ಜಾಲಿಗೆ ಗ್ರಾಪಂಯಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆ

| Published : Aug 16 2024, 12:52 AM IST

ಸಾರಾಂಶ

ತಾಲೂಕಿನ ಜಾಲಿಗೆ ಗ್ರಾಮ ಪಂಚಾಯತಿಯಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಎಸ್.ಎಂ. ಆನಂದ್ ಕುಮಾರ್ ಮಾತನಾಡಿ, ಇಂದು ೭೮ನೇ ಸ್ವಾತಂತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ

ಕುಂದಾಣ: ತಾಲೂಕಿನ ಜಾಲಿಗೆ ಗ್ರಾಮ ಪಂಚಾಯತಿಯಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಎಸ್.ಎಂ. ಆನಂದ್ ಕುಮಾರ್ ಮಾತನಾಡಿ, ಇಂದು ೭೮ನೇ ಸ್ವಾತಂತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ ೧೫ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ವಿಮೋಚನೆ ಪಡೆಯಲು ಸ್ವಾತಂತ್ರ್ಯಕ್ಕಾಗಿ ೧೮೫೭ ರಿಂದ ೧೯೪೭ ರವರೆಗೂ ನಿರಂತರ ಹೋರಾಟ ಮಾಡಲಾಗಿದೆ. ಈ ದಿನ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಪ್ರಾಣತೆತ್ತ ಎಲ್ಲ ಸ್ವಾತಂತ್ರ್ಯ ವೀರರಿಗೆ ನಮನ ಸಲ್ಲಿಸುವ ಮೂಲಕ ಅವರನ್ನು ನೆನೆಯಲಾಗುತ್ತದೆ.

ಈಗ ನಾವು ಸ್ವಾತಂತ್ರ್ಯವೆಂಬ ಹೆಮ್ಮರದ ಫಲದ ಸಿಹಿಯನ್ನು ಅನಭವಿಸುತ್ತಿದ್ದೇವೆ. ಆದರೆ ನಮಗೆ ಈ ಹಣ್ಣನ್ನು ನೀಡುವಲ್ಲಿ ಅದೆಷ್ಟು ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಹೀಗಾಗಿ ಅವರ ತ್ಯಾಗವನ್ನು ಎಂದೂ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು.

ಜಾಲಿಗೆ ಗ್ರಾಪಂ ಉಪಾಧ್ಯಕ್ಷೆ ಕೆ. ಭವ್ಯ. ಸದಸ್ಯರಾದ ಮಹೇಶ್ ಕುಮಾರ್ ,ಕೆಂಪರಾಜು,ಅಪ್ಪಯ್ಯ,ರಾಧಮ್ಮ ,ಮಂಜುಳಾ ,ಶೋಭಾ, ಗೋಪಿ , ಗ್ರಾಪಂ ಮಾಜಿ ಅಧ್ಯಕ್ಷ ಶ್ರೀ ರಾಮಣ್ಣ, ಪಿಡಿಒ ಪ್ರಕಾಶ್, ಕಾರ್ಯದರ್ಶಿ ನರಸಿಂಹಮೂರ್ತಿ ಸೇರಿ ಪಂಚಾಯತಿ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತಿತರರು ಇದ್ದರು.