮಂಜುಳಾ ಗಣೇಶ, ಜಗದೀಶಪ್ಪ ಬಣಕಾರ್, ಎಚ್.ಕೆ.ಬಸಪ್ಪ, ಬಿ.ಜಿ.ಬಸವರಾಜಪ್ಪ, ಆರ್.ಜಿ. ಶ್ರೀನಿವಾಸಮೂರ್ತಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಬಿ.ಸಿ.ಉಮಾಪತಿ, ಎನ್.ಎ. ಮುರುಗೇಶ್ ಆರಾಧ್ಯ, ಎಂ.ಬಿ. ಸಂಗಮೇಶ್ವರ ಗೌಡ, ಎಂ.ಜಯಕುಮಾರ, ಎಂ.ಗೋಪಾಲ ರಾವ್, ಕೆ.ಪರಶುರಾಮ, ಕೆ.ಎಸ್. ಮಹೇಶ್ವರಪ್ಪ, ಜೆ.ಎಸ್. ವೇಣುಗೋಪಾಲ ರೆಡ್ಡಿ, ಡಿ.ಎಸ್. ಸುರೇಂದ್ರ, ಬಿ.ಶೇಖರಪ್ಪ, ಗಿರೀಶ ಮುದೇಗೌಡ, ಜಿ.ಎಸ್.ಸಂತೋಷ್, ಡಿ.ಜಿ.ವಿಶ್ವನಾಥ, ಕೆ.ಜಿ.ಸುರೇಶ, ವೈ.ರಂಗಪ್ಪ, ಎಚ್.ಬಿ. ಭೂಮೇಶ್ವರಪ್ಪ, ರಾಜನಹಳ್ಳಿ ಲಕ್ಷ್ಮಣ ಶೆಟ್ಟಿ ಪ್ರಭಾಕರ, ಸೈಜದ ಸಲೀಂ ಸೈಯದ್, ಬಿ.ಕೆ.ಶಿವಕುಮಾರ, ವಿ.ಮಂಜುನಾಥ, ಕೆ.ಎಚ್.ಷಣ್ಮುಖಪ್ಪ, ಎಚ್.ಆರ್. ಸಿದ್ದೇಶ, ಕೆ.ಎಚ್. ಮಹೇಶ, ಎಸ್.ದೀಪಕ್ ಪಟೇಲ್, ಎಸ್.ಜಿ. ಸತೀಶ ಭಾಗವಹಿಸುವರು ಎಂದರು.ಸಹಕಾರಿಗಳಾದ ಎಂ.ಜಿ. ಷಣ್ಮುಖಪ್ಪ, ಎನ್.ಎಸ್. ನಿರ್ಮಲ ಸುಭಾಷ್, ಈ.ಬಸವರಾಜ, ಟಿ.ಎಂ. ಪಾಲಾಕ್ಷ, ಆರ್.ಶ್ರೀನಿವಾಸ, ಎಚ್.ಮೃತ್ಯುಂಜಯಪ್ಪ, ಸಿ.ವೆಂಕಟೇಶ ನಾಯ್ಕ, ಪ್ರಶಾಂತ ವಿ. ವರ್ಣೇಕರ್, ಡಿ.ಎನ್.ಜಗದೀಶ, ಬಿ.ರಮೇಶ, ಆರ್.ವೆಂಕಟ ರೆಡ್ಡಿ, ಮಂಜಪ್ಪ ಫ.ಹಿತ್ತಲಮನಿ, ಕೆ.ಸಿ.ಕುಮಾರ ಸ್ವಾಮಿ, ಕೆ.ಹೇಮಂತಕುಮಾರ. ಸಹಕಾರ ಸಂಘಗಳ ಉಪ ನಿಬಂಧಕ ಟಿ. ಮಧು ಶ್ರೀನಿವಾಸ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪ ನಿರ್ದೇಶಕ ಡಾ. ಕೆ.ಮಹೇಶ್ವರಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಿ.ಗೋಪಾಲ, ನಬಾರ್ಡ್ ಡಿಡಿಎಂ ಎಂ.ಎಸ್.ರಶ್ಮಿ ರೇಖಾ, ವಿ.ಹರೀಶಕುಮಾರ್, ಎನ್.ಎಸ್. ವಿನಯಕುಮಾರ, ಜಿ.ಟಿ. ಪ್ರದೀಪ್‌ಕುಮಾರ ಭಾಗವಹಿಸುವರು ಎಂದು ವಿವರಿಸಿದರು.
ಕಾರ್ಯದಕ್ಷತೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಹೆಚ್ಚಿಸಲು ಡಿಜಿಟಲೀಕರಣವನ್ನು ಪ್ರೋತ್ಸಾಹಿಸುವುದು ಎನ್ನುವ ಸಹಕಾರ ಸಪಾಹದ ವಿಷಯ ಕುರಿತು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ, ವಿಷಯ ತಜ್ಞ ಡಾ. ಎಚ್.ಎಸ್.ಮಂಜುನಾಥ್ ಮಾಹಿತಿ ನೀಡಲಿದ್ದಾರೆ ಎಂದು ಸಿರಿಗೆರೆ ರಾಜಣ್ಣ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ನಿಯಮಿತ ನಿರ್ದೇಶಕರಾದ ಆರ್.ಜಿ.ಶ್ರೀನಿವಾಸಮೂರ್ತಿ, ಎಚ್.ಆರ್.ಸಿದ್ದೇಶ, ಸಿಇಒ ಕೆ.ಎಚ್. ಸಂತೋಷಕುಮಾರ, ವ್ಯವಸ್ಥಾಪಕ ಕೆ.ಎಂ.ಜಗದೀಶ ಕುರುಡಿಮಠ, ವಿ.ರಂಗನಾಥ ಇದ್ದರು.
- - --12ಕೆಡಿವಿಜಿ3.ಜೆಪಿಜಿ:
ದಾವಣಗೆರೆಯಲ್ಲಿ ಬುಧವಾರ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಅಧ್ಯಕ್ಷ ಸಿರಿಗೆರೆ ರಾಜಣ್ಣ ಸುದ್ದಿಗೋಷದ್ಠಿಯಲ್ಲಿ ಮಾತನಾಡಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))